Ab de Villiers ಮಾತಿಗೆ RCB ಅಭಿಮಾನಿಗಳು ಫುಲ್ ಖುಷ್ | #cricket #ipl2022 | Oneindia Kannada
ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯವಾಗಿದ್ದು, ಪ್ಲೇಆಫ್ ಸುತ್ತಿನ ಪಂದ್ಯಗಳು ಆರಂಭವಾಗಿವೆ. ಇನ್ನು ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶವನ್ನು ಪಡೆದುಕೊಂಡಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಲೀಗ್ ಹಂತದ ಕೊನೆಯಲ್ಲಿ ಪ್ಲೇಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತನಗೆ ಪೈಪೋಟಿ ನೀಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸೋತ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
IPL 2022: ತಂಡಗಳ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಔಟ್; ಆರ್‌ಸಿಬಿ ಪರ ಯಾರು?
ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾದ ಖುಷಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಇದೀಗ ಎಬಿ ಡಿ ವಿಲಿಯರ್ಸ್ ನೀಡಿರುವ ಹೇಳಿಕೆ ಮತ್ತಷ್ಟು ಖುಷಿಯನ್ನು ನೀಡಿದೆ. ಹೌದು, ಇತ್ತೀಚೆಗಷ್ಟೆ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಬಿ ಡಿ ವಿಲಿಯರ್ಸ್ ತಂಡಕ್ಕೆ ಮರಳಿದ್ದಾರೆ ಎಂಬ ಮಾತನ್ನು ಹೇಳಿದ್ದರು.
IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?
ಇದೀಗ ಸ್ವತಃ ಎಬಿ ಡಿ ವಿಲಿಯರ್ಸ್ ಈ ಕುರಿತಾಗಿ ಹೇಳಿಕೆಯನ್ನು ನೀಡಿದ್ದು, ತಾವು ಯಾವ ಪಾತ್ರ ನಿರ್ವಹಿಸಬಹುದು ಎಂಬುದರ ಕುರಿತು ಸುಳಿವನ್ನು ನೀಡಿದ್ದಾರೆ. ಎಬಿ ಡಿ ವಿಲಿಯರ್ಸ್ ಅವರ ಈ ಮಾತುಗಳನ್ನು ಕೇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಖುಷಿಯ ಜೊತೆ ಕುತೂಹಲಕ್ಕೂ ಕೂಡ ಒಳಗಾಗಿದ್ದಾರೆ. ಇನ್ನು ಎಬಿ ಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳುವುದರ ಕುರಿತು ನೀಡಿದ ಹೇಳಿಕೆಯೇನು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ..
ಕೊಹ್ಲಿ ಖಚಿತಪಡಿಸಿದ್ದು ಖುಷಿ ಎಂದ ಎಬಿಡಿ
ಈ ಕುರಿತಾಗಿ ಮಾತನಾಡಿರುವ ಎಬಿ ಡಿ ವಿಲಿಯರ್ಸ್ ತನ್ನ ಮರಳಿಕೆಯನ್ನು ವಿರಾಟ್ ಕೊಹ್ಲಿ ಖಚಿತಪಡಿಸಿದ್ದು ಖುಷಿ ತಂದಿದೆ ಎಂದಿದ್ದಾರೆ. ಹಾಗೂ ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೇ ಇರಲಿದ್ದೇನೆ ಎಂಬುದನ್ನು ಎಬಿ ಡಿ ವಿಲಿಯರ್ಸ್ ಖಚಿತಪಡಿಸಿದ್ದಾರೆ.
ಕೋಚ್, ಮೆಂಟರ್ ಸ್ಥಾನ ಎಂಬ ಮಾತನ್ನೇ ಆಡದ ಎಬಿಡಿ!
ಇನ್ನು ಎಬಿ ಡಿ ವಿಲಿಯರ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವುಕ್ಕೂ ಮುನ್ನವೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು. ಹಾಗೂ ವಿರಾಟ್ ಕೊಹ್ಲಿ ಎಬಿಡಿ ಮತ್ತೆ ಮರಳಿದ್ದಾರೆ ಎಂಬುದನ್ನು ಬಹಿರಂಗಪಡಿಸಿದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎಬಿಡಿ ಕೋಚ್ ಆಗಿ ಅಥವಾ ಮೆಂಟರ್ ಆಗಿ ತಂಡ ಸೇರಬಹುದು ಎಂಬುದನ್ನು ಊಹಿಸಿದ್ದರು. ಆದರೆ, ಎಬಿಡಿ ಎಲ್ಲಿಯೂ ಸಹ ಕೋಚ್ ಅಥವಾ ಮೆಂಟರ್ ಎಂದು ಹೇಳದಯೇ ತಂಡಕ್ಕೆ ಮರಳಿದ್ದೇನೆ ಎಂದಿದ್ದಾರೆ. ಹಾಗೂ ನಾವು ಇನ್ನೂ ಯಾವುದನ್ನೂ ನಿಶ್ಚಯಿಸಿಲ್ಲ ಎಂದಿರುವ ಎಬಿಡಿ ಮುಂದಿನ ವರ್ಷ ಮರಳಿದ್ದೇನೆ ಆದರೆ ಯಾವ ಪಾತ್ರದಲ್ಲಿ ಎಂಬುದು ತಿಳಿದಿಲ್ಲ ಎಂದಿದ್ದಾರೆ. ಈ ಮೂಲಕ ಎಬಿಡಿ ತಾನು ಆಟಗಾರನಾಗಿ ಬೇಕಾದರೂ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂಬ ಸುಳಿವನ್ನು ನೀಡಿದಂತಿದೆ.
ಬೆಂಗಳೂರು ನನ್ನ ಎರಡನೇ ಮನೆ
ಇನ್ನು ಪ್ರತಿ ಸಲದಂತೆ ಈ ಸಲವೂ ಸಹ ಎಬಿಡಿ ಬೆಂಗಳೂರನ್ನು ಹೊಗಳಿದ್ದಾರೆ. ಮುಂದಿನ ವರ್ಷ ಕೆಲ ಪಂದ್ಯಗಳು ಬೆಂಗಳೂರಿನಲ್ಲಿ ಆಯೋಜನೆಯಾಗುವುದನ್ನು ಕೇಳ್ಪಟ್ಟೆ, ಹೀಗಾಗಿ ನನ್ನ ಎರಡನೇ ಮನೆಗೆ ಹಿಂದಿರುಗಿ ಅಭಿಮಾನಿಗಳಿಂದ ತುಂಬಿದ ಚಿನ್ನಸ್ವಾಮಿ ಕ್ರೀಡಾಂಗಣವನ್ನು ನೋಡುವಾಸೆ ಎಂದು ಎಬಿ ಡಿ ವಿಲಿಯರ್ಸ್ ಹೇಳಿಕೆ ನೀಡಿದ್ದಾರೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed