ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಫೀಲ್ಡಿಂಗ್ ತಂತ್ರದ ಬಗ್ಗೆ ಇಂಗ್ಲೆಂಡ್ ಮಾಜಿ ಆಟಗಾರನ ಮೆಚ್ಚುಗೆ

Graeme Swann lauds Kohlis field placements to spin bowling

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಈಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಸ್ಪಿನ್ ಬೌಲಿಂಗ್ ದಾಳಿಗೆ ಎರಡು ತಂಡಗಳ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿರುವುದು ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಗ್ರೇಮ್ ಸ್ವಾನ್ ವಿರಾಟ್ ಕೊಹ್ಲಿಯ ಫೀಲ್ಡಿಂಗ್ ಜಾಣ್ಮೆಯ ಬಗ್ಗೆ ಕೊಂಡಾಡಿದ್ದಾರೆ. ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ಗ್ರೇಮ್ ಸ್ವಾನ್ ಮೆಚ್ಚುಗೆಯನ್ನು ಸೂಚಿಸುತ್ತಾ ಇದರ ಯಶಸ್ಸಿನಲ್ಲಿ ನಾಯಕ ವಿರಾಟ್ ಕೊಹ್ಲಿಯ ಫೀಲ್ಡಿಂಗ್ ಜಾಣ್ಮೆಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ಭಾರತ vs ಇಂಗ್ಲೆಂಡ್, 3ನೇ ಟೆಸ್ಟ್‌ ಪಂದ್ಯ, 2ನೇ ದಿನ, Live ಸ್ಕೋರ್‌ಭಾರತ vs ಇಂಗ್ಲೆಂಡ್, 3ನೇ ಟೆಸ್ಟ್‌ ಪಂದ್ಯ, 2ನೇ ದಿನ, Live ಸ್ಕೋರ್‌

"ವಿರಾಟ್ ಕೊಹ್ಲಿ ಅದ್ಭುತವಾಗಿ ಫೀಲ್ಡಿಂಗ್ ಸೆಟ್ ಮಾಡಿದ್ದರು. ಆತ ಔಟ್ ಫೀಲ್ಡ್‌ನಲ್ಲಿ ಫೀಲ್ಡರ್‌ಅನ್ನು ನಿಲ್ಲಿಸಿದ್ದರು. ಹಾಗೇಯೇ ಬ್ಯಾಟ್ಸ್‌ಮನ್ ಮೇಲೆ ಒತ್ತಡವನ್ನು ಹೇರಿದ್ದರು. ನೀವು ಟೀ ಆಫ್ ಮಾಡಲು ಹೋದರೆ ಬಲೆಗೆ ಬೀಳುತ್ತೀರಿ ಎಂಬ ಎಚ್ಚರಿಕೆಯನ್ನು ನೀಡಿದಂತಿತ್ತು ಎಂದು ಗ್ರೇಮ್ ಸ್ವಾನ್ ಟೀಮ್ ಇಂಡಿಯಾ ನಾಯಕನ ಬಗ್ಗೆ ಪ್ರಶಂಸಿದ್ದಾರೆ.

ಅದು ತುಂಬಾ ಚತುರ ತಂತ್ರಗಾರಿಕೆಯಾಗಿತ್ತು. ಅದರಿಂದಾಗಿ ರನ್‌ರೇಟ್‌ ಬಹಳಷ್ಟು ನಿಯಂತ್ರಣಕ್ಕೆ ಬಂದಿತ್ತು ಎಂದು ಗ್ರೇಮ್ ಸ್ವಾನ್ ಸ್ಟಾರ್ ಸ್ಪೋರ್ಟ್ಸ್‌ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಫೀಲ್ಡಿಂಗ್ ಬಗ್ಗೆ ಸ್ವಾನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪಂದ್ಯದ ಮಧ್ಯೆಯೇ ವಿರಾಟ್ ಕೊಹ್ಲಿ ಬಳಿಗೆ ಬಂದ ಅಭಿಮಾನಿ: ವಿಡಿಯೋಪಂದ್ಯದ ಮಧ್ಯೆಯೇ ವಿರಾಟ್ ಕೊಹ್ಲಿ ಬಳಿಗೆ ಬಂದ ಅಭಿಮಾನಿ: ವಿಡಿಯೋ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರವಾಗಿ ಅಕ್ಷರ್ ಪಟೇಲ್ ಆರು ವಿಕೆಟ್ ಪಡೆದು ಮಿಂಚಿದ್ದರು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಕೂಡ ಉತ್ತಮ ಬೌಲಿಂಗ್ ದಾಳಿಯನ್ನು ನಡೆಸಿದೆ. ಭಾರತವನ್ನು 145 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಇಂಗ್ಲೆಂಡ್ ಕೂಡ ಯಶಸ್ವಿಯಾಯಿತು. ಇಂಗ್ಲೆಂಡ್ ಪರವಾಗಿ ನಾಯಕ ಜೋ ರೂಟ್ 5 ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದರು.

Story first published: Friday, February 26, 2021, 8:50 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X