ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್ಟನ್ನು ದೇವರೇ ಕಾಪಾಡಬೇಕು ಎಂದ ಸೌರವ್‌ ಗಂಗೂಲಿ!

Sourav Ganguly expressing 2019

ಹೊಸದಿಲ್ಲಿ, ಆಗಸ್ಟ್‌ 07: ಟೀಮ್‌ ಇಂಡಿಯಾದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪದ ಮೇರೆಗೆ ಬಿಸಿಸಿಐ ನೋಟೀಸ್‌ ಜಾರಿಗೊಳಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸೌರವ್‌ ಗಂಗೂಲಿ, "ಭಾರತೀಯ ಕ್ರಿಕೆಟ್ಟನ್ನು ದೇವರೇ ಕಾಪಾಡಬೇಕು," ಎಂದಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಅಘಾದ ಸೇವೆ ಸಲ್ಲಿಸಿರವ ದಿಗ್ಗಜ ಆಟಗಾರನ ವಿರುದ್ಧ ನೋಟಿಸ್‌ ಜಾರಿ ಗೊಳಿಸಿರುವುದಕ್ಕೆ ಗಂಗೂಲಿ ಅಸಮಾಧಾನ ವ್ಯಕ್ತ ಪಡಿಸಿದ್ದು, ಅವರ ನಾಯಕತ್ವದ ಅಡಿಯಲ್ಲಿ ಭಾರತದ ಪರ ಆಡಿದ ಹರ್ಭಜನ್‌ ಸಿಂಗ್‌ ಕೂಡ ಗಂಗೂಲಿ ಬೆಂಬಲಕ್ಕೆ ನಿಂತಿದ್ದಾರೆ.

ಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಲುಕಿದ ರಾಹುಲ್‌ ದ್ರಾವಿಡ್‌!ಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಲುಕಿದ ರಾಹುಲ್‌ ದ್ರಾವಿಡ್‌!

ಬಿಸಿಸಿಐನ ಒಂಬುಡ್ಸ್‌ಮನ್‌ ಹಾಗೂ ಎಥಿಕ್ಸ್‌ ಆಫಿಸರ್‌ ಆಗಿರುವ ನಿವೃತ್ತಿ ನ್ಯಾಯಮೂರ್ತಿ ಡಿ.ಕೆ ಜೈನ್‌, ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆಯ (ಎಂಪಿಸಿಎ) ಆಜೀವ ಸದಸ್ಯರಾದ ಸಂಜೀವ್‌ ಗುಪ್ತ ಅವರು ನೀಡಿರುವ ದೂರಿನ ಆಧಾರದ ಮೇರೆಗೆ ಮಂಗಳವಾರ ನೋಟಿಸ್‌ ಜಾರಿಗೊಳಿಸಿದ್ದರು.

ಗುಪ್ತ ಅವರ ದೂರಿನ ಪ್ರಕಾರ, ರಾಹುಲ್‌ ದ್ರಾವಿಡ್‌ ಸದ್ಯ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿದ್ದು, ಇದೇ ವೇಳೆ ಐಪಿಎಲ್‌ನ ಫ್ರಾಂಚೈಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ ಸಂಸ್ಥೆಯಲ್ಲಿ ಉಪಾಧ್ಯಕ್ಷರ ಹುದ್ದೆ ಹೊಂದಿದ್ದಾರೆ. ಹೀಗಾಗಿ ಹಿತಾಸಕ್ತಿ ಸಂಘರ್ಷ ತಲೆದೂರಿದೆ.

ಕಾಶ್ಮೀರ ವಿಚಾರದಲ್ಲಿ ಕೆಣಕಿದ ಅಫ್ರಿದಿಗೆ ಗೌತಮ್‌ ಗಂಭೀರ್‌ ಖಡಕ್‌ ಉತ್ತರಕಾಶ್ಮೀರ ವಿಚಾರದಲ್ಲಿ ಕೆಣಕಿದ ಅಫ್ರಿದಿಗೆ ಗೌತಮ್‌ ಗಂಭೀರ್‌ ಖಡಕ್‌ ಉತ್ತರ

"ಭಾರತೀಯ ಕ್ರಿಕೆಟ್‌ನಲ್ಲಿ ಹೊಸದೊಂದು ಫ್ಯಾಷನ್‌ ಆರಂಭವಾಗಿದೆ. ಹಿತಾಸಕ್ತಿ ಸಂಘರ್ಷದ ಮೂಲಕ ಸದಾ ಸುದ್ದಿಯಲ್ಲಿ ಇರಬಹುದಾಗಿದೆ. ಭಾರತೀಯ ಕ್ರಿಕೆಟ್ಟನ್ನು ದೇವರೇ ಕಾಪಾಡಬೇಕು. ಬಿಸಿಸಿಐನ ಎಥಿಕ್ಸ್‌ ಆಫೀಸರ್‌ನಿಂದ ದ್ರಾವಿಡ್‌ಗೂ ಹಿತಾಸಕ್ತಿ ಸಂಘರ್ಷದ ನೋಟಿಸ್‌ ಸಿಕ್ಕಿದೆ," ಎಂದು ಗಂಗೂಲಿ ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನು ಬೆಂಬಲಿಸಿರುವ ಹರ್ಭಜನ್‌, "ನಿಜಕ್ಕೂ?? ಇವೆಲ್ಲವೂ ಎತ್ತ ಸಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ದ್ರಾವಿಡ್‌ಗಿಂತಲೂ ಉತ್ತಮ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಇಂತಹ ದಿಗ್ಗಜರಿಗೆ ನೋಟಿಸ್‌ ಕಳುಹಿಸುವುದು ಅವರನ್ನು ಅಗೌರವಿಸಿದಂತೆ. ಕ್ರಿಕೆಟ್‌ ಉದ್ದಾರವಾಗಲು ಅವರ ಅಗತ್ಯವಿದೆ. ಹೌದು ಭಾರತೀಯ ಕ್ರಿಕೆಟ್ಟನ್ನು ದೇವರೇ ಕಾಪಾಡಬೇಕು," ಎಂದು ಹರ್ಭಜನ್‌ ಟ್ವೀಟ್‌ ಮಾಡಿದ್ದಾರೆ.

