ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಮುಂದಿಟ್ಟು ಕೆಎಲ್ ರಾಹುಲ್ ಟ್ರೋಲ್

Glenn Maxwell Apologised to KL Rahul for his form after flop show for KXIP in IPL

ಸಿಡ್ನಿ: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಾನು ಬಲಿಷ್ಠ ಬ್ಯಾಟ್ಸ್‌ಮನ್‌ ಅನ್ನೋದನ್ನು ಶುಕ್ರವಾರ ಮತ್ತೆ ತೋರಿಸಿಕೊಟ್ಟಿದ್ದಾರೆ. ಭಾರತ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿದ್ದರು. ಮ್ಯಾಕ್ಸ್‌ವೆಲ್ ಈ ಬ್ಯಾಟಿಂಗ್ ಬಳಿಕ ಭಾರತದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಟ್ರೋಲ್‌ಗೀಡಾಗಿದ್ದಾರೆ.

'ಹ್ಯಾಂಡ್ ಆಫ್ ಗಾಡ್' ಶರ್ಟ್ ನಿಮ್ಮದಾಗಬಹುದು, ಬೆಲೆಯೆಷ್ಟು ಗೊತ್ತಾ?!'ಹ್ಯಾಂಡ್ ಆಫ್ ಗಾಡ್' ಶರ್ಟ್ ನಿಮ್ಮದಾಗಬಹುದು, ಬೆಲೆಯೆಷ್ಟು ಗೊತ್ತಾ?!

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 69, ಆ್ಯರನ್ ಫಿಂಚ್ 114, ಸ್ಟೀವ್ ಸ್ಮಿತ್ 105, ಗ್ಲೆನ್ ಮ್ಯಾಕ್ಸ್‌ವೆಲ್ 45 ರನ್ ಕೊಡುಗೆ ಗಣನೀಯವೆನಿಸಿತ್ತು. ಪರಿಣಾಮ ಕಾಂಗರೂ ಪಡೆ ಪ್ರವಾಸಿ ಭಾರತದ ವಿರುದ್ಧ 66 ರನ್‌ಗಳ ಜಯ ಕಂಡಿತ್ತು.

ಭಾರತ vs ಆಸ್ಟ್ರೇಲಿಯಾ: ಆಲ್ ರೌಂಡರ್ ಮಾರ್ಕಸ್‌ ಸ್ಟೋಯ್ನಿಸ್‌ಗೆ ಗಾಯಭಾರತ vs ಆಸ್ಟ್ರೇಲಿಯಾ: ಆಲ್ ರೌಂಡರ್ ಮಾರ್ಕಸ್‌ ಸ್ಟೋಯ್ನಿಸ್‌ಗೆ ಗಾಯ

ಪಂದ್ಯ ಮುಗಿಯುತ್ತಲೇ ಮ್ಯಾಕ್ಸ್‌ವೆಲ್ ಫಾರ್ಮ್ ಮುಂದಿಟ್ಟುಕೊಂಡು ಕೆಎಲ್ ರಾಹುಲ್ ಅವರನ್ನು ನೆಟ್ಟಿಗರು ತಮಾಷೆ ಮಾಡಲು ಆರಂಭಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವೆನ್ ಪಂಜಾಬ್ ನಲ್ಲಿ ಬಹಳಷ್ಟು ಅವಕಾಶ ನೀಡಿದ್ದರೂ ಮ್ಯಾಕ್ಸ್‌ವೆಲ್ ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ್ದೇ ರಾಹುಲ್ ಅವರನ್ನು ಈಗ ಟ್ರೋಲ್ ಮಾಡಿದ್ದಕ್ಕೆ ಕಾರಣ.

ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಬಳಿಕ ರಾಹುಲ್ ಟ್ರೋಲ್‌ಗೀಡಾಗಿದ್ದ ಟ್ವೀಟನ್ನು ಮುಂದಿಟ್ಟು ಕಿಂಗ್ಸ್ XI ಪಂಜಾಬ್‌ ತಂಡದ ಮತ್ತೊಬ್ಬ ಬ್ಯಾಟ್ಸ್‌ಮನ್, ನ್ಯೂಜಿಲೆಂಡ್‌ನ ಜೇಮ್ಸ್ ನೀಶಮ್ ಕೂಡ ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್, 'ಬ್ಯಾಟಿಂಗ್ ಮಾಡುವಾಗ ನಾನಿದಕ್ಕೆ ರಾಹುಲ್‌ನಲ್ಲಿ ಕ್ಷಮೆ ಕೇಳಿದ್ದೆ' ಎಂದು ಬರೆದುಕೊಂಡು ಕೊನೆಗೊಂದು ಹಲ್ಲು ಕಿಸಿಯುವ ಇಮೋಜಿ ಸೇರಿಕೊಂಡಿದ್ದಾರೆ.

Story first published: Saturday, November 28, 2020, 14:20 [IST]
Other articles published on Nov 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X