ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲೂ ಸಲ್ಲುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ನೆನಪಿಸಿದ ಕೆಎಲ್ ರಾಹುಲ್!

Great to be compared with someone like Dravid: KL Rahul

ಬೆಂಗಳೂರು, ಜನವರಿ 18: ಟೀಮ್ ಇಂಡಿಯಾಕ್ಕೆ ಪ್ರತಿಭಾನ್ವಿತ ಆಟಗಾರರನ್ನು ಕೊಡುಗೆಕೊಟ್ಟ ಹಿರಿಮೆ ನಮ್ಮ ಕನ್ನಡ ಮಣ್ಣಿನದ್ದು. ಎರಪಳ್ಳಿ ಪ್ರಸನ್ನ, ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಕೆಎಲ್ ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್ ಹೀಗೆ ಹೆಸರಿಸುತ್ತಾ ಹೋದರೆ ಈ ಪಟ್ಟಿ ಹನುಮಂತನ ಬಾಲದ ರೀತೀಲಿ ಬೆಳೆಯುತ್ತಲೇ ಹೋಗುತ್ತದೆ.

ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!

ಅದರಲ್ಲೂ ಕುಂಬ್ಳೆ, ದ್ರಾವಿಡ್, ಶ್ರೀನಾಥ್ ಇಂಥ ಅನೇಕರು ಕನ್ನಡಿಗರು ಭಾರತ ಕ್ರಿಕೆಟ್‌ ತಂಡದಲ್ಲಿ ಮಿನುಗಿ ಕನ್ನಡ ನಾಡಿಗೆ ಹೆಮ್ಮೆ ತಂದವರಿದ್ದಾರೆ. ಭಾರತದ ಕ್ರಿಕೆಟ್‌ ದಿಗ್ಗಜ, 'ಗ್ರೇಟ್ ವಾಲ್' ರಾಹುಲ್ ದ್ರಾವಿಡ್ ತೀರಾ ಇತ್ತೀಚೆಗೆ ಹೆಚ್ಚು ನೆನಪಾದರು. ದ್ರಾವಿಡ್‌ರನ್ನು ನೆನಪಿಸಿದ್ದು ಯುವ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್.

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

ಭಾರತ ಕ್ರಿಕೆಟ್‌ ತಂಡದಲ್ಲಿ ಈ ಹಿಂದೆ, ಯಾವ ಜವಾಬ್ದಾರಿ ಕೊಟ್ಟರೂ ರಾಹುಲ್ ದ್ರಾವಿಡ್ ಅದಕ್ಕೆ ಹೆಗಲುಕೊಡುತ್ತಿದ್ದರು. ತಂಡದ ಪರ ಕೊಸರಾಡುತ್ತಿದ್ದರು. ಈಗ ಟೀಮ್ ಇಂಡಿಯಾದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಕೂಡ ದ್ರಾವಿಡ್‌ ಹಾದಿಯಲ್ಲೇ ಇದ್ದಂತಿದೆ. ರಾಹುಲ್ ಈಚಿನ ಆಟ ದ್ರಾವಿಡ್‌ರನ್ನೇ ನೆನಪಿಸುವಂತಿದೆ.

ಎಲ್ಲೂ ಸಲ್ಲಬಲ್ಲ ರಾಹುಲ್

ಎಲ್ಲೂ ಸಲ್ಲಬಲ್ಲ ರಾಹುಲ್

ರಾಜ್‌ಕೋಟ್‌ನಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದರು. ಅಷ್ಟೇ ಅಲ್ಲ 52 ಎಸೆತಗಳಿಗೆ 80 ರನ್ ಕೊಡುಗೆಯೂ ನೀಡಿದರು. ರಾಹುಲ್ ಅವರ ಬ್ಯಾಟಿಂಗ್‌ ಕ್ರಮಾಂಕವನ್ನು ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುತ್ತಲೇಯಿದೆ. ಆದರೆ ಎಲ್ಲಾ ಕ್ರಮಾಂಕಕ್ಕೂ ರಾಹುಲ್ ಹೊಂದಿಕ್ಕೊಳ್ಳುತ್ತಿದ್ದಾರೆ, ಪ್ರೌಢ ಆಟ ಪ್ರದರ್ಶಿಸುತ್ತಿದ್ದಾರೆ.
ರಾಜ್‌ಕೋಟ್‌ನಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೊಟ್ಟರೆ ಅದನ್ನೂ ರಾಹುಲ್ ಯಶಸ್ವಿಯಾಗಿ ನಿಭಾಯಿಸಿದರು.

