ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಕ್ಸಿ ಅಬ್ಬರದ ಬ್ಯಾಟಿಂಗ್: 64 ಎಸೆತಗಳಲ್ಲಿ ಅಜೇಯ 154 ರನ್ ಸಿಡಿಸಿದ ಮ್ಯಾಕ್ಸ್‌ವೆಲ್‌

Glenn Maxwell

ಬಿಗ್‌ಬ್ಯಾಶ್ ಲೀಗ್ 2021-22ರ 54ನೇ ಪಂದ್ಯದಲ್ಲಿ ಹೊಬಾರ್ಟ್ ಹರಿಕೇನ್ಸ್ ವಿರುದ್ಧ ಮೆಲ್ಬರ್ನ್ ಸ್ಟಾರ್ಸ್‌ ಕ್ಯಾಪ್ಟನ್ ಮ್ಯಾಕ್ಸ್‌ವೆಲ್ ಅಕ್ಷರಶಃ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಹೊಬಾರ್ಟ್‌ ತಂಡದ ಬೌಲರ್‌ಗಳನ್ನ ನುಚ್ಚುನೂರು ಮಾಡಿದ ಮ್ಯಾಕ್ಸಿ ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ್ದಾರೆ.

ಟಾಸ್‌ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮೆಲ್ಬರ್ನ್ ಸ್ಟಾರ್ಸ್‌ ಓಪನರ್‌ಗಳಾಗಿ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಕೆಟ್ ಕೀಪರ್ ಜೋ ಕ್ಲಾರ್ಕ್ ಕಣಕ್ಕಿಳಿದರು. ಮೊದಲ ವಿಕೆಟ್‌ಗೆ 97ರನ್‌ಗಳ ಜೊತೆಯಾಟವಾಡಿದ ಮ್ಯಾಕ್ಸಿ ಮತ್ತು ಕ್ಲಾರ್ಕ್‌ ತಂಡಕ್ಕೆ ಉತ್ತಮ ಆರಂಭ ನೀಡಿದ್ರು.

ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ಭಾಗವಹಿಸುವ ತಂಡಗಳು ಯಾವುದು?; ಆಟಗಾರರ ಸಂಪೂರ್ಣ ವಿವರಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ಭಾಗವಹಿಸುವ ತಂಡಗಳು ಯಾವುದು?; ಆಟಗಾರರ ಸಂಪೂರ್ಣ ವಿವರ

ಜೋ ಕ್ಲಾರ್ಕ್ 35 ರನ್‌ಗಳಿಸಿ ಔಟಾಗುತ್ತಿದ್ದಂತೆ ಕ್ರೀಸ್‌ಗೆ ಬಂದ ನಿಕ್‌ ಲಾರ್ಕಿ್ನ್ ಕೂಡ 3ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ನಂತರ ಮ್ಯಾಕ್ಸ್‌ವೆಲ್ ಗೆ ಸಾಥ್ ನೀಡಿದ ಮಾರ್ಕಸ್ ಸ್ಟೋಯ್ನಿಸಿ ಮ್ಯಾಕ್ಸಿಗೆ ಸಮನಾಗಿ ಬ್ಯಾಟ್‌ ಬೀಸುವ ಮೂಲಕ ತಂಡಕ್ಕೆ ದಾಖಲೆಯ ಮೊತ್ತ ಒದಗಿಸಿದ್ರು.

ಒಂದು ಬದಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 64 ಎಸೆತಗಳಲ್ಲಿ ಅಜೇಯ 154 ರನ್‌ ಕಲೆಹಾಕುವ ಮೂಲಕ ಅಬ್ಬರದ ಬ್ಯಾಟಿಂಗ್‌ಗೆ ಸಾಕ್ಷಿಯಾದ್ರು. 22 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್‌ನಲ್ಲಿದ್ದವು. 240.62 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಮ್ಯಾಕ್ಸಿ ತನ್ನ ಅಭಿಮಾನಿಗಳಿಗೆ ಸ್ಫೋಟಕ ಬ್ಯಾಟಿಂಗ್‌ನ ಕೊಡುಗೆ ನೀಡಿದ್ರು.

ಎದುರಾಳಿ ಹೊಬಾಟ್ ಹರಿಕೇನ್ಸ್‌ ತಂಡದ ಯಾವೊಬ್ಬ ಬೌಲರ್‌ ಅನ್ನು ಬಿಡದೆ ಚೆಂಡಿಗೆ ಬೌಂಡರಿ ದರ್ಶನ ಮಾಡಿಸಿದ ಮ್ಯಾಕ್ಸ್‌ವೆಲ್ ಮೆಲ್ಬರ್ನ್ ಸ್ಟಾರ್ಸ್ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣಕರ್ತರು. ಎಂಟು ಬೌಲರ್‌ಗಳನ್ನ ಬಳಸಿ ಮ್ಯಾಕ್ಸ್‌ವೆಲ್‌ರನ್ನ ಔಟ್‌ ಮಾಡುವ ಹೊಬಾರ್ಟ್ ಪ್ರಯತ್ನ ವಿಫಲಗೊಂಡಿತು.

ಇನ್ನು ಮ್ಯಾಕ್ಸ್‌ವೆಲ್‌ ಗೆ ಉತ್ತಮ ಸಾಥ್ ನೀಡಿದ ಮಾರ್ಕಸ್ ಸ್ಟೋಯ್ನಿಸ್ 241.94 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುವ ಮೂಲಕ ಮಿಂಚಿದ್ರು. 31 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕಿದ ಸ್ಟೋಯ್ನಿಸ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ಗಳಿದ್ದವು.

ಈ ಇಬ್ಬರು ಆಟಗಾರರ ಅಮೋಘ ಇನ್ನಿಂಗ್ಸ್‌ನಿಂದಾಗಿ ಮೆಲ್ಬರ್ನ್‌ ಸ್ಟಾರ್ಸ್‌ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 273 ರನ್ ಕಲೆಹಾಕಿತು. ಈ ಬೆಟ್ಟದಂತಹ ಮೊತ್ತ ಬೆನ್ನತ್ತಿದ ಹೊಬಾರ್ಟ್ ಹರಿಕೇನ್ಸ್ ಈ ಪಂದ್ಯ ಗೆಲ್ಲಲು ಪವಾಡವನ್ನೇ ಮಾಡಬೇಕಿದೆ. ಅದಾಗಲೇ ಹರಿಕೇನ್ಸ್ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 56 ರನ್ ಕಲೆಹಾಕಿದೆ.

Story first published: Wednesday, January 19, 2022, 17:02 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X