ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಕ್ವಾಲಿಫೈಯರ್ 1ರಲ್ಲಿ GT vs RR; ಕೋಲ್ಕತ್ತಾದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆ!

GT vs RR, IPL 2022 Qualifier 1 Weather Update: Will Rain Play Spoilsport At Kolkata

ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕ್ರಮವಾಗಿ ಅಗ್ರ ಎರಡು ಸ್ಥಾನದಲ್ಲಿವೆ. ಐಪಿಎಲ್ 2022ರ ಕ್ವಾಲಿಫೈಯರ್ 1ರಲ್ಲಿ ಮಂಗಳವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಲಿವೆ.

ಕ್ವಾಲಿಫೈಯರ್ 1ರಲ್ಲಿ ಗೆದ್ದವರು ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಡಲಿದ್ದರೆ, ಸೋತವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಎಲಿಮಿನೇಟರ್ ವಿಜೇತರ ವಿರುದ್ಧ ಕ್ವಾಲಿಫೈಯರ್ 2 ಅನ್ನು ಆಡುತ್ತಾರೆ.

IPL 2022 Playoffs Rules : ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಟ್ರೋಫಿ ಕನಸು ಭಗ್ನ; ಪ್ಲೇಆಫ್ ಹೊಸ ನಿಯಮ ಏನು ಹೇಳುತ್ತೆ?IPL 2022 Playoffs Rules : ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಟ್ರೋಫಿ ಕನಸು ಭಗ್ನ; ಪ್ಲೇಆಫ್ ಹೊಸ ನಿಯಮ ಏನು ಹೇಳುತ್ತೆ?

ಪ್ರಸಕ್ತ ಐಪಿಎಲ್‌ನ ಅಗ್ರ ನಾಲ್ಕು ತಂಡಗಳು ಈಗಾಗಲೇ ಕೋಲ್ಕತ್ತಾ ತಲುಪಿವೆ. ಆದರೆ ನಗರದ ಹವಾಮಾನವು ಕ್ವಾಲಿಫೈಯರ್ 1 ಪಂದ್ಯದ ಮೇಲೆ ಪರಿಣಾಮ ಬೀರಬಹುದು. ಅಕ್ಯುವೆದರ್ ಪ್ರಕಾರ, ಮಂಗಳವಾರ ಸಂಜೆ ಗುಡುಗು ಅಥವಾ ಮಳೆಯಾಗುವುದರಿಂದ ಪಂದ್ಯ ವಿಳಂಬಕ್ಕೆ ಕಾರಣವಾಗಬಹುದು.

ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ

ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ

AccuWeather ವೆಬ್‌ಸೈಟ್ ಪ್ರಕಾರ, ಇಂದು ಮಧ್ಯಾಹ್ನ ಸುಮಾರು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆದರೆ ದಿನ ಕಳೆದಂತೆ, ಹವಾಮಾನವು ಸ್ವಲ್ಪ ಸಮಯದವರೆಗೆ ಸ್ಪಷ್ಟವಾಗುವ ನಿರೀಕ್ಷೆಯಿದೆ. ಆದಾಗ್ಯೂ, ರಾತ್ರಿ 8 ಗಂಟೆಗೆ (IST) ಗುಡುಗು ಸಹಿತ ಮೋಡ ಕವಿದ ವಾತಾವರಣ ಇರಲಿದೆ ಎಂದು ವೆಬ್‌ಸೈಟ್ ಹೇಳಿದೆ.

ಕಳೆದ ದೊಂದು ವಾರದಿಂದ ಕೋಲ್ಕತ್ತಾದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ ಮತ್ತು ನಿಗದಿತ ಸಮಯದಲ್ಲಿ ಯಾವುದೇ ಆಟ ಸಾಧ್ಯವಿಲ್ಲ. ನಂತರ ಸೂಪರ್ ಓವರ್ ಆಟ ಎರಡು ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

ಐಪಿಎಲ್ ಮಾರ್ಗಸೂಚಿಗಳೆನು?

ಐಪಿಎಲ್ ಮಾರ್ಗಸೂಚಿಗಳೆನು?

ಒಂದು ವೇಳೆ ಸೂಪರ್ ಓವರ್ ಕೂಡ ಸಾಧ್ಯವಾಗದಿದ್ದಲ್ಲಿ, ಲೀಗ್ ಹಂತವು ಆದ್ಯತೆ ಪಡೆಯುತ್ತದೆ ಮತ್ತು ವಿಜೇತರನ್ನು ನಿರ್ಧರಿಸುತ್ತದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಐಪಿಎಲ್ ಬ್ರೀಫಿಂಗ್ ಟಿಪ್ಪಣಿಯನ್ನು ಉಲ್ಲೇಖಿಸಿ ಸೋಮವಾರ ವರದಿ ಮಾಡಿದೆ.