ದ್ರಾವಿಡ್‌ ಅವರದ್ದೂ ಇದೇ ಕತೆ

ದ್ರಾವಿಡ್‌ ಅವರದ್ದೂ ಇದೇ ಕತೆ

ಟೀಮ್ ಇಂಡಿಯಾದಲ್ಲಿದ್ದಾಗ ರಾಹುಲ್ ದ್ರಾವಿಡ್‌ ಕೂಡ ಹೀಗೆಯೇ, ವಹಿಸಿಕೊಟ್ಟ ಎಲ್ಲಾ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳು ವಿಫಲಾರಾದಾಗ, ಕೀಪರ್ ಗಾಯಗೊಂಡಾಗ, ಬೆಸ್ಟ್ ಫಿನಿಷರ್ ಇಲ್ಲದಾಗೆಲ್ಲ ರಾಹುಲ್ ದ್ರಾವಿಡ್ ಅವರಿಗೆ ಜವಾಬ್ದಾರಿ ನೀಡಲಾಗುತ್ತಿತ್ತು. ದ್ರಾವಿಡ್ ಎಲ್ಲಾ ಜವಾಬ್ದಾರಿಗಳನ್ನೂ ಹೆಗಲಿಗೇರಿಸಿಕೊಳ್ಳುತ್ತಿದ್ದರು. ಅದೇ ಆಯಾ ಬ್ಯಾಟಿಂಗ್ ಕ್ರಮಾಂಕ, ಕೀಪರ್ ಫಿಟ್‌ ಇದ್ದಾಗ ಮತ್ತೆ ದ್ರಾವಿಡ್‌ರನ್ನು ಕೊಂಚ ಕಡೆಗಣಿಸಲಾಗುತ್ತಿತ್ತು.

ಬಾಲ್ಯದಲ್ಲೂ ದ್ರಾವಿಡ್‌ಗೆ ಹೋಲಿಸುತ್ತಿದ್ದರು

ಬಾಲ್ಯದಲ್ಲೂ ದ್ರಾವಿಡ್‌ಗೆ ಹೋಲಿಸುತ್ತಿದ್ದರು

'ದ್ರಾವಿಡ್ ಅವರಂತವರಿಗೆ ಹೋಲಿಸುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಸಣ್ಣವನಿದ್ದಾಗ, ಕ್ರಿಕೆಟ್‌ ಆಡುತ್ತಾ ಬೆಳೆಯುತ್ತಿದ್ದಾಗ ಇದೇ ಹೋಲಿಕೆ ಆಗಾಗ ಬರುತ್ತಿದ್ದಿದಿದೆ. ಯಾಕೆಂದರೆ ಅವರು ರಾಹುಲ್ ದ್ರಾವಿಡ್ ನಾನು ಕೂಡ ರಾಹುಲ್. ಇಬ್ಬರೂ ಇದೇ ಕರ್ನಾಟಕದ ಕ್ರಿಕೆಟಿಗರು,' ಎಂದು ದ್ರಾವಿಡ್‌ ಬಗೆಗಿನ ಹೋಲಿಕೆಗೆ ಕೆಎಲ್ ರಾಹುಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಂದು ಕ್ಷಣ ದ್ರಾವಿಡ್ ನೆನಪಾದರು

ಒಂದು ಕ್ಷಣ ದ್ರಾವಿಡ್ ನೆನಪಾದರು

ಕಳೆದ 9 ತಿಂಗಳಿನಿಂದ ಓಪನರ್, ಒನ್ ಡೌನ್, 4ನೇ, 5ನೇ ಬ್ಯಾಟಿಂಗ್ ಕ್ರಮಾಂಕ, ವಿಕೆಟ್ ಕೀಪಿಂಗ್‌ ಹೀಗೆ ತಂಡದ ಅಗತ್ಯಕ್ಕೆ ತಕ್ಕಂತೆ ರಾಹುಲ್‌ಗೆ ಬೇರೆ ಬೇರೆ ಕರ್ತವ್ಯಗಳನ್ನು ವಹಿಸಿಕೊಡಲಾಗುತ್ತಿದೆ. ರಾಹುಲ್ ಇವೆಲ್ಲದಕ್ಕೂ ಹೊಂದಿಕೊಂಡು ಯಶಸ್ವಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ರಾಹುಲ್ ಈಗಿನ ಪರಿಸ್ಥಿತಿ ಆಗ ದ್ರಾವಿಡ್ ಇದ್ದ ಬಗೆಯನ್ನೊಮ್ಮೆ ನೆನಪಿಸಿತು. ಕಣ್ಣಮುಂದೆ 'ಗೋಡೆ' ನಿಂತಿತು.

Story first published: Saturday, January 18, 2020, 16:51 [IST]
Other articles published on Jan 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X