ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿದ ಹನುಮ ವಿಹಾರಿ!

Hanuma Vihari reveals influence of Virat Kohli in Indian dressing room

ನವದೆಹಲಿ, ಸೆಪ್ಟೆಂಬರ್ 23: ವೆಸ್ಟ್ ಇಂಡೀಸ್ ಪ್ರವಾಸ ಸರಣಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತೃಪ್ತಿ ತಂದಿದೆ. ವಿಂಡೀಸ್ ಎದುರು ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ಭಾರತ ತನ್ನದೇ ಶೈಲಿಯಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಸ್ಪರ್ಧೆ ಆರಂಭಿಸಿತ್ತು. ಇದಕ್ಕಾಗಿ ತಂಡದ ಎಲ್ಲಾ ಆಟಗಾರರ ಬಗ್ಗೆ ಕೊಹ್ಲಿ ಮೆಚ್ಚುಗೆಯೂ ವ್ಯಕ್ತಪಡಿಸಿದ್ದರು.

4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್

ಕೆರಿಬಿಯನ್ನರ ವಿರುದ್ಧ 2-0ಯಿಂದ ಸರಣಿ ಜಯಿಸಿದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಕೊಹ್ಲಿ, ಯುವ ಬ್ಯಾಟ್ಸ್‌ಮನ್ ಹನುಮ ವಿಹಾರಿ ಅವರನ್ನು ಉಲ್ಲೇಖಿಸಿ ಮಾತನಾಡಿದ್ದರು. ವಿಹಾರಿ ಬ್ಯಾಟಿಂಗ್‌ ಮಾಡುತ್ತಿದ್ದಾಗ ಡ್ರೆಸ್ಸಿಂಗ್ ರೂಮ್‌ ತುಂಬಾ ಶಾಂತವಾಗಿರುತ್ತದೆ ಎಂದಿದ್ದರು.

ಭಾರತ vs ದ.ಆಫ್ರಿಕಾ: ಧೋನಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾಭಾರತ vs ದ.ಆಫ್ರಿಕಾ: ಧೋನಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾ

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹನುಮ ವಿಹಾರಿ, ಅಂದಿನ ತನ್ನ ಪ್ರದರ್ಶನಕ್ಕೆ ಡ್ರೆಸ್ಸಿಂಗ್‌ ರೂಮಿನಲ್ಲಿ ವಿರಾಟ್‌ ಕೊಹ್ಲಿಯ ಪ್ರಭಾವ ಕಾರಣ ಎಂದಿದ್ದಾರೆ. ಕೊಹ್ಲಿಯದು ಮಾದರಿ ವ್ಯಕ್ತಿತ್ವ ಎಂದು ವಿಹಾರಿ ಶ್ಲಾಘಿಸಿದ್ದಾರೆ.

ಸಿಕ್ಸರ್‌ ಕಿಂಗ್ ಯುವಿ ಜೆರ್ಸಿಗೆ ವಿಶೇಷ ಗೌರವವೀಯಲು ಗಂಭೀರ ಮನವಿ!ಸಿಕ್ಸರ್‌ ಕಿಂಗ್ ಯುವಿ ಜೆರ್ಸಿಗೆ ವಿಶೇಷ ಗೌರವವೀಯಲು ಗಂಭೀರ ಮನವಿ!

'ಮೈದಾನದ ಒಳಗಿರಲಿ ಹೊರಗಿರಲಿ, ಕೆಲಸದ ನಿಷ್ಠೆಯ ವಿಚಾರದಲ್ಲಿ ಕೊಹ್ಲಿ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ. ಆತ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಮಗೆಲ್ಲ ಅಂದರೆ ಮುಖ್ಯವಾಗಿ ಯುವ ಆಟಗಾರರಿಗೆ ಸ್ಫೂರ್ತಿಯಾಗಿ ಕಾಣಿಸುತ್ತಾರೆ. ನಾವು ಹಿಂಬಾಲಿಸಬೇಕಾದ ಮಾದರಿ ವ್ಯಕ್ತಿಯಾಗಿ ನಾವು ಕೊಹ್ಲಿಯನ್ನು ನೋಡುತ್ತೇವೆ,' ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡುತ್ತ ವಿಹಾರಿ ವಿವರಿಸಿದರು.

"ಕೊಹ್ಲಿ ನಾಯಕನಾಗಿ ಯಶಸ್ಸು ಗಳಿಸಲು ಧೋನಿ, ರೋಹಿತ್ ಕಾರಣ"

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೆಚ್ಚು ಗಮನಾರ್ಹವೆನಿಸಿದ್ದು ಹನುಮ ವಿಹಾರಿ ಮತ್ತು ಅಜಿಂಕ್ಯ ರಹಾನೆ ಬ್ಯಾಟಿಂಗ್‌. ಮೊದಲ ಪಂದ್ಯದಲ್ಲಿ ವಿಹಾರಿ 32 ಮತ್ತು 93, ದ್ವಿತೀಯ ಪಂದ್ಯದಲ್ಲಿ 111, 53 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಸದ್ಯ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸದಲ್ಲಿದ್ದು, ಅಕ್ಟೋಬರ್ 2ರಿಂದ ಟೆಸ್ಟ್ ಸರಣಿಯನ್ನಾಡಲಿದೆ.

Story first published: Monday, September 23, 2019, 18:34 [IST]
Other articles published on Sep 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X