ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

GT vs RR: ಅಂತಿಮ ಓವರ್‌ನಲ್ಲಿ ಅತಿ ಹೆಚ್ಚು ಬಾರಿ ರನ್‌ ಚೇಸ್‌ ಮಾಡಿದ ಗುಜರಾತ್ ಟೈಟನ್ಸ್‌ ದಾಖಲೆ

Gujarat titans

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್ 2022ರ ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ಮೂರು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದು ಬೀಗಿದೆ. ಪಂದ್ಯ ಜಯಿಸಿದ್ದಷ್ಟೇ ಅಲ್ಲದೆ ಚೊಚ್ಚಲ ಐಪಿಎಲ್‌ ಸೀಸನ್‌ನಲ್ಲೇ ಫೈನಲ್ ತಲುಪಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್‌ ಎದುರಾಳಿ ರಾಜಸ್ತಾನ್ ತಂಡವನ್ನ 188ರನ್‌ಗಳಿಗೆ ಕಟ್ಟಿಹಾಕಿತು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್‌ ಎಲ್ಲೂ ಕಳೆಗುಂದದೆ ಸುಲಭವಾಗಿ ಪಂದ್ಯವನ್ನ ಗೆದ್ದು ಬೀಗಿದೆ. ಕೊನೆಯ ಓವರ್‌ನಲ್ಲಿ 16ರನ್‌ಗಳ ಬೇಕಿರುವಾಗ ಮೊದಲ ಮೂರು ಎಸೆತದಲ್ಲೇ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಡೇವಿಡ್ ಮಿಲ್ಲರ್, ಗುಜರಾತ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

38 ಎಸೆತಗಳಲ್ಲಿ ಅಜೇಯ 68ರನ್ ಕಲೆಹಾಕಿದ ಮಿಲ್ಲರ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳಿದ್ದವು. ಇನ್ನು ಹಾರ್ದಿಕ್ ಪಾಂಡ್ಯ 27 ಇನ್ನಿಂಗ್ಸ್‌ನಲ್ಲಿ ಅಜೇಯ 40 ರನ್ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದ್ರು.

ಈ ಪಂದ್ಯದ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಚೇಸಿಂಗ್‌ನಲ್ಲೂ ದಾಖಲೆ ಬರೆದಿದೆ. ಐಪಿಎಲ್‌ ಸೀಸನ್‌ವೊಂದರಲ್ಲಿ ಪಂದ್ಯದ ಕೊನೆಯ ಓವರ್‌ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿ ಪಂದ್ಯ ಗೆದ್ದ ದಾಖಲೆಯು ಗುಜರಾತ್ ಟೈಟನ್ಸ್ ತಂಡಕ್ಕೆ ಮುಡಿಗೇರಿದೆ.

2022ರ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಬರೋಬ್ಬರಿ 7 ಬಾರಿ ಅಂತಿಮ ಓವರ್‌ನಲ್ಲಿ ರನ್ ಚೇಸ್ ಮಾಡಿ ಪಂದ್ಯ ಜಯಿಸಿದೆ. ಒಟ್ಟು 8 ಬಾರಿ ಗುಜರಾತ್ ಟೈಟನ್ಸ್ ಅಂತಿಮ ಓವರ್‌ನಲ್ಲಿ ರನ್ ಚೇಸ್‌ ಮಾಡಿದ್ದು ಏಳು ಬಾರಿ ಗೆಲುವಿನ ದಡ ತಲುಪಿದೆ.

ಸೀಸನ್‌ನ ಅಂತಿಮ ಓವರ್‌ನಲ್ಲಿ ಅತಿ ಹೆಚ್ಚು ಪಂದ್ಯ ಜಯಸಿದ ತಂಡಗಳು
ಗುಜರಾತ್ ಟೈಟನ್ಸ್ (2022) 7 ಬಾರಿ
ಚೆನ್ನೈ ಸೂಪರ್ ಕಿಂಗ್ಸ್‌(2018) 5 ಬಾರಿ
ರಾಜಸ್ತಾನ್ ರಾಯಲ್ಸ್‌ (2019) 5 ಬಾರಿ

IPL ಪ್ಲೇ ಆಫ್‌ಗಳು/ನಾಕೌಟ್‌ಗಳಲ್ಲಿ ಗರಿಷ್ಠ ಗುರಿಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ತಂಡಗಳು
200 ಕೆಕೆಆರ್‌ ವರ್ಸಸ್ ಪಂಜಾಬ್ ಕಿಂಗ್ಸ್‌, ಬೆಂಗಳೂರು 2014
191 ಕೆಕೆಆರ್‌ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್‌, 2012
189 ಗುಜರಾತ್ ಟೈಟನ್ಸ್‌ ವರ್ಸಸ್‌ ರಾಜಸ್ತಾನ್ ರಾಯಲ್ಸ್‌, ಕೋಲ್ಕತ್ತಾ 2022

ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ

ನೋ ಬಾಲ್ ಗೆ ರನ್ ಔಟ್ ಆಗೋದು ಅಂದ್ರೆ ಇದೇನಾ | OneIndia Kannada

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ ನಾಯಕ), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಒಬೆದ್ ಮೆಕಾಯ್

Story first published: Wednesday, May 25, 2022, 10:04 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X