ಭಾರತೀಯ ಮೂಲದ ಗೆಳತಿಯ ಜೊತೆ ಗ್ಲೆನ್ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ

World T20 : Pakistani legend Inzamam-ul-Haq praises Afghanistan players

ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಭಾರತಿಯ ಮೂಲದ ವಿನಿ ರಾಮನ್ ಅವರನ್ನು ಗ್ಲೆನ್ ಮ್ಯಾಕ್ಸ್‌ವೆಲ್ ವರಿಸಲಿದ್ದಾರೆ. ಇಂದು ಈ ಜೋಡಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು ಈ ಬಗ್ಗೆ ಸ್ವತಃ ಗ್ಲೆನ್ ಮ್ಯಾಕ್ಸ್‌ವೆಲ್ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

View this post on Instagram

💍

A post shared by Glenn Maxwell (@gmaxi_32) on

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಹಲವು ವರ್ಷಗಳಿಂದ ಜೊತೆಯಾಗಿ ಸುತ್ತುತ್ತಿದ್ದರು. ಆದರೆ ಮದುವೆಯ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನೀಡಿರಲಿಲ್ಲ. ಆದರೆ ಇಂದು ಈ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ಮ್ಯಾಕ್ಸ್‌ವೆಲ್ ಜೋಡಿ ಉತ್ತರವನ್ನು ನೀಡಿದೆ.

'ಪೋಸ್ ಕೊಟ್ಟಿದ್ದು ಸಾಕು ಕ್ರಿಕೆಟ್ ಆಡಿ': ಭಾರತೀಯ ಕ್ರಿಕೆಟಿಗರಿಗೆ ಬಿಸಿ ಮುಟ್ಟಿಸಿದ್ಯಾರು?

ಇನ್ಸ್ಟಾಗ್ರಾಂನಲ್ಲಿ ನಿರಂತರವಾಗಿ ಡೇಟಿಂಗ್ ಫೋಟೋಗಳನ್ನು ಮ್ಯಾಕ್ಸ್‌ವೆಲ್ ಹಂಚಿಕೊಳ್ಳುತ್ತಿದ್ದಾಗಲೇ ಈ ಜೋಡಿ ಪ್ರೇಮದ ಬಲೆಯಲ್ಲಿ ಬಿದ್ದಿರುವುದು ಸ್ಪಷ್ಟವಾಗಿತ್ತು. ಆದರೆ ಇದನ್ನು ಮ್ಯಾಕ್ಸ್‌ವೆಲ್ ಆಗಲಿ ವಿನಿ ರಾಮನ್ ಆಗಲಿ ಅಧಿಕೃತಗೊಳಿಸಿರಲಿಲ್ಲ. ಆದರೆ ಇಂದು ಉಂಗುರ ತೊಟ್ಟ ಬೆರಳನ್ನು ತೋರಿಸುತ್ತಾ ಫೋಸ್ ಕೊಟ್ಟು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ವಿನಿ ರಾಮನ್ ಮತ್ತು ಮ್ಯಾಕ್ಸ್‌ವೆಲ್ 2017ರಲ್ಲಿ ಭೇಟಿಯಾಗಿದ್ದರು. ಬಳಿಕ ನಿರಂತರವಾಗಿ ಈ ಜೋಡಿ ಡೇಟಿಂಗ್‌ನಲ್ಲಿ ತೊಡಗಿಸಿಕೊಂಡಿತ್ತು. ಕಳೆದ ವರ್ಷ ನಡೆದ ಆಸ್ಟ್ರೆಲಿಯಾ ಕ್ರಿಕೆಟ್ ಅವಾರ್ಡ್ ಫಂಕ್ಷನ್‌ಗೆ ಮ್ಯಾಕ್ಸ್‌ವೆಲ್ ವಿನಿ ರಾಮನ್ ಜೊತೆಯಾಗಿ ಪಾಲ್ಗೊಂಡಿದ್ದಾಗ ಮದುವೆಯಾಗುತ್ತಿರುವುದು ಬಹುತೇಕ ಖಚಿತವಾಗಿತ್ತು.

ನ್ಯೂಜಿಲೆಂಡ್ ಟೆಸ್ಟ್ ಬಿಟ್ಟು ಟಿಕ್‌ಟಾಕ್‌ಗೆ ಬಂದ ರೋಹಿತ್, ಖಲೀಲ್, ಚಾಹಲ್

ಈ ಮೂಲಕ ಗ್ಕೆನ್ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ಯುವತಿಯನ್ನು ವರಿಸಲಿರುವ ಎರಡನೇ ಆಟಗಾರನಾಗಲಿದ್ದಾರೆ. ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ಕೂಡ ಭಾರತೀಯ ಮೂಲದ ಮಶ್ರೂಮ್ ಸಿಂಘಾವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, February 26, 2020, 18:14 [IST]
Other articles published on Feb 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X