ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಅನ್ನು ಮಿನಿ ವಿಶ್ವಕಪ್ ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್ ಮ್ಯಾಕ್ಸ್‌ವೆಲ್

Glenn Maxwell Likens Ipl To Mini World Cup, Says It’s A ‘Hell Of A Kick’

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪೋಟಕ ಆಟಗಾರ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯನ್ನು ಮಿನಿ ವಿಶ್ವಕಪ್ ಎಂದು ಕೊಂಡಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕಳೆದ ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಮ್ಯಾಕ್ಸ್‌ವೆಲ್ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಈ ಬಾರಿಯ ವಿಶ್ವಕಪ್ ಮುಂದೂಡಿಕೆಯಾಗಿದೆ. ಹೀಗಾಗಿ 13ನೇ ಆವೃತ್ತಿಯ ಐಪಿಎಲ್ ನಡೆಸಲು ಬಿಸಿಸಿಐಗೆ ವೇದಿಕೆ ಸಿಕ್ಕಂತಾಗಿದ್ದು ಸೆಪ್ಟೆಂಬರ್-ನವಂಬರ್ ತಿಂಗಳಲ್ಲಿ ಸಿಗುವ ಅವಕಾಶದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆಯನ್ನು ನಡೆಸುತ್ತಿದೆ. ಹೀಗಾಗಿ ಎಲ್ಲ ಕ್ರಿಕೆಟ್ ಪ್ರೇಮಿಗಳ ಚಿತ್ತ ಐಪಿಎಲ್‌ನತ್ತ ನೆಟ್ಟಿದೆ.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಕ್ರಿಕೆಟ್ ಆಡುತ್ತಿರುವ ಇತರ ದೇಶಗಳಿಗೆ ಹೋಲಿಸಿದಲ್ಲಿ ಯುಎಇನಲ್ಲಿ ಕಡಿಮೆ ಪ್ರಕಡಣಗಳು ದಾಖಲಾಗಿದ್ದು ಅಲ್ಲಿಯೇ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನವನ್ನು ಮಾಡಿಕೊಂಡಿದೆ. ಆದರೆ ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಅನುಮತಿಯನ್ನು ಪಡೆದುಕೊಳ್ಳಬೇಕಿದೆ. ಅನುಮತಿ ದೊರೆತ ನಂತರ ಈ ಬಾರಿಯ ಐಪಿಎಲ್ ಆಯೋಜನೆಯ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯಲಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿದ್ದು ಸದ್ಯ ಕಾದು ನೋಡುವ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಬರುವ ತೀರ್ಮಾನಗಳನ್ನು ಗಮನಿಸಿಕೊಂಡು ಕ್ವಾರಂಟೈನ್ ಅವಧಿ, ಪ್ರಯಾಣದ ಬಗೆಗಿನ ವಿಚಾರಗಳು ಏನು ಮಾಡಬಹುದು ಏನು ಮಾಡಬಾರದು ಎಂಬ ಬಗ್ಗೆ ಸಂಪೂರ್ಣ ಚಿತ್ರಣ ದೊರೆತರೆ ನಾನು ಐಪಿಎಲ್‌ನಲ್ಲಿ ಭಾಗವಹಿಸದೇ ಇರಲು ಕಾರಣವೇ ಇಲ್ಲ ಎಂದಿದ್ದಾರೆ.

ಟೆಸ್ಟ್‌ನಲ್ಲಿ 800 ವಿಕೆಟ್: ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆಗೆ 10 ವರ್ಷಟೆಸ್ಟ್‌ನಲ್ಲಿ 800 ವಿಕೆಟ್: ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆಗೆ 10 ವರ್ಷ

ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಪಾಳ್ಗೊಳ್ಳಲು ಪ್ರವಾಸಕ್ಕೆ ತೆರಳಲಿರುವ ತಂಡದ ಪ್ರಾಥಮಿಕ 26 ಆಟಗಾರರ ಪಟ್ಟಿಯಲ್ಲಿ ಮ್ಯಾಕ್ಸ್‌ವೆಲ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಾನಸಿಕ ಆರೋಗ್ಯದ ಕಾರಣವನ್ನು ನೀಡಿ ಮ್ಯಾಕ್ಸ್‌ವೆಲ್ ಈ ಹಿಂದೆ ಕೆಲ ತಿಂಗಳ ಕಾಲ ಕ್ರಿಕೆಟ್‌ನಿಂದ ಸಂಪೂರ್ಣ ದೂರ ಉಳಿದುಕೊಂಡಿದ್ದರು.

Story first published: Thursday, July 23, 2020, 12:09 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X