ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದೊಂದು ತಂಡ ಮಾತ್ರ ಆಸ್ಟ್ರೇಲಿಯಾಕ್ಕಿರುವ ಅಂತಿಮ ಸವಾಲು: ಗ್ಲೆನ್ ಮೆಗ್ರಾಥ್

Glenn McGrath said India is ultimate challenge for australia

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪಾರುಪತ್ಯ ಈಗ ಹಿಂದಿನಂತಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ವಿವರಿಸಿ ಹೇಳಬೇಕಿಲ್ಲ. 2000ನೇ ದಶಕದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಅತ್ಯುನ್ನತ ಸಾಧನೆಯನ್ನು ಮಾಡಿತ್ತು. ಬಳಿಕ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಭಾರತ ಸೇರಿದಂತೆ ಸಾಕಷ್ಟು ತಂಡಗಳು ಆಸ್ಟ್ರೇಲಿಯಾಗೆ ಭಾರೀ ಪೈಪೋಟಿ ನೀಡಲು ಆರಂಭಿಸಿದ್ದು ಈಗ ಆಸಿಸ್ ತಂಡ ಕೂಡ ಸಾಮಾನ್ಯ ತಂಡದಂತಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾಗೆ ಇನ್ನು ಕೂಡ ಭಾರತ ಮಾತ್ರವೇ ಅಂತಿಮ ಸವಾಲು ಎಂಬ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ಎರಡು ದಶಕದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಆದರೆ 2004ರ ಬಳಿಕ ಭಾರತದಲ್ಲಿ ದ್ವಿಪಕ್ಷೀಯ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ, ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾಥ್ ಪ್ರತಿಕ್ರಿಯಿಸಿದ್ದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?

2004ರಲ್ಲಿ ಭಾರತದಲ್ಲಿ ಸರಣಿ ಗೆದ್ದಿದ್ದೇ ಕೊನೆ!

2004ರಲ್ಲಿ ಭಾರತದಲ್ಲಿ ಸರಣಿ ಗೆದ್ದಿದ್ದೇ ಕೊನೆ!

ಆಸ್ಟ್ರೇಲಿಯಾ ತಂಡ 2004ರಲ್ಲಿ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಅದಾದ ಬಳಿಕ ಸಾಕಷ್ಟು ಬಾರಿ ಆಸಿಸ್ ಬಳಿಕ ಭಾರತ ಪ್ರವಾಸ ಕೈಗೊಂಡಿದ್ದರೂ ಮತ್ತೊಮ್ಮೆ ಆ ಸಾಧನೆ ಮಾಡಲು ಭಾರತ ತಂಡ ಅವಕಾಶವನ್ನೇ ನೀಡಿಲ್ಲ. ಆದರೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಕೈಗೊಂಡಾಗ 2017 ಹಾಗೂ 2021ರ ಬಾರಿಯೂ ಆಸ್ಟ್ರೇಲಿಯಾ ನೆಲದಲ್ಲಿಯೇ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿದೆ. ಈ ಮೂಲಕ ಆಸಿಸ್ ಪಡೆಯ ವಿರುದ್ಧ ಮೇಲುಗೈ ಸಾಧಿಸಿದೆ.

ನಂಬರ್ 1 ಸ್ಥಾನಕ್ಕೆ ನ್ಯಾಯ ಕೊಡಬೇಕಾದರೆ ಸರಣಿ ಗೆಲ್ಲಬೇಕು!

ನಂಬರ್ 1 ಸ್ಥಾನಕ್ಕೆ ನ್ಯಾಯ ಕೊಡಬೇಕಾದರೆ ಸರಣಿ ಗೆಲ್ಲಬೇಕು!

ಕ್ರಿಕೆಟ್.ಕಾಮ್ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಗ್ಲೆನ್ ಮೆಕ್‌ಗ್ರಾಥ್ ಭಾರತದಲ್ಲಿ ಆಸ್ಟ್ರೇಲಿಯಾ ತಂಡ ಹೇಗೆ ಸತತವಾಗಿ ವೈಫಲ್ಯವನ್ನು ಅನುಭವಿಸಿಕೊಂಡು ಬಂದಿದೆ ಎಂಬುದನ್ನು ಹೇಳಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉಪಖಂಡದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನವನ್ನು ನೀಡಲು ಯಶಸ್ವಿಯಾಗುತ್ತಿದ್ದು ಅದಕ್ಕೆ ಐಪಿಎಲ್‌ನಲ್ಲಿ ಆಡುತ್ತಿರುವುದು ಹೆಚ್ಚು ಸಹಾಯವನ್ನು ಮಾಡಿದೆ ಎಂದಿದ್ದಾರೆ ಗ್ಲೆನ್ ಮೆಕ್‌ಗ್ರಾಥ್. ಮುಂದುವರಿದು ಮಾತನಾಡಿದ ಅವರು ಸದ್ಯ ಆಸ್ಟ್ರೇಲಿಯಾ ತಂಡ ನಂಬರ್ 1 ಟೆಸ್ಟ್ ತಂಡವಾಗಿದ್ದು ಆ ಸ್ಥಾನಕ್ಕೆ ನ್ಯಾಯ ಒದಗಿಸಬೇಕಾದರೆ ಭಾರತವನ್ನು ಅದರ ತವರಿನಲ್ಲಿ ಮಣಿಸಲೇಬೇಕಿದೆ ಎಂದಿದ್ದಾರೆ.

ಅದೊಂದೇ ದೊಡ್ಡ ಸವಾಲು

ಅದೊಂದೇ ದೊಡ್ಡ ಸವಾಲು

ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್‌ಗ್ರಾಥ್ ಮುಂದುವರಿದು "ಖಂಡಿತವಾಗಿಯೂ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಸವಾಲೆಂದರೆ ಭಾರತಕ್ಕೆ ಆಗಮಿಸಿ ಉತ್ತಮ ಪ್ರದರ್ಶನ ನೀಡುವುದು ಮತ್ತು ಸರಣಿಯನ್ನು ಗೆಲ್ಲುವುದಾಗಿದೆ. ಅದನ್ನು ನಾವು 2004ರಲ್ಲಿ ಮಾಡಿರುವುದು ನಮ್ಮ ಅದೃಷ್ಟ. ಉತ್ತಮ ಯೋಜನೆಗಳೊಂದಿಗೆ ಬಂದರೆ ಅದು ಸಾಧ್ಯವಿದೆ. ತಿರುವು ಪಡೆಯುವ ಪಿಚ್‌ಗಳಲ್ಲಿ ಸವಾಲನ್ನು ಎದುರಿಸುವುದನ್ನು ಆಸಿಸ್ ಬ್ಯಾಟರ್‌ಗಳು ಕಲಿತುಕೊಳ್ಳಬೇಕಿದೆ.

ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ ಆಸ್ಟ್ರೇಲಿಯಾ

ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ ಆಸ್ಟ್ರೇಲಿಯಾ

ಮುಂದಿನ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯಲ್ಲಿ ಭಾರತ ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಅವಧಿಯ ಭಾಗವಾಗಿದೆ. ಫೈನಲ್ ಹಂತಕ್ಕೇರಲು ಈ ಎರಡು ತಂಡಗಳಿಗೂ ಈ ಸರಣಿ ಅತ್ಯಂತ ಪ್ರಮುಖವಾಗುವ ಸಾಧ್ಯತೆಯಿದೆ. ಕಳೆದ ಎರಡು ಬಾರಿ ಭಾರತ ತಂಡ ಆಸ್ಟ್ರೇಲಿಯಾಗೆ ಒಪ್ರವಾಸ ಕೈಗೊಂಡಿದ್ದಾಗಲೂ ತವರಿನಲ್ಲಿಯೇ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿದ್ದು ಆಸಿಸ್ ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಹೀಗಾಗಿ ಈ ಬಾರಿಯ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಯಾವ ರೀತಿಯ ಸಿದ್ಧತೆ ಮಾಡಿಕೊಂಡು ಕಣಕ್ಕಿಳಿಯಲಿದೆ ಎಂಬುದು ಈಗ ಅಭಿಮಾನಿಗಳ ಕುತೂಹಲ ಹೆಚ್ಚಲು ಕಾರಣವಾಗಿದೆ.

Story first published: Tuesday, August 16, 2022, 14:49 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X