"ಪ್ಲೇಆಫ್ ಪಂದ್ಯದ ಓವರ್‌ಗಳ ಸಂಖ್ಯೆಯನ್ನು ಅಗತ್ಯವಿದ್ದಲ್ಲಿ ಪ್ರತಿ ತಂಡಕ್ಕೂ ಐದು ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಲು ಅವಕಾಶವಿದೆ," ಎಂದು ಐಪಿಎಲ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಪರಿಸ್ಥಿತಿಗಳು ಅನುಮತಿಸಿದರೆ ಸೂಪರ್ ಓವರ್

ಪರಿಸ್ಥಿತಿಗಳು ಅನುಮತಿಸಿದರೆ ಸೂಪರ್ ಓವರ್

"ಎಲಿಮಿನೇಟರ್ ಮತ್ತು ಪ್ರತಿ ಕ್ವಾಲಿಫೈಯರ್ ಪ್ಲೇಆಫ್ ಪಂದ್ಯಗಳಿಗೆ, ಮೂಲ ದಿನದ ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ ಐದು-ಓವರ್‌ಗಳ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ತಂಡಗಳು ಮತ್ತು ಪರಿಸ್ಥಿತಿಗಳು ಅನುಮತಿಸಿದರೆ ಸೂಪರ್ ಓವರ್ ಆಡುತ್ತವೆ".

ಈ ಮೂಲಕ ಸಂಬಂಧಿತ ಎಲಿಮಿನೇಟರ್ ಅಥವಾ ಕ್ವಾಲಿಫೈಯರ್ ಪಂದ್ಯದ ವಿಜೇತರನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ಸಾಧ್ಯವಾಗದಿದ್ದಲ್ಲಿ "ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಟೇಬಲ್‌ನಲ್ಲಿ ಗರಿಷ್ಠ ಸ್ಥಾನ ಗಳಿಸಿದ ತಂಡವನ್ನು ಸಂಬಂಧಿತ ಪ್ಲೇಆಫ್ ಪಂದ್ಯ ಅಥವಾ ಫೈನಲ್‌ನ ವಿಜೇತ ಎಂದು ಘೋಷಿಸಲಾಗುತ್ತದೆ," ಎಂದು ಪಿಟಿಐ ಸೇರಿಸಿದೆ.

ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದರೆ, ಕ್ವಾಲಿಫೈಯರ್ 2 ಮತ್ತು ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ನಾಲ್ಕು ತಂಡಗಳ ನೆಟ್ ರನ್‌ರೇಟ್ ಏನಿದೆ?

ನಾಲ್ಕು ತಂಡಗಳ ನೆಟ್ ರನ್‌ರೇಟ್ ಏನಿದೆ?

ಸೂಪರ್ ಓವರ್ ಆಡದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾದರೆ ನೆಟ್‍ ರನ್‌ರೇಟ್‌ನಲ್ಲಿ ಮುಂದಿರುವ ತಂಡ 2ನೇ ಎಲಿಮಿನೇಟರ್‌ಗೆ ತೇರ್ಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲಿಮಿನೇಟರ್ ಪಂದ್ಯವಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ನೆಟ್ ರನ್‌ರೇಟ್ ವರದಾನವಾಗುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ 2022ರ ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿರುವ ಗುಜರಾತ್ ತಂಡ +0.316 ನೆಟ್‌ ರನ್‌ರೇಟ್ ಮತ್ತು 20 ಅಂಕಗಳನ್ನು ಹೊಂದಿದ್ದು, ಪಂದ್ಯ ರದ್ದಾದರೂ ನೇರವಾಹಿ ಫೈನಲ್ ತಲುಪಲಿದೆ. ಇನ್ನು 2ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಕೂಡ 18 ಅಂಕಗಳೊಂದಿಗೆ +0298 ನೆಟ್ ರನ್‌ರೇಟ್ ಹೊಂದಿದೆ.

Harshal Patel ನಾಳಿನ ಪಂದ್ಯವನ್ನು ಆಡ್ತಾರಾ? | OneIndia Kannada
ಆರ್‌ಸಿಬಿ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಬರುವ ಸಾಧ್ಯತೆ

ಆರ್‌ಸಿಬಿ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಬರುವ ಸಾಧ್ಯತೆ

3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ 18 ಅಂಕಗಳೊಂದಿಗೆ +0.251 ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳೊಂದಿಗೆ -0.253 ನೆಟ್ ರನ್‌ರೇಟ್ ಹೊಂದಿದೆ. ಇದೆಲ್ಲವನ್ನು ಗಮನಿಸಿದಾಗ ಅದೃಷ್ಟದ ಮೂಲಕ ಪ್ಲೇಆಫ್ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಪ್ಲೇಆಫ್‍ನಲ್ಲಿ ನೆಟ್ ರನ್‌ರೇಟ್ ಮತ್ತು ಅಂಕಗಳು ಕಡಿಮೆ ಇರುವುದು ಚೊಚ್ಚಲ ಐಪಿಎಲ್ ಟ್ರೋಫಿ ಕನಸು ನುಚ್ಚುನೂರಾಗಲಿದೆ. ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ನೀಡಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾದರೆ, ನೆಟ್‍ ನೆಟ್ ರನ್‌ರೇಟ್ ಆಧಾರದ ಮೇಲೆ ಲಕ್ನೋ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. ಇದು ಪ್ಲೇಆಫ್ ಪಂದ್ಯಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಮೇಲುಗೈ ಸಾಧಿಸಿದೆ. ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಕೋಲ್ಕತ್ತಾಗೆ ತೆರಳಿರುವ ಆರ್‌ಸಿಬಿ ಪಂದ್ಯವಾಡದೇ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ.

Story first published: Tuesday, May 24, 2022, 19:16 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X