ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದಂತಕಥೆ ಬ್ರಾಡ್ಮನ್ ಜನ್ಮದಿನ: ಗೂಗಲ್‌ನಿಂದ ಡೂಡಲ್ ಸಮರ್ಪಣೆ

Google dedicates doodle to Sir Don Bradman on his 110th birth anniversary

ನವದೆಹಲಿ, ಆಗಸ್ಟ್ 27: ಕ್ರಿಕೆಟ್‌ನ ದಂತಕಥೆ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರ 110ನೇ ಜನ್ಮದಿನದ ಪ್ರಯುಕ್ತ ಗೂಗಲ್ ಅವರಿಗೆ ಡೂಡಲ್‌ಅನ್ನು ಸಮರ್ಪಿಸಿದೆ.

1908ರ ಆಗಸ್ಟ್ 27ರಂದು ನ್ಯೂಸೌಥ್ ವೇಲ್ಸ್‌ನ ಕೂಟಮುಂಡ್ರದಲ್ಲಿ ಜನಿಸಿದ ಬ್ರಾಡ್ಮನ್, ಟೆಸ್ಟ್ ಕ್ರಿಕೆಟ್‌ನಲ್ಲಿ 99.94ರ ಸರಾಸರಿಯಲ್ಲಿ ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ರಕ್ಷಾಬಂಧನಕ್ಕೆ ವಿರಾಟ್ ಕೊಹ್ಲಿ ಹಂಚಿಕೊಂಡ ಮುದ್ದಾದ ಫೋಟೊರಕ್ಷಾಬಂಧನಕ್ಕೆ ವಿರಾಟ್ ಕೊಹ್ಲಿ ಹಂಚಿಕೊಂಡ ಮುದ್ದಾದ ಫೋಟೊ

2001ರ ಆಗಸ್ಟ್ 25ರಂದು ತಮ್ಮ 92ನೇ ವಯಸ್ಸಿನಲ್ಲಿ ಬ್ರಾಡ್ಮನ್ ನಿಧನರಾಗಿದ್ದರು. ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದೇ ಗುರುತಿಸಲಾಗಿದೆ.

ಬ್ರಾಡ್ಮನ್ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್‌ನಲ್ಲಿ ಸ್ಮರಿಸಿಕೊಂಡಿದ್ದಾರೆ.

'ಸ್ಫೂರ್ತಿದಾಯಕ ಸರ್ ಡಾನ್ ಬ್ರಾಡ್ಮನ್ ಅವರನ್ನು ಭೇಟಿ ಮಾಡಿ 20 ವರ್ಷವಾಯಿತು. ಆದರೆ, ಆ ವಿಶೇಷ ನೆನಪು ಸದಾ ಸ್ಮರಣೀಯ. ಅವರ ಅದ್ಭುತ ಬುದ್ದಿವಂತಿಕೆ, ಹೃದಯವಂತಿಕೆ ಮತ್ತು ತಮಾಷೆಯ ವ್ಯಕ್ತಿತ್ವವನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅವರನ್ನು ಇಂದು ಪ್ರೀತಿಯಿಂದ ನೆನಪಿಸಿಕೊಂಡೆ' ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಕೆಪಿಎಲ್ 2018: ಟಸ್ಕರ್ಸ್ ವಿರುದ್ಧ ಬುಲ್ಸ್ ಗೆ ಎರಡು ವಿಕೆಟ್ ಗೆಲುವುಕೆಪಿಎಲ್ 2018: ಟಸ್ಕರ್ಸ್ ವಿರುದ್ಧ ಬುಲ್ಸ್ ಗೆ ಎರಡು ವಿಕೆಟ್ ಗೆಲುವು

1928ರಲ್ಲಿ ಆಸ್ಟ್ರೇಲಿಯಾವು ಬ್ರಿಸ್ಬೇನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಬ್ರಾಡ್ಮನ್ ಪಾದಾರ್ಪಣೆ ಮಾಡಿದ್ದರು. 1948ರಲ್ಲಿ 40ನೇ ವಯಸ್ಸಿನಲ್ಲಿ ಇದೇ ಎದುರಾಳಿ ತಂಡದ ವಿರುದ್ಧ ತಮ್ಮ ಕೊನೆಯ ಪಂದ್ಯವಾಡಿದ್ದರು.

Google dedicates doodle to Sir Don Bradman on his 110th birth anniversary

ಈ ನಡುವೆ ಅವರು 52 ಪಂದ್ಯಗಳಲ್ಲಿನ 80 ಇನ್ನಿಂಗ್ಸ್‌ಗಳಲ್ಲಿ 6996 ರನ್ ಬಾರಿಸಿದ್ದರು. ಅದರಲ್ಲಿ 29 ಶತಕಗಳಿದ್ದವು. 334 ಅವರು ಗಳಿಸಿದ ಗರಿಷ್ಠ ರನ್.

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಬ್ರಾಡ್ಮನ್, 234 ಪಂದ್ಯಗಳಲ್ಲಿ 117 ಶತಕಗಳ ನೆರವಿನಿಂದ 95.14 ಸರಾಸರಿಯಲ್ಲಿ 28,067 ರನ್ ಗಳಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕಗಳನ್ನು ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 299 ರನ್‌ ಗಳಿಸಿ ಅಜೇಯರಾಗಿ ಉಳಿದ ಏಕೈಕ ಆಟಗಾರ ಅವರು. ಐದನೇ ಕ್ರಮಾಂಕದಲ್ಲಿ ಆಡಿ ತ್ರಿಶತಕ (304) ರನ್ ಗಳಿಸಿದ ಮೊದಲಿಗ ಕೂಡ.

Story first published: Monday, August 27, 2018, 16:53 [IST]
Other articles published on Aug 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X