ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಿನ್ನ ಶಾಟ್‌, ಸ್ಫೋಟಕ ಬ್ಯಾಟಿಂಗ್‌ನಿಂದ ದಂಗುಬಡಿಸಿದ ಮ್ಯಾಕ್ಸ್‌ವೆಲ್: ವೀಡಿಯೋ

Maxwell stuns with allround performance in BBL | Oneindia Kannada
Glenn Maxwell stuns everyone with reverse scoop

ಕ್ವೀನ್ಸ್‌ಲ್ಯಾಂಡ್, ಡಿಸೆಂಬರ್ 21: ಮಾನಸಿಕ ಸಮಸ್ಯೆಯ ಕಾರಣ ನೀಡಿ ಕೊಂಚ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸ್ಸಾಗಿದ್ದಾರೆ. ಅಲ್ಲದೆ ಸ್ಫೋಟಕ ಬ್ಯಾಟಿಂಗ್ ಮೂಲಕ ತನ್ನ ವಾಪಸಾತಿಯನ್ನು ಜಗತ್ತಿಗೆ ಸಾರಿದ್ದಾರೆ.

ತಂದೆಯ ಹಾದಿಯಲ್ಲೇ ಸಾಗಿದ ದ್ರಾವಿಡ್ ಪುತ್ರ ಸಮಿತ್; ದ್ವಿಶತಕ ಸಿಡಿಸಿದ 14ರ ಪೋರತಂದೆಯ ಹಾದಿಯಲ್ಲೇ ಸಾಗಿದ ದ್ರಾವಿಡ್ ಪುತ್ರ ಸಮಿತ್; ದ್ವಿಶತಕ ಸಿಡಿಸಿದ 14ರ ಪೋರ

ಇತ್ತೀಚೆಗಷ್ಟೇ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಗ್ಲೆನ್ ಮಾಕ್ಸ್‌ವೆಲ್ 10.50 ಕೋ.ರೂ.ಗೆ ಕಿಂಗ್ಸ್‌ ಇಲೆವೆನ್ ಪಂಜಾಬ್ ಸೇರಿಕೊಂಡಿದ್ದರು. ಪ್ಯಾಟ್ ಕಮಿನ್ಸ್ ಬಳಿಕ (15.50 ಕೋ.ರೂ) ಈ ವರ್ಷದ ಹರಾಜಿನಲ್ಲಿ ಎರಡನೇ ಅತೀ ದೊಡ್ಡ ಮೊತ್ತಕ್ಕೆ ಮಾರಾಟವಾದ ವಿದೇಶಿ ಆಟಗಾರರಾಗಿಯೂ ಮ್ಯಾಕ್ಸ್‌ವೆಲ್ ಗುರುತಿಸಿಕೊಂಡಿದ್ದರು.

ಐಪಿಎಲ್‌ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾದ ಮರುದಿನವೇ ಗ್ಲೆನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾದ ಕರಾರಾ ಓವಲ್‌ನಲ್ಲಿ ಶುಕ್ರವಾರ (ಡಿಸೆಂಬರ್ 20) ನಡೆದ ಬಿಗ್‌ಬ್ಯಾಷ್ ಲೀಗ್ ನ ಬ್ರಿಸ್ಬೇನ್ ಹೀಟ್ vs ಮೆಲ್ಬರ್ನ್ ಸ್ಟಾರ್ಸ್ ನಡುವಿನ ಪಂದ್ಯದಲ್ಲಿ ಮೆಲ್ಬರ್ನ್ ಪರ ಮೈದಾನಕ್ಕಿಳಿದಿದ್ದ ಮ್ಯಾಕ್ಸ್‌ವೆಲ್ 39 ಎಸೆತಗಳಿಗೆ 83 ರನ್ ಸಿಡಿದ್ದರು.

ಪಾನೀಪೂರಿ ಮಾರಿ ಮಿಲಿಯನೇರ್ ಸಾಲಿಗೆ ಬಂದ ಕ್ರಿಕೆಟಿಗನ ಹಿಸ್ಟರಿ-ಮಿಸ್ಟರಿ!ಪಾನೀಪೂರಿ ಮಾರಿ ಮಿಲಿಯನೇರ್ ಸಾಲಿಗೆ ಬಂದ ಕ್ರಿಕೆಟಿಗನ ಹಿಸ್ಟರಿ-ಮಿಸ್ಟರಿ!

ಆಟದ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ರಿವರ್ಸ್ ಸ್ಕೂಪ್‌ ಶಾಟ್ ಮೂಲಕ ಬೌಂಡರಿ ಗಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇದೇ ಪಂದ್ಯದಲ್ಲಿ ಮ್ಯಾಕ್ಸ್‌ ಬಾರಿಸಿದ ಸಿಕ್ಸ್‌ವೊಂದನ್ನು ಮೈದಾನದ ಹೊರಗಿದ್ದ ಫೋರ್ಥ್ ಅಂಪೈರ್‌ ಕ್ಯಾಚ್ ಮಾಡಿ ಗಮನ ಸೆಳೆದಿದ್ದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮೆಲ್ಬರ್ನ್ ಸ್ಟಾರ್ಸ್, ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 167 ರನ್ ಮಾಡಿತ್ತು. ಗುರಿ ಬೆಂಬತ್ತಿದ ಬ್ರಿಸ್ಬೇನ್ ಹೀಟ್ ತಂಡ, ಟಾಮ್ ಬ್ಯಾಂಟನ್ ಅರ್ಧ ಶತಕದೊಂದಿಗೆ (64 ರನ್) 20 ಓವರ್‌ಗೆ 145 ರನ್ ಪೇರಿಸಲಷ್ಟೇ ಶಕ್ತವಾಯಿತು.

Story first published: Saturday, December 21, 2019, 13:20 [IST]
Other articles published on Dec 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X