ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೋವಾ ಮೂಲದ ಕ್ರಿಕೆಟರ್ ಗೆ ನಮನ ಸಲ್ಲಿಸಿದ ಗೂಗಲ್ ಡೂಡ್ಲ್

By Mahesh
Google with a Doodle celebrates Dilip Sardesai Birthday

ಬೆಂಗಳೂರು, ಆಗಸ್ಟ್ 08: ದಿಲೀಪ್ ನಾರಾಯಣ್ ಸರ್ದೇಸಾಯಿ ಗೋವಾ ಸಂಜಾತ ಬಲಗೈ ಬ್ಯಾಟ್ಸ್ ಮನ್ ಎಂದರೆ ಆ ಕಾಲದ ಸ್ಪಿನ್ ಬೌಲರ್ ಗಳಿಗೆ ನಡುಕ ಹುಟ್ಟುತ್ತಿತ್ತು. ಮುಂಬೈ ತಂಡದ ಮೂಲಕ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ ಶ್ರೇಷ್ಠ ಬ್ಯಾಟ್ಸ್ ಮನ್ ನೆನಪಿನಲ್ಲಿ ಸರ್ಚ ಇಂಜಿನ್ ಗೂಗಲ್ ಡೂಡ್ಲ್ ರಚಿಸಿದೆ.

1940ರ ಆಗಸ್ಟ್ 8ರಂದು ಮಾರ್ಗೋವಾದಲ್ಲಿ ಜನಿಸಿದ ದಿಲೀಪ್ ಅವರು 2007ರಲ್ಲಿ ನಿಧನರಾದರು. 1961ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿ, 1972ರಲ್ಲಿ ಇಂಗ್ಲೆಂಡ್ ವಿರುದ್ಧವೇ ಕೊನೆ ಪಂದ್ಯವಾಡಿದ್ದು ವಿಶೇಷ.

ಡೆಮಾಕ್ರಾಸಿಸ್ XI ರಾಜ್ ದೀಪ್ ಪುಸ್ತಕ ಟ್ರೆಂಡಿಂಗ್!ಡೆಮಾಕ್ರಾಸಿಸ್ XI ರಾಜ್ ದೀಪ್ ಪುಸ್ತಕ ಟ್ರೆಂಡಿಂಗ್!

30 ಟೆಸ್ಟ್ ಪಂದ್ಯಗಳಿಂದ 39.23ರನ್ ಸರಾಸರಿಯಲ್ಲಿ 2001 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 9 ಅರ್ಧಶತಕಗಳಿವೆ. 179 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಿಂದ 41.75ರನ್ ಸರಾಸರಿಯಲ್ಲಿ 10,230 ರನ್ ಗಳಿಸಿದ್ದಾರೆ. ಇದರಲ್ಲಿ 25 ಶತಕ ಹಾಗೂ 56 ಅರ್ಧಶತಕಗಳಿವೆ.

ವೆಸ್ಟ್‌ಇಂಡೀಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವು ದಾಖಲಿಸಲು ದಿಲೀಪ್ ಸರ್ದೇಸಾಯಿ ನೆರವಾಗಿದ್ದನ್ನು ಮರೆಯುವಂತಿಲ್ಲ. ಸಬೀನಾ ಪಾರ್ಕಿನಲ್ಲಿ 212 ರನ್ ಗಳಿಸಿದ್ದಲ್ಲದೆ 640ಕ್ಕೂ ಅಧಿಕ ರನ್ ಈ ಸರಣಿಯಲ್ಲಿ ಬಾರಿಸಿದರು. ಇದಲ್ಲದೆ ನ್ಯೂಜಿಲೆಂಡ್ ವಿರುದ್ಧ 200ರನ್ ಗಳಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ 13 ಸೀಸನ್ ಆಡಿದ್ದ ದಿಲೀಪ್ ಅವರು 10 ಫೈನಲ್ ಪಂದ್ಯಗಳಲ್ಲಿ ಆಡಿದ್ದು, ಎಲ್ಲಾ ಬಾರಿ ಬಾಂಬೆ(ಈಗಿನ ಮುಂಬೈ) ಕಪ್ ಎತ್ತಲು ನೆರವಾಗಿದ್ದು ವಿಶೇಷ.

1971ರ ಇಂಗ್ಲೆಂಡ್ ಪ್ರವಾಸದಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ 54 ಹಾಗೂ 40ರನ್ ಗಳಿಸಿ ಓವಲ್ ಮೈದಾನದಲ್ಲಿ ಭಾರತ ತಂಡವು ಚೊಚ್ಚಲ ಬಾರಿಗೆ ಸರಣಿ ಗೆಲ್ಲಲು ನೆರವಾದರು.

ದಿಲೀಪ್ ಅವರ ಪತ್ನಿ ನಂದಿನಿ ಅವರು ಸೆನ್ಸಾರ್ ಬೋರ್ಡ್ ಸದಸ್ಯೆಯಾಗಿದ್ದರು. ಪುತ್ರ ರಾಜದೀಪ್ ಸರ್ದೇಸಾಯಿ ಅವರು ಸದ್ಯ ಇಂಡಿಯಾ ಟುಡೇ ಸಮೂಹದ ಕನ್ಸಲ್ಟಿಂಗ್ ಎಡಿಟರ್ ಆಗಿದ್ದಾರೆ.

Story first published: Wednesday, August 8, 2018, 19:05 [IST]
Other articles published on Aug 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X