ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ಲೋಬಲ್‌ ಟಿ20: ನಾಕ್‌ಔಟ್‌ ಪಂದ್ಯದಲ್ಲಿ ಎದುರಾಳಿಗೆ ಟೋಪಿ ಹಾಕಿದ ಪೊಲಾರ್ಡ್‌!

Pollard Puts the Umpire Hat 2019

ಟೊರಾಂಟೊ, ಆಗಸ್ಟ್‌ 09: ಕ್ರಿಕೆಟ್‌ ಅಭಿಮಾನಿಗಳನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ಗ್ಲೋಬಲ್‌ ಟಿ20 ಕೆನಡಾ ಟೂರ್ನಿಯು ಕ್ಲೈಮ್ಯಾಕ್ಸ್‌ ಹಂತಕ್ಕೆ ಕಾಲಿಟ್ಟಿದ್ದು, ಟೂರ್ನಿಯ ರೋಚಕತೆ ಮತ್ತೊಂದು ಹಂತ ತಲುಪಿದೆ.

ಗುರುವಾರ ನಡೆದ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಟೊರಾಂಟೊ ನ್ಯಾಷನಲ್ಸ್‌ ಮತ್ತು ವಿನ್ನಿಪೆಗ್‌ ಹಾಕ್ಸ್‌ ತಂಡಗಳ ನಡುವಣ ಹೈ ಸ್ಕೋರಿಂಗ್‌ ಕಾಳಗವಂತೂ ಅಭಿಮಾನಿಗಳಿಗೆ ಫೋರ್‌, ಸಿಕ್ಸರ್‌ಗಳ ಭರಪೂರ ಮನರಂಜನೆಯನ್ನೇ ಒದಗಿಸಿತು. ಇನ್ನು ಪಂದ್ಯದಲ್ಲಿ ನಡೆದ ಹಲವು ನಾಟಕೀಯ ಸಂಗತಿಗಳು ಕೂಡ ಪ್ರೇಕ್ಷಕರನ್ನು ಮತ್ತು ಆಟಗಾರರನ್ನೂ ನಗುವಂತೆ ಮಾಡಿತ್ತು.

ಮಳೆಗೆ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?ಮಳೆಗೆ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?

ಹಾಕ್ಸ್‌ ಇನಿಂಗ್ಸ್‌ನ 16ನೇ ಓವರ್‌ ಪಂದ್ಯದ ದಿಕ್ಕನ್ನೇ ಬದಲಾಯಿಸಿತ್ತು. ಟೊರಾಂಟೊ ತಂಡದ ಅನುಭವಿ ಮಧ್ಯಮ ವೇಗಿ ಕೈರೊನ್‌ ಪೊಲಾರ್ಡ್‌ ಎದುರು ಕ್ರೀಸ್‌ನಲ್ಲಿದ್ದ ಹಾಕ್ಸ್‌ ಬ್ಯಾಟ್ಸ್‌ಮನ್‌ಗಳಾದ ಜೆ.ಪಿ ಡುಮಿನಿ (ಅಜೇಯ 85) ಮತ್ತು ರಯಾದ್‌ ಎಮ್ರಿತ್‌ (ಅಜೇಯ 33) 22 ರನ್‌ಗಳನ್ನು ಗಳಿಸುವ ಮೂಲಕ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ತಂಡಕ್ಕೆ 2 ರನ್‌ಗಳ ರೋಚಕ ಜಯ ತಂದುಕೊಟ್ಟಿದ್ದರು.

ಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊ

ಬೌನ್ಸರ್‌ ವಿಚಾರಕ್ಕೆ ನಡೆದ ವಾಗ್ವಾದ

ಈ ಓವರ್‌ನಲ್ಲಿ ಪೊಲಾರ್ಡ್‌ ಎಸೆದ ಒಂದು ಬೌನ್ಸರ್‌ಗೆ ಅಂಪೈರ್‌ ವೈಡ್‌ ಜೊತೆಗೆ ಓವರ್‌ನ ಮೊದಲ ಬೌನ್ಸರ್‌ ಎಂದು ತೀರ್ಮಾನ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಪೊಲಾರ್ಡ್‌ ಮತ್ತೊಂದು ಎಸೆತವನ್ನೂ ಬೌನ್ಸರ್‌ ಎಸೆದಿದ್ದರು. ಆದರೆ, ಈ ಬಾರಿ ಚೆಂಡು ಸ್ಟ್ರೈಕ್‌ನಲ್ಲಿದ್ದ ಬ್ಯಾಟ್ಸ್‌ಮನ್‌ ಎಮ್ರಿತ್‌ ಹೆಲ್ಮೆಟ್‌ಗೆ ಬಡಿದಿತ್ತು. ಈ ಎಸೆತವೂ ಕೂಡ ಬೌನ್ಸರ್‌ ಆಗಿದ್ದು, ನೋಬಾಲ್‌ ನೀಡಬೇಕಿತ್ತು ಎಂದು ಅಂಪೈರ್‌ಗಳ ಬಳಿ ಎಮ್ರಿತ್‌ ವಾದಕ್ಕಿಳಿದರು.

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾ

ಮೊದಲೇ ಅಸಮಾಧಾನಗೊಂಡಿದ್ದ ಪೊಲಾರ್ಡ್‌, ತಾಳ್ಮೆ ಕಳೆದುಕೊಂಡು ಎದುರಾಳಿ ತಂಡದ ನಾಯಕ ಕೂಡ ಆಗಿರುವ ಎಮ್ರಿತ್‌ಗೆ ಸ್ಟ್ರೈಕ್‌ ಅಂಪೈರ್‌ನ ಹ್ಯಾಟ್‌ ತೆಗೆದು ತೊಡಿಸುವ ಮೂಲಕ ನೀನೇ ಅಂಪೈರ್‌ ಆಗಬೇಕಿತ್ತು ಎಂದು ಸೂಚಿಸಿದರು. ಈ ವಿಚಾರವಾಗಿ ಇಬ್ಬರ ನಡುವೆ ಕೆಲ ಕಾಲ ಮಾತುಕತೆ ನಡೆಯಿತು. ಕ್ರೀಸ್‌ನ ಮತ್ತೊಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್‌ ಜೆ.ಪಿ ಡುಮಿನಿ ಜೊತೆ ಟೊರಾಂಟೊ ನ್ಯಾನಲ್ಸ್‌ ನಾಯಕ ಯುವರಾಜ್‌ ಸಿಂಗ್‌ ಮಾತಿಗಿಳಿದು ಪೊಲಾರ್ಡ್‌-ಎಮ್ರಿತ್‌ ನಡುವಣ ಕಿತ್ತಾಟವನ್ನು ನೋಡಿ ನಗಲಾರಂಭಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾ

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೊರಾಂಟೊ ನ್ಯಾಷನಲ್ಸ್‌ ತಂಡ ಹೆನ್ರಿಚ್‌ ಕ್ಲಾಸನ್‌ ಅವರ ಅದ್ಭುತ (ಅಜೇಯ 106 ರನ್‌, 49 ಎಸೆತಗಳಲ್ಲಿ) ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 238 ರನ್‌ಗಳ ಶಿಖರವನ್ನೇ ನಿರ್ಮಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಹಾಕ್ಸ್‌ ತಂಡ ಮಂದ ಬೆಳಕಿನ ಕಾರಣ ಸ್ಥಗಿತಗೊಳ್ಳುವುದಕ್ಕೂ ಮುನ್ನ 5 ವಿಕೆಟ್‌ಗೆ 201 ರನ್‌ಗಳಿಸಿತ್ತು. ಅಂತಿಮವಾಗಿ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 2 ರನ್‌ಗಳ ಅಂತರದಲ್ಲಿ ಹಾಕ್ಸ್‌ಗೆ ಗೆಲುವು ಲಭ್ಯವಾಯಿತು.

Story first published: Friday, August 9, 2019, 19:25 [IST]
Other articles published on Aug 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X