ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಆರ್ ನಾಯಕನಾದ ಬಳಿಕ ಕೊಹ್ಲಿ, ಧೋನಿ ಮೆಸೇಜ್ ಹಾಕಿದ್ದರು: ಸ್ಯಾಮ್ಸನ್

Got texts from Virat Kohli, MS Dhoni after I became RR captain: Sanju Samson
Sanju Samsonಗೆ ಫೋನ್ ಮಾಡಿ ವಿಶ್ ಮಾಡಿದ Dhoni, Kohli | Oneindia Kannada

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ನಾಯಕರಾಗಿದ್ದ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಈ ಬಾರಿ ಐಪಿಎಲ್ ಆಟಗಾರರ ಹರಾಜಿನ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು. ರಾಜಸ್ಥಾನ್ ರಾಯಲ್ಸ್‌ಗೆ ಈಗ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ನೂತನ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.

ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್

ಸ್ಟೀವ್ ಸ್ಮಿತ್ ನಾಯಕತ್ವದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಸೃಷ್ಠಿಯಾದಾಗ ನಾಯಕನ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂದು ಕುತೂಹಲ ಮೂಡಿಸಿತ್ತು. ಕುತೂಹಲ ತಣಿಸಿರುವ ರಾಜಸ್ಥಾನ್ ಯುವ ಪ್ರತಿಭಾನ್ವಿತ ಆಟಗಾರನಿಗೆ ನಾಯಕನ ಸ್ಥಾನ ನೀಡಿದೆ. ಇದನ್ನು ಅಧಿಕೃತವಾಗಿ ಘೋಷಿಸಿದೆ.

ನಾಯಕತ್ವದ ಜವಾಬ್ದಾರಿಯ ಬಗ್ಗೆ ಸ್ಯಾಮ್ಸನ್ ಖುಷಿ ತೋರಿಕೊಂಡಿದ್ದಾರೆ. ಕೇರಳ ಅಂಡರ್-19 ತಂಡಕ್ಕೆ ಮತ್ತು ಭಾರತ ಅಂಡರ್ -19 ತಂಡಕ್ಕೆ ನಾಯಕರಾಗಿದ್ದ ಸಂಜು ಸ್ಯಾಮ್ಸನ್‌ಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಮೆಸೇಜ್ ಮೂಲಕ ಶುಭಾಶಯ ತಿಳಿಸಿದ್ದಾಗಿ ಸ್ಯಾಮ್ಸನ್ ಹೇಳಿದ್ದಾರೆ.

ಐಪಿಎಲ್ 2021: 14 ಸ್ಟಾರ್‌ಸ್ಪೋರ್ಟ್ಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್!ಐಪಿಎಲ್ 2021: 14 ಸ್ಟಾರ್‌ಸ್ಪೋರ್ಟ್ಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್!

26ರ ಹರೆಯದ ಸಂಜು 7 ಟಿ20ಐ ಪಂದ್ಯಗಳಲ್ಲಿ 83 ರನ್, 107 ಐಪಿಎಲ್ ಪಂದ್ಯಗಳಲ್ಲಿ 2584 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ 2 ಶತಕಗಳ ದಾಖಲೆಯೂ ಸ್ಯಾಮ್ಸನ್ ಹೆಸರಿನಲ್ಲಿದೆ. ಏಪ್ರಿಲ್ 9ರಂದು ಐಪಿಎಲ್ ಪಂದ್ಯಗಳು ಆರಂಭಗೊಳ್ಳಲಿದ್ದು, ಏಪ್ರಿಲ್ 12ರಂದು ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಮೊದಲ ಪಂದ್ಯ ನಡೆಯಲಿದೆ.

Story first published: Tuesday, April 6, 2021, 10:28 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X