ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದು

Gavaskar selects Indias team combination for the WTC final

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಟೀಮ್ ಇಂಡಿಯಾ ಕೂಡ ಅಷ್ಟೇ ಸಮರ್ಥವಾಗಿದೆ. ಆದರೆ ಈ ಸಂದರ್ಭದಲ್ಲಿ ಭಾರತದ ಕಾಂಬಿನೇಶನ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆರ್‌ ಅಶ್ವಿನ್ ಹಾಗೂ ಜಡೇಜಾ ಅವರನ್ನು ಕಣಕ್ಕಿಳಿಸುವ ಮೂಲಕ ಇಬ್ಬರು ಸ್ಪಿನ್ನರ್ ಮೂವರು ವೇಗಿಗಳೊಂದಿ್ಎ ಕಣಕ್ಕಿಳಿಬೇಕಾ? ಅಥವಾ ಹೆಚ್ಚುವರಿ ಬ್ಯಾಟ್ಸ್‌ಮನ್ ಹನುಮ ವಿಹಾರಿಯನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಬೇಕಾ? ಅಥವಾ ಇಂಗ್ಲೆಂಡ್ ಪಿಚ್ ಆಗಿರುವ ಕಾರಣ ನಾಲ್ಕು ವೇಗಿ ಓರ್ವ ಸ್ಪಿನ್ನರ್‌ನನ್ನು ಕಣಕ್ಕಿಳಿಸಬೇಕಾ? ಈ ಎಲ್ಲಾ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಆದರೆ ಈ ಕಷ್ಟದ ಪ್ರಶ್ನೆಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸುಲಭದ ಪರಿಹಾರವನ್ನು ನೀಡಿದ್ದಾರೆ. ಈ ಸವಾಲು ಕಠಿಣವೇನಲ್ಲ ಎಂದು ಭಾರತ ತನ್ನ ಬ್ಯಾಟಿಂಗ್ ಬೌಲಿಂಗ್ ಎರಡೂ ವಿಭಾಗಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.

WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!

ಸುನಿಲ್ ಗವಾಸ್ಕರ್ ಅವರ ಅಭಿಪ್ರಾಯದ ಪ್ರಕಾರ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆರ್‌ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರನ್ನೂ ಕಣಕ್ಕಿಳಿಬೇಕು ಎಂದಿದ್ದಾರೆ. ಈ ಇಬ್ಬರು ಆಟಗಾರರು ಬೌಲಿಂಗ್ ವಿಭಾಗದಲ್ಲಿ ಬಲ ನೀಡುವುದಲ್ಲದೆ ಭಾರತದ ಬ್ಯಾಟಿಂಗ್‌ನ ಆಳವನ್ನು ಕೂಡ ಬಲಿಷ್ಠಗೊಳಿಸಬಲ್ಲರು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

"ಅಶ್ವಿನ್ ಹಾಗೂ ಜಡೇಜಾ ಜೊತೆಯಾಗಿ ಕಣಕ್ಕಿಳಿಯುವುದರಿಂದ ಬ್ಯಾಟಿಂಗ್‌ಗೆ ಕೂಡ ಉತ್ತಮ ಬಲ ದೊರೆಯುತ್ತದೆ. ಜೊತೆಗೆ ಬೌಲಿಂಗ್‌ ವಿಭಾಗಕ್ಕೂ ಉತ್ತಮ ಸಂಯೋಜನೆಯನ್ನು ನೀಡುತ್ತದೆ. ಇಂಗ್ಲೆಂಡ್ ವಿರುದ್ಧದ ಮುಂದಿನ ಸರಣಿಗೆ ಇದು ಪರಿಸ್ಥಿತಿ ಹಾಗೂ ವಾತಾವರಣವನ್ನು ಅವರಂಬಿಸಿ ಇರುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.

ಇನ್ನು ಈ ಇಂಗ್ಲೆಂಡ್ ಪ್ರವಾಸದಲ್ಲಿ ಆರ್ ಅಶ್ವಿನ್ ಅನುಭವ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡಬಲ್ಲದು ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ. ಜೊತೆಗೆ ಮಾಜಿ ಕ್ರಿಕೆಟಿಗ ಸರ್ವಪ್ಪಲ್ಲಿ ಪ್ರಸನ್ನ ಹಾಗೂ ಹರ್ಭಜನ್ ಸಿಂಗ್ ರೀತಿಯಲ್ಲಿಯೇ ಅದ್ಭುತವಾದ ಅನುಭವವನ್ನು ಹೊಂದಿರುವಂತೆ ಭಾಸವಾಗುತ್ತಾರೆ ಎಂದು ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Thursday, June 17, 2021, 8:48 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X