ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ನಿಂದ ತಾತ್ಕಾಲಿಕ ವಿರಾಮ ಪಡೆದ ಆಲ್ ರೌಂಡರ್ ಮ್ಯಾಕ್ಸ್ ವೆಲ್

Glenn Maxwell to take a short break from cricket to deal with mental health issues

ಬೆಂಗಳೂರು, ಅಕ್ಟೋಬರ್ 31: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಉತ್ತಮ ಲಯದಲ್ಲಿರುವ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಕ್ರಿಕೆಟ್ ನಿಂದ ಕೆಲಕಾಲ ದೂರಾಗುತ್ತಿದ್ದು, ಅಭಿಮಾನಿಗಳಿಗೆ ಈ ಸುದ್ದಿ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಮ್ಯಾಕ್ಸ್ ವೆಲ್ ಗೆ ಏನಾಯ್ತು? ಏನೋ ಮಾನಸಿಕ ಸಮಸ್ಯೆಯಂತೆ? ಅದಕ್ಕೆ ಕ್ರಿಕೆಟ್ ಮೈದಾನದಿಂದ ದೂರಾಗ್ತಿದ್ದಾರಾ? ಎಂಬೆಲ್ಲ ಪ್ರಶ್ನೆಗಳು ಕೇಳಿ ಬಂದಿವೆ.

ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಸಿಡಿಸಿದ್ದ ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಮಾನಸಿಕ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣಕ್ಕೆ ಕ್ರಿಕೆಟ್ ನಿಂದ ಕೆಲ ದಿನಗಳ ಕಾಲ ದೂರ ಉಳಿಯುತ್ತಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಫಿಸಿಯೋ ಮೈಕೆಲ್ ಲಾಯ್ಡ್ ಅವರು ಸುದ್ದಿಯನ್ನು ಖಚಿತಪಡಿಸಿದ್ದು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಗ್ಲೆನ್ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಯಕ್ಕೆ ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯವಿದ್ದು, ಮೈದಾನದಿಂದ ಹೊರಗುಳಿಯುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಎಂಎಸ್ ಧೋನಿ ನೆನಪಿಸಿದ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್: ವೈರಲ್ ವಿಡಿಯೋಎಂಎಸ್ ಧೋನಿ ನೆನಪಿಸಿದ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್: ವೈರಲ್ ವಿಡಿಯೋ

ಗ್ಲೆನ್ ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ, ಅವರು ಕ್ರಿಕೆಟ್ ನಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಆಟಗಾರರ ಆರೋಗ್ಯ ನಮಗೆ ಮುಖ್ಯ. ಗ್ಲೆನ್ ಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ(ಸಿಎ) ಹೇಳಿದೆ. ಡಿ ಆರ್ಕಿ ಶಾರ್ಟ್ ಅವರು ಗ್ಲೆನ್ ಮ್ಯಾಕ್ಸ್ ವೆಲ್ ಬದಲಿಗೆ ತಂಡ ಸೇರಲಿದ್ದಾರೆ.

ಸದ್ಯ ಪಶ್ಚಿಮ ಆಸ್ಟ್ರೇಲಿಯಾದ ಮಾರ್ಷ್ ಒನ್ ಡೇ ಕಪ್ ಆಡುತ್ತಿರುವ ಶಾರ್ಟ್ ಅವರು, ಶ್ರೀಲಂಕಾ ವಿರುದ್ಧದ ಮೆಲ್ಬೋರ್ನ್ 3ನೇ ಟಿ20 ಪಂದ್ಯವನ್ನಾಡಲಿದ್ದಾರೆ.

ಟಿ20ಐ: ಬೇಡದ ದಾಖಲೆ ಬರೆದ ಲಂಕಾದ ಬೌಲರ್ ಕಸುನ್ ರಜಿತಾಟಿ20ಐ: ಬೇಡದ ದಾಖಲೆ ಬರೆದ ಲಂಕಾದ ಬೌಲರ್ ಕಸುನ್ ರಜಿತಾ

ಆಸ್ಟ್ರೇಲಿಯಾ ತಂಡ: ಅರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಅಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಬೆನ್ ಮೆಕ್ ಡರ್ಮಟ್, ಕೇನ್ ರಿಚರ್ಡ್ಸನ್, ಡಿ ಆರ್ಕಿ ಶಾರ್ಟ್, ಸ್ಟೀವ್ ಸ್ಮಿತ್, ಬಿಲ್ಲಿ ಸ್ಟಾನ್ಲೇಕ್, ಮಿಚೆಲ್ ಸ್ಟಾಕ್, ಅಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆಡಂ ಝಂಪಾ.

Story first published: Thursday, October 31, 2019, 17:17 [IST]
Other articles published on Oct 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X