ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್

Greg Chappell Didn’t Spoil My Career: Irfan Pathan

ಟೀಮ್ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಬಾಯಲ್ಲಿ ಹೊಗಳಿಸಿಕೊಂಡ ಏಕೈಕ ಆಟಗಾರ ಅಂದರೆ ಅದು ಇರ್ಫಾನ್ ಪಠಾಣ್. ಇರ್ಫಾನ್ ತಮ್ಮ ನಿವೃತ್ತಿಯನ್ನು ಘೋಷಿಸಿದ ಬಳಿಕ ಚಾಪೆಲ್ ಇರ್ಫಾನ್ ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರು. ಬಳಿಕ ಪಠಾಣ್ ಕೂಡ ಚಾಪೆಲ್ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದರು.

ಈಗ ಇರ್ಪಾನ್ ಗ್ರೇಗ್ ಚಾಪೆಲ್ ವಿಚಾರವಾಗಿ ಮತ್ತೊಮ್ಮೆ ಮಾತನಾಡಿದ್ದಾರೆ. ಇರ್ಫಾನ್ ಪಠಾಣ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಗ್ರೇಗ್ ಚಾಪೆಲ್ ಗುರುತಿಸುವುದಕ್ಕೂ ಮುನ್ನವೇ ಸಚಿನ್ ತೆಂಡೂಲ್ಕರ್ ಗುರಿತಿಸಿದ್ದರು ಎಂದು ಅವರು ಹೇಳಿದ್ದಾರೆ. ತನ್ನನ್ನು 3ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ ಎಂದು ಬೆಂಬಲಿಸಿದ್ದು ಸಚಿನ್ ತೆಂಡೂಲ್ಕರ್ ಎಂಬ ಸಂಗತಿಯನ್ನು ಪಠಾಣ್ ಹೇಳಿಕೊಂಡಿದ್ದಾರೆ.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ

ಶ್ರೀಲಂಕಾ ವಿರುದ್ಧದ 2005ರ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಇರ್ಪಾನ್ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. 3ನೇ ಕ್ರಮಾಂಕದಲ್ಲಿ ಮೊತ್ತ ಮೊದಲ ಬಾರಿ ಬ್ಯಾಟ್ ಮಾಡಿದ್ದ ಪಠಾಣ್ 70 ಎಸೆತಗಳಲ್ಲಿ 83 ರನ್ ಸಿಡಿಸಿ ತಂಡಕ್ಕೆ ಸ್ಫೋಟಕ ಆರಂಭ ತಂದುಕೊಟ್ಟಿದ್ದರು. ಪರಿಣಾಮ ಭಾರತ ತಂಡ 152 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು.

"ಅಂದಿನ ಪಂದ್ಯದಲ್ಲಿ ನಾಯಕ ರಾಹುಲ್ ದ್ರಾವಿಡ್‌ಗೆ ಸಚಿನ್ ತೆಂಡೂಲ್ಕರ್ ಈ ಸಲಹೆಯನ್ನು ನೀಡಿದ್ದರು.'ಸಿಕ್ಸರ್ ಬಾರಿಸುವ ಸಾಮರ್ಥ್ಯವಿದ್ದು ಹೊಸ ಚೆಂಡಿನ ಎದುರು ಉತ್ತಮವಾಗಿ ಬ್ಯಾಟ್ ಮಾಡಿ ಬಳಿಕ ವೇಗದ ಬೌಲಿಂಗ್ ನಲ್ಲೂ ನೆರವಾಗಬಲ್ಲ' ಎಂದು ಸಚಿನ್ ಸಲಹೆ ನೀಡಿದ್ದರು" ಎಂದು ಪಠಾಣ್ ಇತ್ತೀಚಿನ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮನ್ಸ್ ತೆಗೆದುಹಾಕಿ ಎಂದ ಬೋರ್ಡ್ ಸದಸ್ಯವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮನ್ಸ್ ತೆಗೆದುಹಾಕಿ ಎಂದ ಬೋರ್ಡ್ ಸದಸ್ಯ

ಗ್ರೇಗ್ ಚಾಪೆಲ್ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿ ನನ್ನ ವೃತ್ತಿ ಬದುಕನ್ನು ಹಾಳು ಮಾಡಿದರು ಎನ್ನುವ ಮಾತುಗಳು ಇವೆ. ಆದರೆ ಅವರಿಗೆ ಆ ಉದ್ದೇಶವಿರಲಿಲ್ಲ ಎಂದು ನಾನು ನಿವೃತ್ತಿಯ ಸಂದರ್ಭದಲ್ಲೂ ಹೇಳಿಕೊಂಡಿದ್ದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಖಿಸುವ ಯೋಚನೆ ಚಾಪೆಲ್ ಅವರದ್ದು ಆಗಿರಲೇ ಇಲ್ಲ ಎಂದು ಇರ್ಫಾನ್ ಪಠಾಣ್ ಸ್ಪಷ್ಟಪಡಿಸಿದ್ದಾರೆ.

Story first published: Friday, July 3, 2020, 9:52 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X