ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ ಪೂಜಾರ ಹುಟ್ಟುಹಬ್ಬ, 'ವಾಲ್‌2'ಗೆ ಶುಭಾಶಯಗಳ ಮಹಾಪೂರ

Happy Birthday Cheteshwar Pujara-The New Wall Of Indian Cricket

ನವದೆಹಲಿ: 'ಗ್ರೇಟ್‌ವಾಲ್' ಎಂಬ ಪ್ರೀತಿಯ ಬಿರುದು ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗಿತ್ತು. ವಿಕೆಟ್‌ಗೆ ಅಡ್ಡಗೋಡೆಯಂತೆ ನಿಂತು ದ್ರಾವಿಡ್ ಎಷ್ಟೋ ಸಾರಿ ಸೋಲಿನಂಚಿನಲ್ಲಿದ್ದ ಭಾರತವನ್ನು ಪಾರು ಮಾಡಿದ್ದರು. ಇದೇ ಕಾರಣಕ್ಕೆ ದ್ರಾವಿಡ್‌ಗೆ ಆಪಾದ್ಭಾಂದವ ಹೆಸರೂ ಇತ್ತು.

ನಾನು ಅನಗತ್ಯ ಪ್ರಶಂಸೆಯನ್ನು ಪಡೆದುಕೊಂಡೆ ಎಂದ ರಾಹುಲ್ ದ್ರಾವಿಡ್ನಾನು ಅನಗತ್ಯ ಪ್ರಶಂಸೆಯನ್ನು ಪಡೆದುಕೊಂಡೆ ಎಂದ ರಾಹುಲ್ ದ್ರಾವಿಡ್

ಆದರೆ ಈಗ ಭಾರತ ತಂಡದಲ್ಲಿ ಚೇತೇಶ್ವರ ಪೂಜಾರ ಅವರನ್ನು 'ಗ್ರೇಟ್ ವಾಲ್-2' ಎಂದು ಕರೆಯಲಾಗುತ್ತದೆ. ಪೂಜಾರ ಕೂಡ ದ್ರಾವಿಡ್ ಹಾದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಜಯ ದಾಖಲಿಸುವಲ್ಲಿ ಪೂಜಾರ ಕೊಡುಗೆಯೂ ಮಹತ್ವದ್ದಾಗಿತ್ತು.

ನಾನು ಇನ್ನೂ ಒಂದಿಷ್ಟು ಮೈಲುಗಳು ಸಾಗೋದಿದೆ: ಟಿ ನಟರಾಜನ್ನಾನು ಇನ್ನೂ ಒಂದಿಷ್ಟು ಮೈಲುಗಳು ಸಾಗೋದಿದೆ: ಟಿ ನಟರಾಜನ್

ಜನವರಿ 25ಕ್ಕೆ ಚೇತೇಶ್ವರ್ 33ನೇ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಪೂಜಾರಗೆ ಕ್ರಿಕೆಟ್‌ ದಂತಕತೆಗಳಿಂದ, ಸಿನಿಮಾ ತಾರೆಯರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಬಿಸಿಸಿಐ, ಆರ್‌ಪಿ ಸಿಂಗ್, ವಾಸಿಂ ಜಾಫರ್, ಯುವರಾಜ್ ಸಿಂಗ್ ಸೇರಿದಂತೆ ಅನೇಕರು ಶ್ರೇಷ್ಠ ಕ್ರಿಕೆಟಿಗನಿಗೆ ಶುಭಾಶಯ ತಿಳಿಸಿದ್ದಾರೆ.

ಚೇತೇಶ್ವರ ಪೂಜಾರ ಅವರು 81 ಪಂದ್ಯ (136 ಇನ್ನಿಂಗ್ಸ್)ಗಳಲ್ಲಿ 6111 ರನ್, 18 ಶತಕ, 3 ದ್ವಿಶತಕಗಳನ್ನು ಬಾರಿಸಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 51 ರನ್ ಬಾರಿಸಿದ್ದಾರೆ. ಟೆಸ್ಟ್ ಸ್ಪೆಶಾಲಿಸ್ಟ್ ಎಂದು ಕರೆಯಲಾಗುವ ಪೂಜಾರ ಈವರೆಗೆ ಟೆಸ್ಟ್‌ನಲ್ಲಿ ಬರೋಬ್ಬರಿ 13572 ಎಸೆತಗಳನ್ನು ಎದುರಿಸಿದ್ದಾರೆ. ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೂಜಾರ ಸಜ್ಜಾಗುತ್ತಿದ್ದಾರೆ.

Story first published: Monday, January 25, 2021, 12:12 [IST]
Other articles published on Jan 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X