ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ವಿರುದ್ಧ ಟಿ20 ಸರಣಿಗೆ ಡಿವಿಲಿಯರ್ಸ್?: ಸುಳಿವು ನೀಡಿದ ಗ್ರೇಮ್ ಸ್ಮಿತ್

Graeme smith hints at ab de villiers’ comeback for t20I against west indies t20i series

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಬಿ ಡಿವಿಲಿಯರ್‌ ಪುನರಾಗಮನದ ಬಗ್ಗೆ ಹಲವು ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿದೆ. ಅಭಿಮಾನಿಗಳು ಕೂಡ ಈ ಸುದ್ದಿ ನಿಜವಾಗಲಿ ಎಂದು ಕಾಯುತ್ತಿದ್ದರು. ಕಡೆಗೂ ಆ ಕ್ಷಣ ಈಗ ಹತ್ತಿರವಾದಂತಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಗ್ರೇಮ್ ಸ್ಮಿತ್ ಈ ಬಗ್ಗೆ ಸುಳಿವನ್ನು ನೀಡಿದ್ದಾರೆ. ಮುಂದಿನ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಡಿವಿಲಿಯರ್ಸ್ ಪುನರಾಗಮನಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಾರ್ಕ್ ಬೌಷರ್ ಮಾತನಾಡುತ್ತಾ ಟಿ20 ವಿಶ್ವಕಪ್ ವೇಳೆಗೆ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡಕ್ಕೆ ಪುನರಾಗಮನ ಮಾಡುವ ಸಾಧ್ಯತೆಯ ಬಗ್ಗೆ ಹೇಳಿದ್ದರು. ಐಪಿಎಲ್ ಮುಕ್ತಾಯದ ನಂತರ ಈ ಬಗ್ಗೆ ಸ್ಪಷ್ಟನೆಗಳು ದೊರೆಯಲಿದೆ ಎಂದು ಬೌಷರ್ ಹೇಳಿದ್ದರು.

ಆ ರೀತಿಯ ಆಟಗಾರನನ್ನು ಯಾವ ತಂಡವೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಶಂಸಿ ಹೇಳಿದ್ದು ಯಾರ ಬಗ್ಗೆ ಗೊತ್ತಾ!ಆ ರೀತಿಯ ಆಟಗಾರನನ್ನು ಯಾವ ತಂಡವೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಶಂಸಿ ಹೇಳಿದ್ದು ಯಾರ ಬಗ್ಗೆ ಗೊತ್ತಾ!

ಗ್ರೇಮ್ ಸ್ಮಿತ್ ಸುಳಿವು

ಗ್ರೇಮ್ ಸ್ಮಿತ್ ಸುಳಿವು

ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಡಿವಿಲಿಯರ್ಸ್ ಆಡುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. ಡಿವಿಲಿಯರ್ಸ್ ಅಲ್ಲದೆ ಅನುಭವಿ ಆಟಗಾರರಾದ ಕ್ರಿಸ್ ಮೋರಿಸ್ ಹಾಗೂ ಇಮ್ರಾನ್ ತಾಹೀರ್ ಕೂಡ ದಕ್ಷಿಣ ಆಫ್ರಿಕಾ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಮಾತನಾಡಿದ್ದಾರೆ.

ಉತ್ತುಂಗದಲ್ಲಿದ್ದಾಗಲೇ ವಿದಾಯ

ಉತ್ತುಂಗದಲ್ಲಿದ್ದಾಗಲೇ ವಿದಾಯ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಉತ್ತುಂಗ ಸ್ಥಾನದಲ್ಲಿದ್ದಾಗಲೇ ಎಬಿ ಡಿವಿಲಿಯರ್ಸ್ 15 ವರ್ಷಗಳ ವರ್ಣರಂಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ 2018ರಲ್ಲಿ ವಿದಾಯವನ್ನು ಹೇಳಿದ್ದರು. 34ರ ಹರೆಯದಲ್ಲಿ ಡಿವಿಲಿಯರ್ಸ್ ಈ ನಿರ್ಧಾರವನ್ನು ತೆಗೆದುಕೊಂಡಾಗ ಎಲ್ಲರೂ ಅಚ್ಚರಿಗೊಳಗಾಗಿದ್ದರು. 2018ರ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಡಿದ ಟೆಸ್ಟ್ ಪಂದ್ಯದ ನಂತರ ವಿದಾಯವನ್ನು ಘೋಷಿಸಿದ್ದರು.

ಲೀಗ್ ಕ್ರಿಕೆಟ್‌ನಲ್ಲಿ ಎಬಿಡಿ ಮಿಂಚು

ಲೀಗ್ ಕ್ರಿಕೆಟ್‌ನಲ್ಲಿ ಎಬಿಡಿ ಮಿಂಚು

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ ನಂತರವೂ ಡಿವಿಲಿಯರ್ಸ್ ಸಾಕಷ್ಟು ಲೀಗ್ ಕ್ರಿಕೆಟ್‌ಗಳಲ್ಲಿ ಅದ್ಭುತವಾದ ಪ್ರದರ್ಶನವನ್ನು ಮುಂದುವರಿಸಿದ್ದರು. ಈ ಮೂಲಕ ತನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂಬುದನ್ನು ಸಾರಿದ್ದರು. ಐಪಿಎಲ್‌ನಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿಕೊಂಡು ಬರುತ್ತಿರುವ ಡಿವಿಲಿಯರ್ಸ್ ಈ ಬಾರಿಯ ಟೂರ್ನಿಯಲ್ಲಿಯೂ ಶ್ರೇಷ್ಠ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ.

Story first published: Thursday, May 6, 2021, 23:27 [IST]
Other articles published on May 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X