ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನಕ್ಕೆ ಪ್ರವಾಸ ತೆರಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಇಸಿಬಿ ಮುಖ್ಯಸ್ಥ

Good To See Cricket Back In Pakistan: Ecb Chief Ian Watmore

ಪಾಕಿಸ್ತಾನ ಕ್ರಿಕೆಟ್ ತಂಡ ಕೊರೊನಾ ಆತಂಖದ ಮಧ್ಯೆ ಇಂಗ್ಲೆಂಡ್‌ಗೆ ತೆರಳಿ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ನೂತನ ಮುಖ್ಯಸ್ಥ ಇಯಾನ್ ವಾಟ್ಮೋರ್ ಪಾಕಿಸ್ತಾನಕ್ಕೆ ಇಂಗ್ಲೆಂಡ್ ತಂಡದ ಪ್ರವಾಸದ ಬಗ್ಗೆ ಮಾತುಗಳನ್ನಾಡಿದ್ದಾರೆ.

ಕ್ರಿಕೆಟ್ ಆಯೋಜನೆ ಮಾಡಲು ಪಾಕಿಸ್ತಾನ ಸುರಕ್ಷಿತ ತಾಣವೆಂದಾದರೆ ಇಂಗ್ಲೆಂಡ್ ತಂಡ ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಕ್ರಿಕೆಟ್ ಸರಣಿಗೆ ಪ್ರವಾಸ ತೆರಳಬೇಕು ಎಂದು ಹೇಳಿದ್ದಾರೆ. 2005-06ರ ಪ್ರವಾಸದ ಬಳಿಕ ಇಂಗ್ಲೆಂಡ್ ಭದ್ರತೆಯ ಕಾರಣವನ್ನು ನೀಡಿ ಪಾಕಿಸ್ತಾನ ಪ್ರವಾಸವನ್ನು ತಪ್ಪಿಸಿಕೊಳ್ಳುತ್ತಾ ಬಂದಿದೆ.

ಟಿ20 ಹೈಲೈಟ್ಸ್: ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನಟಿ20 ಹೈಲೈಟ್ಸ್: ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ

ಆದರೆ ಈಗ ಇಂಗ್ಲೆಂಡ್ ತಂಡದ ಪಾಕಿಸ್ತಾನ ಪ್ರವಾಸಕ್ಕೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. 2022ರಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ತೆರಳಿ 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯವನ್ನಾಡುವ ತೀರ್ಮಾನ ಮಾಡಿಕೊಂಡಿದೆ. ಆದರೆ ಈ ಬಗ್ಗೆ ಮುಂದೆ ಯಾವ ರೀತಿಯ ಬೆಳವಣಿಗೆಗಳು ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವುದು ನಮಗೆ ಹಾಗೂ ಕ್ರಿಕೆಟ್‌ಗೆ ಅದ್ಭುತವಾದ ಸಂಗತಿಯಾಗಿದೆ. ಎಲ್ಲವೂ ಸುರಕ್ಷಿತವಾಗಿದೆ ಎಂಬುದು ಖಚಿತವಾಗಿದೆ ಎಂದರೆ ನಾವು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಇಯಾನ್ ವಾಟ್ಮೋರ್ ಹೇಳಿದ್ದಾರೆ.

ಕೊರೊನಾವೈರಸ್ ಪರೀಕ್ಷೆಗಳಿಗಾಗಿ 10 ಕೋ.ರೂ. ವ್ಯಯಿಸಲಿದೆ ಬಿಸಿಸಿಐಕೊರೊನಾವೈರಸ್ ಪರೀಕ್ಷೆಗಳಿಗಾಗಿ 10 ಕೋ.ರೂ. ವ್ಯಯಿಸಲಿದೆ ಬಿಸಿಸಿಐ

ಕೊರೊನಾ ವೈರಸ್‌ನ ಆತಂಕದ ಮಧ್ಯೆ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡು ಸರಣಿಯಲ್ಲಿ ಪಾಲ್ಗೊಂಡಿತ್ತು. ಈ ಮೂಲಕ ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಬ್ಧವಾದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಕ್ಕೆ ಇಂಗ್ಲೆಂಡ್ ವೇದಿಕೆಯಾಯಾಯಿತು.

Story first published: Wednesday, September 2, 2020, 15:23 [IST]
Other articles published on Sep 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X