ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐನಲ್ಲಿ ಸಾರ್ವಕಾಲಿಕ ಟಾಪ್ 5 ಬೌಲರ್‌ಗಳ ಹೆಸರಿಸಿದ ಗ್ಲೆನ್ ಮೆಗ್ರಾತ್

Glenn McGrath picks his all-time top 5 bowlers in ODIs

ಸಿಡ್ನಿ: ಆಸ್ಟ್ರೇಲಿಯಾ ದಂತಕತೆ ಗ್ಲೆನ್ ಮೆಗ್ರಾತ್‌ ಶ್ರೇಷ್ಠ ಬೌಲರ್‌ಗಳಲ್ಲಿ ಗುರುತಿಸಿಕೊಂಡವರು. ಸುಮಾರು 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ವೃತ್ತಿ ಬದುಕು ಕಂಡಿರುವ ಮೆಗ್ರಾತ್ 1990ರಿಂದ 2000ರ ವರೆಗೆ ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಏಕದಿನದಲ್ಲಿ 250 ಪಂದ್ಯಗಳಲ್ಲಿ ಮೆಗ್ರಾತ್ ಭರ್ಜರಿ 381 ವಿಕೆಟ್‌ಗಳನ್ನು ಪಡೆದಿದ್ದಾರೆಂದರೆ ಬಲಗೈ ವೇಗಿಯ ಬಲ ಏನೆಂಬುದು ನಿಮಗೆ ಅರ್ಧವಾಗಬಹುದು.

ಒಡಿಐ ಸೂಪರ್ ಲೀಗ್‌ ಟೇಬಲ್‌ನಲ್ಲಿ ಪಾಕ್‌ಗಿಂತ ಕೆಳ ಕುಸಿದ ಭಾರತ!ಒಡಿಐ ಸೂಪರ್ ಲೀಗ್‌ ಟೇಬಲ್‌ನಲ್ಲಿ ಪಾಕ್‌ಗಿಂತ ಕೆಳ ಕುಸಿದ ಭಾರತ!

ಆಸ್ಟ್ರೇಲಿಯಾ ತಂಡ 1999, 2003, 2007ರಲ್ಲಿ ಸತತ ವಿಶ್ವಕಪ್‌ಗಳನ್ನು ಗೆದ್ದಾಗ ಗ್ಲೆನ್ ಮೆಗ್ರಾತ್ ತಂಡದಲ್ಲಿದ್ದರು. ಅಷ್ಟೇ ಅಲ್ಲ, 2007 ವಿಶ್ವಕಪ್‌ನಲ್ಲಿ ಒಟ್ಟು 26 ವಿಕೆಟ್‌ಗಳನ್ನು ಪಡೆದಿದ್ದ ಮೆಗ್ರಾತ್ ಮ್ಯಾನ್ ಆಫ್‌ದ ಟೂರ್ನಮೆಂಟ್ ಪ್ರಶಸ್ತಿ ಬಾಕಿಕೊಂಡಿದ್ದರು.

ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್

50ರ ಹರೆಯದ ಮೆಗ್ರಾತ್ ಇತ್ತೀಚೆಗೆ ಟಿವಿ ಶೋ ಒಂದರಲ್ಲಿ ಮಾತನಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ 5 ಬೌಲರ್‌ಗಳನ್ನು ಹೆಸರಿಸಿದ್ದಾರೆ. ಅವರ ಹೆಸರುಗಳು ಕೆಳಗಿವೆ.

5. ಶಾನ್ ಪೊಲಕ್

5. ಶಾನ್ ಪೊಲಕ್

ಗ್ಲೆನ್ ಮೆಗ್ರಾತ್ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ಬಳಿಕ ಶಾನ್ ಪೊಲಕ್ ತನ್ನ 35ನೇ ಹರೆಯದಲ್ಲಿ ಏಕದಿನ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ದಕ್ಷಿಣ ಆಫ್ರಿಕಾದ ವೇಗಿ ಮತ್ತು ಆಲ್ ರೌಂಡರ್ ಆಗಿದ್ದ ಪೊಲಕ್ 303 ಏಕದಿನ ಪಂದ್ಯಗಳಲ್ಲಿ 393 ವಿಕೆಟ್‌ಗಳನ್ನು ಪಡೆದಿದ್ದಾರೆ. ಪೊಲಕ್ 13 ವರ್ಷಗಳ ಕ್ರಿಕೆಟ್ ವೃತ್ತಿ ಬದುಕು ಕಂಡಿದ್ದಾರೆ.

