ಹಾರ್ದಿಕ್ ಪಾಂಡ್ಯ ಅತ್ಯುತ್ತಮ ನಾಯಕನಾಗಿದ್ದು ಈ ಕಾರಣಕ್ಕೆ: ಗುಜರಾತ್ ಟೈಟನ್ಸ್ ವೇಗಿ ಪ್ರಶಂಸೆ

ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡು ಚಾಂಪಿಯನ್ ಪಟ್ಟಕ್ಕೇರಿದ ಹಾರ್ದಿಕ್ ಪಾಂಡ್ಯ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ. ಇದೀಗ ಭಾರತ ತಂಡವನ್ನನು ಹಾರ್ದಿಕ್ ಪಾಂಡ್ಯ ಐರ್ಲೆಂಡ್ ವಿರುದ್ಧಧ ಸರಣಿಯಲ್ಲಿ ಮುನ್ನಡೆಸುವ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಯಶ್ ದಯಾಳ್ ಹಾರ್ದಿಕ್ ಪಾಂಡ್ಯ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ನಾಯಕ ಹಾರ್ದಿಕ್ ಪಾಂಡ್ಯ ಬೌಲರ್‌ಗಳ ನಾಯಕ ಎಂದು ಯಶ್ ದಯಾಳ್ ಪ್ರಶಂಸಿಸಿದ್ದಾರೆ. ಆ ಕಾರಣದಿಂದಾಗಿಯೇ ಅವರು ಯಶಸ್ಸು ಸಾಧಿಸಿದರು ಎಂಬ ಮಾತನ್ನು ಕೂಡ ಯಶ್ ದಯಾಳ್ ಹೇಳಿದ್ದಾರೆ. ಅಲ್ಲದೆ ನಾಯಕನಾಗಿ ಅವರು ಸಾಕಷ್ಟು ಸಂಯಮವನ್ನು ಹೊಂದಿದ್ದು ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಗೊಂದಿದ್ದಾರೆ ಎಂದು ಯಶ್ ದಯಾಳ್ ಹೇಳಿಕೊಂಡಿದ್ದಾರೆ.

498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ

"ಅವರು ಬಹಳ ತಾಳ್ಮೆ ಹಾಗೂ ಆತ್ಮವಿಶ್ವಾಸದ ವ್ಯಕ್ತತ್ವ ಹೊಂದಿದ್ದಾರೆ. ಯಾವ ಹಂತದಲ್ಲಿ ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅವರು ಬೌಲರ್‌ಗಳ ನಾಯಕ. ನಿಮ್ಮ ಮೇಲೆ ನಿಮಗೆ ಆತ್ಮವಿಸ್ವಾಸವಿದ್ದರೆ ಅವರು ನಿಮಗೆ ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ. ಅದು ಬೌಲರ್‌ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾನು ಆಡಿದ ನಾಯಕರ ಪೈಕಿ ಹಾರ್ದಿಕ್ ಪಾಂಡ್ಯ ಅವರೇ ಶ್ರೇಷ್ಠ ನಾಯಕ" ಎಂದು ಯಶ್ ದಯಾಳ್ ವಿಶೇಷ ಮಾತುಗಳನ್ನಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕ ನೀಡಲು ಸಾಕಷ್ಟು ಹಿರಿಯ ಆಟಗಾರರು ಬೆಂಬಲ ನೀಡಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೈಟ್‌ಬಾಲ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿಕೊಂಡಿದ್ದರು. ಸದ್ಯ ನಾಯಕತ್ವದ ರೇಸ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ನಂತರ ಮೊದಲ ಆಯ್ಕೆಯಾಗಿದ್ದರೆ ನಂತರ ರಿಷಭ್ ಪಂತ್‌ಗೆ ಅವಕಾಶ ನೀಡಲಾಗುತ್ತಿದೆ. ಅದಾದ ಬಳಿಕ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಗುತ್ತಿದೆ.

ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!

ಇದೀಗ ಹಾರ್ದಿಕ್ ಪಾಂಡ್ಯ ಐರ್ಲೆಂಡ್ ವಿರುದ್ಧದ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಸರಣಿ ಹಾರ್ದಿಕ್ ಪಾಂಡ್ಯಗೆ ನಾಯಕನಾಗಿ ಸಾಮರ್ಥ್ಯವನ್ನು ಪ್ರದರ್ಶಿಸಲು ಅತ್ಯುತ್ತಮ ಅವಕಾಶವಾಗಿದೆ. ಹೆಚ್ಚು ತಿರುವು ಪಡೆಯುವ ಪರಿಸ್ಥಿತಿಯಲ್ಲಿ ತಂಡದ ಜವಾಬ್ಧಾರಿಯನ್ನು ಪಾಂಡ್ಯ ಯಾವ ರೀತಿಯಲ್ಲಿ ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, June 18, 2022, 20:41 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X