ಕ್ರಿಕೆಟ್‌: ಜುಲೈ 25ರಂದು 2ನೇ ಗ್ಲೋಬಲ್‌ ಟಿ20 ಕ್ರಿಕೆಟ್‌ ಲೀಗ್‌ ಆರಂಭ

ಹೊಸದಿಲ್ಲಿ, ಏಪ್ರಿಲ್‌ 30: ಗ್ಲೋಬಲ್‌ ಟ್ವೆಂಟಿ20 (ಜಿಟಿ20) ಕ್ರಿಕೆಟ್‌ ಲೀಗ್‌ ಟೂರ್ನಿಯು ಕ್ರಿಕೆಟ್‌ ಕೆನಡಾ ಆಶ್ರಯದಲ್ಲಿಎರಡನೇ ಆವೃತ್ತಿಗೆ ಕಾಲಿಡಲು ಸಜ್ಜಾಗಿದ್ದು, ಜಾಗತಿಕ ಮಟ್ಟದ ಚುಟುಕು ಕ್ರಿಕೆಟ್‌ ಸಮರ ಜುಲೈ 25ರಂದು ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಲೂ ಪ್ಲೇ ಆಫ್‌ ಪ್ರವೇಶಿಸಬಲ್ಲದು!

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ವ್ಯಾಂಕೂವರ್‌ ನೈಟ್ಸ್‌ ತಂಡ ಆತಿಥೇಯ ಟೊರಾಂಟೊ ನ್ಯಾಷನಲ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಎರಡನೇ ಆವೃತ್ತಿಯ ಗ್ಲೋಬಲ್‌ ಟಿ20 ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಕೆನಡಾ ಕ್ರಿಕೆಟ್‌ನ ಅಧ್ಯಕ್ಷ ರಂಜಿತ್‌ ಸೈನಿ, "ಕ್ರಿಕೆಟ್‌ ಕದನ ಆರಂಭಿದಲು ಕೆನಡಾ ಮತ್ತಷ್ಟು ಕಾಯಲಾರದು. ಕ್ರಿಕೆಟ್‌ ಕೆನಡಾ ಕೆನಡಾದ ಆಟಗಾರರಿಗೆ ಜಾಗತಿಕ ಮಟ್ಟದ ಕ್ರಿಕೆಟ್‌ನ ಅನುಭವ ಒದಗಿಸಿಕೊಡುವುದರ ಕಡೆಗೆ ಸಂಪೂರ್ಣ ಶ್ರಮ ವಹಿಸಲಿದೆ. ಹೀಗಾಗಿ ಗ್ಲೂಬಲ್‌ ಟಿ20 ಕ್ರಿಕೆಟ್‌ ಟೂರ್ನಿಯ ಎರಡನೇ ಆವೃತ್ತಿಯನ್ನು ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಮತ್ತಷ್ಟು ಸ್ಮರಣೀಯವನ್ನಾಗಿಸಲು ಪ್ರಯತ್ನ ನಡೆಸಲಿದ್ದೇವೆ. ಕ್ರಿಕೆಟ್‌ ಕೆನಡಾ ವತಿಯಿಂದ ಕ್ರಿಕೆಟ್‌ ಜಗತ್ತನ್ನು ಕೆನಡಾಗೆ ಸ್ವಾಗತಿಸುತ್ತೇನೆ,'' ಎಂದು ಹೇಳಿದ್ದಾರೆ.

ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್

ಟೂರ್ನಿಯಲ್ಲಿ ಪ್ಲೇಆಫ್ಸ್‌ ಮತ್ತು ಫೈನಲ್‌ ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿದೆ. ಫೈನಲ್‌ ಪಂದ್ಯ ಆಗಸ್ಟ್‌ 11ರಂದು ಜರುಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಲೀಗ್‌ನಲ್ಲಿ ಆಡಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್‌ ಆಟಗಾರರ ಪಟ್ಟಿಯನ್ನು ಟೂರ್ನಿ ಸಂಘಟಕರು ಬಿಡುಗಡೆ ಮಾಡಲಿದ್ದಾರೆ.

'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾಗೆ ಇವರೆಲ್ಲಾ ಶುಭಕೋರಿದ್ದಾರೆ

"ಚೊಚ್ಚಲ ಆವೃತ್ತಿಯ ಲೀಗ್‌ ವೀಕ್ಷಿಸಿದ್ದೇನೆ. ಟೂರ್ನಿಯ ಗುಣಮಟ್ಟ ನಿಜಕ್ಕೂ ನನ್ನ ಗಮನ ಸೆಳೆದಿತ್ತು. ಕೆಲ ಗೊಂದಲುಗಳು ಕಾಣಿಸಿದವಾದರೂ, ಕ್ರಿಕೆಟ್‌ ಕೆನಡಾ ಮತ್ತು ಜಿಟಿ20 ತಂಡ ಅದ್ಭುತ ಟೂರ್ನಿಯನ್ನು ಆಯೋಜಿಸಿದೆ,'' ಎಂದು ಲೀಗ್‌ನ ರಾಯಭಾರಿ ಆಗಿರುವ ಬ್ರಿಯಾನ್‌ ಲಾರಾ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 30, 2019, 19:13 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X