ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್, ಐಸಿಎಲ್, ಬಿಗ್ ಬ್ಯಾಷ್ ನಂತರ ಎಂಸಿಎಲ್

By Mahesh

ದುಬೈ, ಜೂ.3: ಐಪಿಎಲ್, ಐಸಿಎಲ್ ಹಾಗೂ ಬಿಗ್ ಬ್ಯಾಷ್, ಕೆರಬಿಯನ್ ಲೀಗ್ ನಂತರ ಮತ್ತೊಂದು ಟಿ20 ಸಮರ ಆರಂಭವಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ಹಾಲಿ ಹಾಗೂ ಮಾಜಿ ಕ್ರಿಕೆಟ್ ತಾರೆಗಳು ಈ ಟ್ವೆಂಟಿ20 ಕದನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಸ್ಟರ್ ಕ್ರಿಕೆಟ್ ಲೀಗ್(ಎಂಸಿಎಲ್) ನ ಲೋಗೋ ಬುಧವಾರ ಅನಾವರಣಗೊಂಡಿದೆ.

ದುಬೈನಲ್ಲಿ ಎಂಸಿಎಲ್ ಲೋಗೋ ಅನಾವರಣಗೊಂಡಿದ್ದು, ಈ ಟೂರ್ನಿಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಡೀನ್ ಜೋನ್ಸ್ ಅವರ ಕಂಪನಿ ಹಾಗೂ ಜಿಎಂ ಸ್ಫೋರ್ಟ್ಸ್ ಆಯೋಜಿಸುತ್ತಿದೆ. [ಸಚಿನ್ -ವಾರ್ನ್ ಜೋಡಿಯಿಂದ ಆಲ್ ಸ್ಟಾರ್ ಟಿ20 ಲೀಗ್!]

Masters Champions League

ಮುಂದಿನ ಹತ್ತು ವರ್ಷಕ್ಕೆ ಟೂರ್ನಿಯ ವಿನ್ಯಾಸ ಹಾಗೂ ಆಯೋಜನೆಯ ಯೋಜನೆ ಹಾಕಿಕೊಳ್ಳಲಾಗಿದೆ. ಇದೆಲ್ಲವೂ ಯುಎಇಯಲ್ಲೇ ನಡೆಯಲಿದೆ. ಟಿ20 ಮಾದರಿ ಕ್ರಿಕೆಟ್ ನಲ್ಲಿ ಕ್ರಿಕೆಟ್ ನ ದಿಗ್ಗಜರ ಜೊತೆಗೆ ಯುವ ಆಟಗಾರರು ಆಡಲಿದ್ದಾರೆ. [ಐಪಿಎಲ್ 8 ವಿಶೇಷ]

ಲಭ್ಯ ಮಾಹಿತಿ ಪ್ರಕಾರ ಬ್ರಿಯಾನ್ ಲಾರಾ, ಆಡಂ ಗಿಲ್ ಕ್ರಿಸ್ಟ್ , ಅಲಾನ್ ಬಾರ್ಡರ್, ರಮೀಜ್ ರಾಜಾ ಅವರು ಮತ್ತೊಮ್ಮೆ ಬ್ಯಾಟ್ ಬೀಸಲಿದ್ದಾರೆ. ಮಾಸ್ಟರ್ ಕ್ರಿಕೆಟ್ ಲೀಗ್ ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಅನುಮತಿ ನೀಡಿರುವುದರಿಂದ ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಾನ್ಯತೆ ಪಡೆಯಲಿದ್ದು, ಅಧಿಕೃತ ಟಿ20 ಲೀಗ್ ಎನಿಸಲಿದೆ. [ಸಚಿನ್- ವಾರ್ನ್ ಲೀಗ್ ಗೆ ಐಸಿಸಿ ಮಾನ್ಯತೆ]

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X