ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಈ ಮೊದಲು ಇಂಥದ್ದನ್ನು ನೋಡಿರಲಿಲ್ಲ': ಪಂದ್ಯದ ಕ್ಷಣ ನೆನೆದ ರೋಹಿತ್

‘Hadn’t seen anything like it before: Rohit Sharma recalls India’s win over Australia

ಮುಂಬೈ, ಜೂನ್ 18: ಕ್ರಿಕೆಟ್ ಪಂದ್ಯಗಳ ವೇಳೆ ಅಭಿಮಾನಿಗಳ ಪ್ರಾಮುಖ್ಯದ ಬಗ್ಗೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಅಭಿಮಾನಿಗಳು ಆಟಗಾರರಲ್ಲಿ ಹೊಸ ಚೈತನ್ಯ ತುಂಬಿಸುತ್ತಿರುತ್ತಾರೆ ಎಂದು ಶರ್ಮಾ ಹೇಳಿದ್ದಾರೆ. ಕ್ರಿಕೆಟ್‌ ಪಂದ್ಯವೊಂದರ ವೇಳೆ ಅಭಿಮಾನಿಗಳು ಸಂಭ್ರಮಿಸಿದ್ದರ ಅಪರೂಪದ ಕ್ಷಣವನ್ನೂ ಹಿಟ್‌ಮ್ಯಾನ್ ರೋಹಿತ್ ಸ್ಮರಿಸಿಕೊಂಡಿದ್ದಾರೆ.

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

ಜುಲೈ 8ರಿಂದ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮಧ್ಯೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್‌ನಲ್ಲಿ ಆರಂಭಗೊಳ್ಳಲಿದೆ. ಕೊರೊನಾ ವೈರಸ್ ಕಾರಣ ಜೈವಿಕ ಸುರಕ್ಷಾ ಖಾಲಿ ಮೈದಾನದಲ್ಲಿ ಈ ಪಂದ್ಯ ನಡೆಯುವುದರಲ್ಲಿದೆ. ಕ್ರಿಕೆಟ್‌ ಸ್ಟೇಡಿಯಂಗಳಿಗೆ ಯಾವಾಗ ಅಭಿಮಾನಿಗಳ ಪ್ರವೇಶಕ್ಕೆ ನೀಡಲಾಗುತ್ತದ ಎನ್ನುವುದರ ಬಗ್ಗೆ ಇನ್ನೂ ಅಂದಾಜು ಸಿಕ್ಕಿಲ್ಲ.

ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!

ಟೀಮ್ ಇಂಡಿಯಾಕ್ಕೆ ಸದ್ಯಕ್ಕೆ ಮುಂದಿನ ಪಂದ್ಯ ಯಾವುದು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಅಭಿಮಾನಿಗಳ ಪ್ರಾಮುಖ್ಯತೆಯ ಬಗ್ಗೆ ರೋಹಿತ್ ಮಾತನಾಡಿದ್ದಾರೆ. ಕ್ರಿಕೆಟ್‌ ಪಂದ್ಯಗಳಲ್ಲಿ ಅಭಿಮಾನಿಗಳು ಪ್ರಮುಖ ಅಂಶ ಎಂದು ರೋಹಿತ್ ಹೇಳಿದ್ದಾರೆ. 'ಅಭಿಮಾನಿಗಳ ಬೆಂಬಲ ದೊರೆಯದ ಹೊರತಾಗಿ ನಿಮಗೆ ನೀವು ಭಾರತ ತಂಡಕ್ಕಾಗಿ ಆಡುತ್ತಿದ್ದೀರಿ ಅನ್ನಿಸುವುದಿಲ್ಲ,' ಎಂದು ಶರ್ಮಾ ಹೇಳಿದ್ದಾರೆ.

1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ

'ನಾನು ಈಗಲೂ ನೆನಪಿಸಿಕೊಳ್ಳಬಲ್ಲೆ. ಆವತ್ತು ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದೆವು. ನಮ್ಮ ಹೋಟೆಲ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಎಲ್ಲರೂ ಆವತ್ತು ಕುಣಿಯುತ್ತ ಗೆಲುವು ಸಂಭ್ರಮಾಚರಿಸುತ್ತಿದ್ದರು,' ಎಂದು 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯವನ್ನು ಶರ್ಮಾ ನೆನಪಿಗೆ ತಂದುಕೊಂಡರು.

ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!

'ನನ್ನ ಕಣ್ಣುಗಳನ್ನೇ ನನಗೆ ನಂಬಲಾಗಲಿಲ್ಲ. ಯಾಕೆಂದರೆ ಅಭಿಮಾನಿಗಳು ಸ್ಟೇಡಿಯಂನಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಆದರೆ ಅಂದು ಹೋಟೆಲ್‌ನಲ್ಲಿ ಅಭಿಮಾನಿಗಳು ತುಂಬಿಕೊಂಡಿದ್ದರು. ಇಂಥದ್ದನ್ನು ನಾನು ಯಾವತ್ತಿಗೂ ನೋಡಿರಲಿಲ್ಲ. ಎಲ್ಲಿ ನೋಡಿದರೂ ಅಲ್ಲಿ ಅಭಿಮಾನಿಗಳೇ ತುಂಬಿದ್ದರು. ಅಭಿಮಾನಿಗಳ ಇದೇ ಪ್ರೀತಿ-ಅಭಿಮಾನ ನಮ್ಮ ತಂಡವನ್ನು ಮುಂದಕ್ಕೆ ಎಳೆದೊಯ್ಯುತ್ತಿದೆ ಎಂದು ನನಗನ್ನಿಸುತ್ತದೆ,' ಎಂದು ಶರ್ಮಾ ವಿವರಿಸಿದರು.

Story first published: Thursday, June 18, 2020, 22:12 [IST]
Other articles published on Jun 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X