4. ಚಮಿಂದ ವಾಸ್

4. ಚಮಿಂದ ವಾಸ್

ದ್ವೀಪರಾಷ್ಟ್ರವಾದ ಶ್ರೀಲಂಕಾದ ಶ್ರೇಷ್ಠ ಬೌಲರ್ ಚಮಿಂದ ವಾಸ್. ಏಕದಿನ ಕ್ರಿಕೆಟ್‌ನಲ್ಲಿ 400+ ವಿಕೆಟ್ ಪಡೆದ ಕೆಲವೇ ಕೆಲವು ಬೌಲರ್‌ಗಳಲ್ಲಿ ವಾಸ್ ಕೂಡ ಒಬ್ಬರು. ಆಡುತ್ತಿದ್ದಾಗ 2001ರಲ್ಲಿ ನಡೆದಿದ್ದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ವಾಸ್ 19 ರನ್‌ಗೆ ಬರೋಬ್ಬರಿ 8 ವಿಕೆಟ್ ಉರುಳಿಸಿದ್ದರು. ಎಡಗೈ ವೇಗಿಗಳಲ್ಲಿ ಈ ವಿಶೇಷ ದಾಖಲೆ ಮಾಡಿದ್ದು ಇವರೊಬ್ಬರೇ.

3. ಬ್ರೆಟ್ ಲೀ

3. ಬ್ರೆಟ್ ಲೀ

ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳನ್ನು ಹೆಸರಿಸುವಾಗ ಮೆಗ್ರಾತ್ ಆಸ್ಟ್ರೇಲಿಯಾ ತಂಡದ ಬ್ರೆಟ್‌ ಲೀ ಹೆಸರೂ ಹೇಳಿದ್ದಾರೆ. 2012ರಲ್ಲಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿರುವ ಲೀ, ಏಕದಿನದಲ್ಲಿ 380 ವಿಕೆಟ್‌ಗಳನ್ನು ಪಡೆದಿದ್ದಾರೆ. ಲೀ ತಂಡದಲ್ಲಿದ್ದಾಗ ಆಸ್ಟ್ರೇಲಿಯಾ 2003 ಮತ್ತು 2007ರಲ್ಲಿ ವಿಶ್ವಕಪ್ ಗೆದ್ದಿತ್ತು. ಲೀ ಏಕದಿನದಲ್ಲಿ 161.1 kmph ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು.

2. ಮುತ್ತಯ್ಯ ಮುರಳೀಧರನ್

2. ಮುತ್ತಯ್ಯ ಮುರಳೀಧರನ್

ಶ್ರೀಲಂಕಾದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಯಾವತ್ತಿಗೂ ಕೇಳಿಬರುವ ಹೆಸರು. ಮೆಗ್ರಾತ್ ಲಿಸ್ಟ್‌ನಲ್ಲೂ ಮುರಳೀಧರನ್ ಇದ್ದಾರೆ. ಶ್ರೀಲಂಕಾ ಏಕದಿನ ತಂಡವನ್ನು 350 ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಮುರಳೀಧರನ್, 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಗ ಮತ್ತಯ್ಯ 534 ವಿಕೆಟ್‌ಗಳನ್ನು ಪಡೆದಿದ್ದರು.

1. ವಾಸಿಮ್ ಅಕ್ರಮ್

1. ವಾಸಿಮ್ ಅಕ್ರಮ್

ಪಾಕಿಸ್ತಾನದ ಎಡಗೈ ಸ್ವಿಂಗ್ ಬೌಲರ್ ವಾಸಿಮ್ ಅಕ್ರಮ್ ಅವರನ್ನು ಮೆಗ್ರಾತ್ ತನ್ನ ಟಾಪ್‌ ಬೌಲರ್‌ಗಳ ಪಟ್ಟಿಯಲ್ಲಿ ಹೆಸರಿಸಿದ್ದಾರೆ. ಏಕದಿನದಲ್ಲಿ 500 ವಿಕೆಟ್ ದಾಖಲೆ ಮೊದಲು ಸ್ಥಾಪಿಸಿದ್ದು ವಾಸಿಮ್ ಅಕ್ರಮ್. ಆಗಿನ ದಿನಗಳಲ್ಲಿ ಅಕ್ರಮ್ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಪಾಕ್ ನಾಯಕರಾಗಿದ್ದ ಅಕ್ರಮ್, ವಿಶ್ವಕಪ್‌ ಗೆದ್ದಾಗ ತಂಡದಲ್ಲಿದ್ದರು.

Story first published: Thursday, December 3, 2020, 10:02 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X