ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್‌ಗೆ ರಾಕ್‌ಸ್ಟಾರ್ಸ್‌ ತಂಡ ಮರಳುವ ಸುಳಿವು ಕೊಟ್ಟ ಕಿಚ್ಚ ಸುದೀಪ್‌

sudeep veda krishnamurthy and bs chandrashekar

ಬೆಂಗಳೂರು, ಆಗಸ್ಟ್‌ 13: ಮುಂಬರುವ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಕಲ್ಪಿಸಿದರೆ ಮತ್ತೆ ವರ್ಣರಂಜಿತ ಲೀಗ್‌ಗೆ ಮರಳುವುದಾಗಿ ನಟ ಹಾಗೂ ರಾಕ್‌ಸ್ಟಾರ್ಸ್ ತಂಡದ ನಾಯಕ ಸುದೀಪ್ ಸುಳಿವು ನೀಡಿದ್ದಾರೆ.

ಕರ್ನಾಟಕ ಪ್ರೀಮಿಯರ್‌ ಲೀಗ್‌ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆಕರ್ನಾಟಕ ಪ್ರೀಮಿಯರ್‌ ಲೀಗ್‌ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆ

ರಾಜ್ಯ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ಮಂಗಳವಾರ ನಡೆದ 8ನೇ ಆವೃತ್ತಿಯ ಕೆಪಿಎಲ್ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, "ಒಂದು ವೇಳೆ ಕೆಎಸ್‌ಸಿಎ ಪದಾಧಿಕಾರಿಗಳು ಮುಂದಿನ ಆವೃತ್ತಿಯಲ್ಲಿ ಅವಕಾಶ ನೀಡಿದರೆ ಖಂಡಿತವಾಗಿಯೂ ರಾಕ್ ಸಾರ್ಸ್ ತಂಡ ಲೀಗ್‌ಗೆ ಮರಳವುದನ್ನು ಎದುರು ನೋಡುತ್ತಿದೆ," ಎಂದರು.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

"ವೃತ್ತಿಪರ ಕ್ರಿಕೆಟಿಗರನ್ನು ದೂರದಿಂದ ನೋಡುತ್ತಿದ್ದ ನಾವು ಕೆಪಿಎಲ್ ಮೂಲಕ ಕರುನಾಡಿನ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಸಿಕೊಳ್ಳಲು ಮತ್ತು ಅವರೊಂದಿಗೆ ಆಟವಾಡಲು ಕೆಪಿಎಲ್‌ ಅವಕಾಶ ಕಲ್ಪಿಸಿತು. ಇದು ನಮಗೆ ಸಿಕ್ಕ ಅತಿದೊಡ್ಡ ಗೌರವ," ಎಂದು 2015ರಿಂದ 2017ರವರೆಗೆ ಕೆಪಿಎಲ್‌ನಲ್ಲಿ ರಾಕ್‌ ಸ್ಟಾರ್ಸ್ ತಂಡವನ್ನು ಮುನ್ನಡೆಸಿದ್ದ ಸುದೀಪ್ ತಮ್ಮ ನೆನಪಿನ ಬುತ್ತಿ ತೆರೆದಿಟ್ಟರು.

ಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XIಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XI

ಜಾದೂ ಮೂಲಕ ಟ್ರೋಫಿ ಅನಾವರಣ
ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿಯ ಕೆಪಿಎಲ್ ಟ್ರೋಫಿ ಅನಾವರಣ ಸಂಪೂರ್ಣ ಭಿನ್ನವಾಗಿತ್ತು. ಜಾದೂಗಾರ ಆಕಾಶ್, ಕೆಪಿಎಲ್ 8ನೇ ಆವೃತ್ತಿಯ ಟ್ರೋಫಿ ಅನಾವರಣಗೊಳಿಸಿದರು. ತಮ್ಮ ಜಾದೂವಿನಿಂದ ಮೋಡಿ ಮಾಡುವ ಮೂಲಕ ನೆರದಿದ್ದವರನ್ನು ವಿಸ್ಮಿತರನ್ನಾಗಿಸಿದರು. ಕಾಲಿಯಿದ್ದ ಚೌಕಾಕಾರದ ಬಾಕ್ಸ್‌ನಲ್ಲಿ ಭಾರತ ಮಹಿಳಾ ತಂಡದ ಸದಸ್ಯೆ ವೇದಾ ಕೃಷ್ಣಮೂರ್ತಿ ಟ್ರೋಫಿಯೊಂದಿಗೆ ಕಾಣಿಸಿಕೊಳ್ಳುವುದರೊಂದಿಗೆ ಎಲ್ಲರ ಗಮನ ಸೆಳೆದರು. ಮಾಜಿ ಆಟಗಾರರಾದ ಬಿ.ಎಸ್. ಚಂದ್ರಶೇಖರ್, ಜಿ.ಆರ್ ವಿಶ್ವನಾಥ್, ಕೆಎಸ್‌ಸಿಎ ಪದಾಧಿಕಾರಿಗಳು ಮತ್ತು ಲೀಗ್‌ನ ಫ್ರಾಂಚೈಸಿ ಮಾಲೀಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹುಬ್ಬಳಿ ಪಂದ್ಯಗಳು ಬೆಂಗಳೂರು, ಮೈಸೂರಿಗೆ ವರ್ಗ

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಎದುರಾಗಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿಯ ರಾಜಾನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ 2019ರ ಕನರ್ನಾಟಕ ಪ್ರೀಮಿಯರ್‌ ಲೀಗ್‌ನ ಪಂದ್ಯಗಳನ್ನು ಬೆಂಗಳೂರು ಮತ್ತು ಮೈಸೂರಿಗೆ ವರ್ಗಾಯಿಸಿ ಹೊಸದಾಗಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೊದಲಿಗೆ ಸೆಪ್ಟೆಂಬರ್‌ 1ರಂದು ಫೈನಲ್‌ ನಿರ್ಧರಿಸಲಾಗಿತ್ತು. ಇದೀಗ ಆಗಸ್ಟ್‌ 30ರಂದು ಫೈನಲ್‌ ನಿಗದಿ ಪಡಿಸಲಾಗಿದೆ.

Story first published: Tuesday, August 13, 2019, 19:27 [IST]
Other articles published on Aug 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X