ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಐಪಿಎಲ್‌ನ 'ಮ್ಯಾನ್ ಆಫ್‌ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್

Glenn Maxwell might just end up being player of the tournament: Michael Vaughan

ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಶುರುವಾಗಿ 10 ದಿನಗಳು ಕಳೆದಾಗಿದೆ. ಈಗಾಗಲೇ 10 ಪಂದ್ಯಗಳು ಕೂಡ ಕಳೆದಿವೆ. ಈವರೆಗಿನ ಫಲಿತಾಂಶಗಳನ್ನು ಗಮನಿಸಿದರೆ ವಿರಾಟ್ ಕೊಹ್ಲಿ ನಾಯಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಚ್ಚು ಬಲಶಾಲಿ ತಂಡವಾಗಿ ಕಾಣಿಸಿದೆ. ಆರ್‌ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!

ಏಪ್ರಿಲ್ 9ರಿಂದ ಆರಂಭಗೊಂಡಿರುವ ಐಪಿಎಲ್ ಮೇ 30ರವರೆಗೂ ಮುಂದುವರೆಯಲಿದೆ. ಪ್ರತೀ ತಂಡಗಳಿಗೂ ತಲಾ 14 ಪಂದ್ಯಗಳು ನಡೆಯಲಿರುವುದರಿಂದ ಚಾಂಪಿಯನ್ಸ್ ತಂಡವನ್ನಾಗಲಿ, ಪ್ಲೇಯರ್ ಆಫ್‌ ದ ಟೂರ್ನಮೆಂಟ್ ಆಗಲಿ ಈಗಲೇ ಊಹಿಸುವುದು ಕಷ್ಟ.

ಎದುರಾಳಿಗಳನ್ನು ಅತಿಹೆಚ್ಚು ಬಾರಿ ಆಲ್ಔಟ್ ಮಾಡಿರುವ ಐಪಿಎಲ್ ತಂಡಗಳುಎದುರಾಳಿಗಳನ್ನು ಅತಿಹೆಚ್ಚು ಬಾರಿ ಆಲ್ಔಟ್ ಮಾಡಿರುವ ಐಪಿಎಲ್ ತಂಡಗಳು

ಆದರೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟರ್ ಮೈಕಲ್ ವಾನ್ 2021ರ ಐಪಿಎಲ್‌ನಲ್ಲಿ ಟೂರ್ನಿಯ ಶ್ರೇಷ್ಠ ಆಟಗಾರ ಯಾರಾಗುತ್ತಾರೆಂದು ಹೆಸರಿಸಿದ್ದಾರೆ.

ಆರ್‌ಸಿಬಿಯ ಪ್ರಮುಖ ಆಟಗಾರ

ಆರ್‌ಸಿಬಿಯ ಪ್ರಮುಖ ಆಟಗಾರ

ಈ ಐಪಿಎಲ್‌ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಸಾರಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಮ್ಯಾಕ್ಸ್‌ವೆಲ್‌ ಅವರನ್ನು ಪಂಜಾಬ್‌ ಈ ಬಾರಿ ರಿಲೀಸ್ ಮಾಡಿತ್ತು. ಆರ್‌ಸಿಬಿ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ರೂ.ಗೆ ಖರೀದಿಸಿತ್ತು. ಖರೀದಿಗೆ ತಕ್ಹಾಗೆ ಗ್ಲೆನ್ ಆರ್‌ಸಿಬಿಗೆ ಬಲ ತುಂಬುತ್ತಿದ್ದಾರೆ.

ಪ್ಲೇಯರ್ ಆಫ್ ದ ಟೂರ್ನಮೆಂಟ್

ಪ್ಲೇಯರ್ ಆಫ್ ದ ಟೂರ್ನಮೆಂಟ್

ಮ್ಯಾಕ್ಸ್‌ವೆಲ್ ಅವರ ಉತ್ತಮ ಬ್ಯಾಟಿಂಗ್‌ ನೋಡುತ್ತಿರುವ ಮೈಕಲ್ ವಾನ್ ಮೆಚ್ಚುಗೆಯ ಸಾಲುಗಳು ಬರೆದು ಟ್ವೀಟ್ ಮಾಡಿದ್ದಾರೆ. 'ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಮಾಡೋದು ನೋಡೊಕೆ ಖುಷಿಯಾಗುತ್ತದೆ. ಆತ ಪ್ಲೇಯರ್ ಆಫ್‌ ದ ಟೂರ್ನಮೆಂಟ್ ಆಗಿ ಸೀಸನ್ ಮುಗಿಸಬಹುದು. ಅಷ್ಟೇ ಬಲಶಾಲಿ ಆಟಗಾರರಾದ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್‌ನಿಂದ ನಾನು ನೋಡಿದ ತಂಡಗಳಲ್ಲೇ ಆರ್‌ಸಿಬಿ ಅತ್ಯಂತ ಬಲಶಾಲಿ ತಂಡವಾಗಿ ಕಾಣಿಸಿದೆ' ಎಂದು ವಾನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆರೆಂಜ್‌ ಕ್ಯಾಪ್‌ ಯಾದಿಯಲ್ಲಿ ಗ್ಲೆನ್

ಆರೆಂಜ್‌ ಕ್ಯಾಪ್‌ ಯಾದಿಯಲ್ಲಿ ಗ್ಲೆನ್

3 ಪಂದ್ಯಗಳಲ್ಲಿ 176 ರನ್ ಕಲೆ ಹಾಕಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಸದ್ಯ ಅತ್ಯಧಿಕ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಶಿಖರ್ ಧವನ್ (186 ರನ್) ಇದ್ದಾರೆ. ಮ್ಯಾಕ್ಸ್‌ವೆಲ್ ಈ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ 39, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 59, ಪಂಜಾಬ್ ಕಿಂಗ್ಸ್ ವಿರುದ್ಧ 78 ರನ್ ಕೊಡುಗೆ ನೀಡಿದ್ದಾರೆ. ಒಂದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಹೀಗಾಗಿ ಈ ಬಾರಿ ಮ್ಯಾಕ್ಸ್‌ವೆಲ್ ಪ್ಲೇಯರ್ ಆಫ್‌ ದ ಟೂರ್ನಿ ಆದರೂ ಆಗಬಹುದು.

Story first published: Monday, April 19, 2021, 12:45 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X