ಆ್ಯಷಸ್‌: ಲಾರ್ಡ್ಸ್‌ ಟೆಸ್ಟ್‌ಗೂ ಮೊದಲೇ ಆತಿಥೇಯ ಇಂಗ್ಲೆಂಡ್‌ಗೆ ಭಾರಿ ಆಘಾತಆ್ಯಷಸ್‌: ಲಾರ್ಡ್ಸ್‌ ಟೆಸ್ಟ್‌ಗೂ ಮೊದಲೇ ಆತಿಥೇಯ ಇಂಗ್ಲೆಂಡ್‌ಗೆ ಭಾರಿ ಆಘಾತ

ಇದರೊಂದಿಗೆ ರಾಹುಲ್‌ ದ್ರಾವಿಡ್‌ ಆಗಸ್ಟ್‌ 16ರ ಒಳಗಾಗಿ ಉತ್ತರ ನೀಡಬೇಕಿದೆ. ಅಷ್ಟೇ ಅಲ್ಲದೆ ಈ ವಿಚಾರವಾಗಿ ಅಗತ್ಯಬಿದ್ದಲ್ಲಿ ಜೈನ್‌ ಅವರೊಟ್ಟಿಗೆ ಮುಖಾಮುಖಿ ಮಾರುಕತೆಗೆ ಹಾಜರಾಗಬೇಕಾಗುತ್ತದೆ.

ಕಳೆದ ಐಪಿಎಲ್‌ ವೇಳೆ ವಿವಿಧ ಫ್ರಾಂಚೈಸಿಗಳಲ್ಲಿ ಮೆಂಟರ್‌ ಜವಾಬ್ದಾರಿ ನಿಭಾಯಿಸಿದ್ದ ಭಾರತ ತಂಡದ ಮಾಜಿ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಮತ್ತು ವಿವಿಎಸ್‌ ಲಕ್ಷ್ಮಣ್‌, ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿಯ ಸದ್ಯರೂ ಆಗಿದ್ದರು. ಹೀಗಾಗಿ ಅವರ ವಿರುದ್ಧವೂ ಇದೇ ಗುಪ್ತ ಹಿತಾಸಕ್ತಿ ಸಂಘರ್ಷದ ದೂರು ದಾಖಲಿಸಿದ್ದರು. ಸಚಿನ್‌ ಮುಂಬೈ ಇಂಡಿಯನ್ಸ್‌ ಪರ ಮತ್ತು ಲಕ್ಷ್ಮಣ್‌ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಮೆಂಟರ್‌ ಜವಾಬ್ದಾರಿ ನಿಭಾಯಿಸಿದ್ದರು.

2003ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಸೋಲಿಗೆ ಕಾರಣ ಕೊಟ್ಟ ಅಖ್ತರ್‌2003ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಸೋಲಿಗೆ ಕಾರಣ ಕೊಟ್ಟ ಅಖ್ತರ್‌

ಬಳಿಕ ಕ್ರಿಕೆಟ್‌ ಸಲಹಾ ಸಮಿತಿಯಿಂದ ಸಚಿನ್‌ ಮತ್ತು ಲಕ್ಷ್ಮಣ್‌ ಹೊರಬಂದಿದ್ದರು. ಇದಾದ ಬಳಿಕ ಬಿಸಿಸಿಐನ ಕ್ರಿಕೆಟ್‌ ಆಡಳಿತ ಸಮಿತಿಯು ಭಾರತ ತಂಡದ ಮಾಜಿ ನಾಯಕ ಹಾಗೂ ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ಆಟಗಾರ ಕಪಿಲ್‌ ದೇವ್‌ ಅವರ ಸಾರಥ್ಯದ ನೂತನ ಕ್ರಿಕೆಟ್‌ ಸಲಹಾ ಸಮಿತಿಯನ್ನು ರಚಿಸಿತು. ನೂತನ ಸಮಿತಿಯಲ್ಲಿ ಕಪಿಲ್‌ ಹೊರತಾಗಿ ಮಾಜಿ ಕ್ರಿಕೆಟಿಗ ಅನ್ಷುಮನ್‌ ಗಾಯಕ್ವಾಡ್‌ ಮತ್ತು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಇದ್ದಾರೆ. ನೂತನ ಕ್ರಿಕೆಟ್‌ ಸಲಹಾ ಸಮಿತಿಗೆ ಭಾರತ ತಂಡದ ನೂತನ ಕೋಚ್‌ ನೇಮಕದ ಜವಾಬ್ದಾರಿಯನ್ನು ನೀಡಲಾಗಿದೆ.

Story first published: Wednesday, August 7, 2019, 15:57 [IST]
Other articles published on Aug 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X