ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರ್‌ಸಿಬಿಯನ್ನು ಕೂಡಿಕೊಳ್ಳಲು ಭಾರತಕ್ಕೆ ಬಂದಿಳಿದ ಮ್ಯಾಕ್ಸ್‌ವೆಲ್

Glenn Maxwell Joins RCB for IPL 2021

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ಆರ್‌ಸಿಬಿ ತಂಡಕ್ಕೆ ಈ ಬಾರಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸಿಸ್ ಸ್ಪೋಟಕ ಬ್ಯಾಟ್ಸ್‌ಮನ್ ಈಗ ಭಾರತವನ್ನು ತಲುಪಿದ್ದು ಆರ್‌ಸಿಬಿ ಶಿಬಿರದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ಆರ್‌ಸಿಬಿ ತಂಡದ ಶಿಬಿರದಲ್ಲಿ ಪಾಳ್ಗೊಳ್ಳುವ ಮುನ್ನ ಒಂದು ವಾರಗಳ ಕಡ್ಡಾಯ ಕ್ವಾರಂಟೈನ್‌ಅನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಚೆನ್ನೈನಲ್ಲಿ ಪೂರೈಸಲಿದ್ದಾರೆ. ಬಳಿಕ ಕೋವಿಡ್ ಮಾರ್ಗಸೂಚಿಯಂತೆ ಪರೀಕ್ಷೆಗೆ ಒಳಪಟ್ಟು ಆರ್‌ಸಿಬಿ ತಂಡದ ಬಯೋಬಬಲ್‌ಅನ್ನು ಸೇರಿಕೊಳ್ಳಲಿದ್ದಾರೆ.

ಐಪಿಎಲ್ 2021: ಧೋನಿ ವಿಶೇಷ ಸಾಮರ್ಥ್ಯದ ಬಗ್ಗೆ ಹೇಳಿಕೆ ನೀಡಿದ ಕೆ ಗೌತಮ್ಐಪಿಎಲ್ 2021: ಧೋನಿ ವಿಶೇಷ ಸಾಮರ್ಥ್ಯದ ಬಗ್ಗೆ ಹೇಳಿಕೆ ನೀಡಿದ ಕೆ ಗೌತಮ್

ಕಡ್ಡಾಯ ಕ್ವಾರಂಟೈನ್ ನಿಯಮ

ಕಡ್ಡಾಯ ಕ್ವಾರಂಟೈನ್ ನಿಯಮ

ಐಪಿಎಲ್ 14ನೇ ಆವೃತ್ತಿಗೆ ಸಿದ್ಧಪಡಿಸಿದ ಎಸ್‌ಒಪಿ ಪ್ರಕಾರ ಭಾರತ-ಇಂಗ್ಲೆಂಡ್ ಸರಣಿಯ ಬಯೋಬಬಲ್‌ನಂದ ನೇರವಾಗಿ ಐಪಿಎಲ್ ಬಬಲ್‌ಗೆ ಸೇರಿಕೊಂಡ ಆಟಗಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.

ಕ್ವಾರಂಟೈನ್ ಬಳಿಕ ಹೊರಾಂಗಣ ಅಭ್ಯಾಸ

ಕ್ವಾರಂಟೈನ್ ಬಳಿಕ ಹೊರಾಂಗಣ ಅಭ್ಯಾಸ

ಇನ್ನು ಈ ಕ್ವಾರಂಟೈನ್ ಸಂದರ್ಭದಲ್ಲಿ ಪ್ರತಿ ಆಟಗಾರ ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದು ನೆಗೆಟಿವ್ ವರದಿಯನ್ನು ಪಡೆದುಕೊಂಡು ಬಳಿಕ ತಂಡದ ಬಯೋಬಬಲ್ ಪ್ರವೇಶಿಸಬೇಕಿದೆ. ಬಳಿಕವೇ ಈ ಆಟಗಾರರಿಗೆ ಹೊರಾಂಗಣ ಅಭ್ಯಾಸ ಹಾಗೂ ನೆಟ್ ತಾಲೀಮಿನಲ್ಲಿ ಭಾಗಿಯಾಗುವ ಅವಕಾಶವಿದೆ.

ಮುಂಬೈ ವಿರುದ್ಧ ಮೊದಲ ಸೆಣೆಸಾಟ

ಮುಂಬೈ ವಿರುದ್ಧ ಮೊದಲ ಸೆಣೆಸಾಟ

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಡಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೊದಲ ಸವಾಲನ್ನು ಒಡ್ಡಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲ ಪಂದ್ಯ ಏಪ್ರಿಲ್ 9ರಂದು ಚೆನ್ನೈನಲ್ಲಿ ನಡೆಲಿದೆ.

Story first published: Tuesday, March 30, 2021, 16:33 [IST]
Other articles published on Mar 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X