ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ: ಕನ್ನಡದ ಹೆಮ್ಮೆಯ ವೇಗಿಯ ಬಗ್ಗೆ ನಿಮಗೆಷ್ಟು ಗೊತ್ತು?

Happy Birthday Javagal Srinath: Know Facts, Trivia and Records of Mysuru Express in kannada

ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೇಗಿಗಳಲ್ಲಿ ಕರ್ನಾಟಕದ ಜಾವಗಲ್ ಶ್ರೀನಾಥ್ ಅಗ್ರಗಣ್ಯರು ಎಂಬುದರಲ್ಲಿ ಅನುಮಾನವಿಲ್ಲ. ಸ್ಪಿನ್‌ ಬೌಲರ್‌ಗಳನ್ನೇ ನೆಚ್ಚಿಕೊಂಡಿದ್ದ ಭಾರತ ತಂಡಕ್ಕೆ ವೇಗದ ಬೌಲಿಂಗ್‌ನ ಮೂಲಕ ಶಕ್ತಿಯನ್ನು ತುಂಬುದವರು ಈ ಕನ್ನಡಿಗ. ನಿರಂತರವಾಗಿ 140 ಕಿ.ಮೀ ಗೂ ವೇಗದಲ್ಲಿ ಸತತವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದರು ಶ್ರೀನಾಥ್. ಪ್ರಸಕ್ತ ಮ್ಯಾಚ್ ರೆಫ್ರಿಯಾಗಿ ಬ್ಯುಸಿಯಾಗಿರುವ ಶ್ರೀನಾಥ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

1969ರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಜನಿಸಿದರು ಶ್ರೀನಾಥ್. ಕ್ರಿಕೆಟ್‌ನಲ್ಲಿ ಸಾಕಷ್ಟು ಆಸಕ್ತಿಯನ್ನು ವಹಿಸಿದ್ದ ಶ್ರೀನಾಥ್ ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ ಶ್ರೀನಾಥ್. ಹೀಗಾಗಿ ಭಾರತೀಯ ಕ್ರಿಕೆಟರ್‌ಗಳಲ್ಲಿ ಅತಿ ಹೆಚ್ಚು ವಿದ್ಯಾಬ್ಯಾಸ ಪೂರೈಸಿದವರಲ್ಲಿಯೂ ಶ್ರೀನಾಥ್ ಸ್ಥಾನವನ್ನು ಪಡೆಯುತ್ತಾರೆ. ವೇಗದ ಬೌಲರ್ ಆಗಿ ಮಿಂಚಿದ ಶ್ರೀನಾಥ್ ಮೈಸೂರು ಎಕ್ಸ್‌ಪ್ರೆಸ್ ಎಂದು ಸ್ನೇಹಿತರ ವಲಯದಲ್ಲಿ ಖ್ಯಾತರಾಗಿದ್ದಾರೆ.

ಟೀಮ್ ಇಂಡಿಯಾ ಪ್ಲೇಯರ್ಸ್ ಕೆಲಸಕ್ಕೆ ಬಾರದವರು ಎಂದ ವಾನ್ ಗೆ ಜರ್ಸಿ ಕಳಿಸಿದ ಜಡೇಜಾ | Oneindia Kannada

ಕರ್ನಾಟಕದ ಈ ಹೆಮ್ಮೆಯ ವೇಗಿಯ ಕೆಲ ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ:

1. ಜಾವಗಲ್ ಶ್ರೀನಾಥ್ ಸೋಲು ಕಂಡ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಆಟಗಾರ ಎನಿಸಿದ್ದಾರೆ. 1999ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀನಾಥ್ 13 ವಿಕೆಟ್ ಪಡೆದುಕೊಂಡಿದ್ದರು. ಆದರೆ ಈಡನ್ ಗಾರ್ಡನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.

2. ಭಾರತ ತಂಡದ ಪ್ರಮುಖ ವೇಗಿಯಾಗಿದ್ದ ಶ್ರೀನಾಥ್ 2002ರಲ್ಲಿ ನಿವೃತ್ತಿಯನ್ನು ಪಡೆಯಲು ನಿರ್ಧರಿಸಿದ್ದರು. ಆದರೆ ಅಂದಿನ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ 2003ರ ವಿಶ್ವಕಪ್‌ನವರೆಗೆ ಮುಂದುವರಿಯುವಂತೆ ಮನವಿ ಮಾಡಿದ ಕಾರಣ ಇದಕ್ಕೆ ಸಮ್ಮತಿಯನ್ನು ಸೂಚಿಸಿದ್ದರು. 2003ರ ಈ ವಿಶ್ವಕಪ್‌ನಲ್ಲಿ ಶ್ರೀನಾಥ್ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಟೂರ್ನಿಯನ್ನು ಮುಗಿಸಿದರು.

3. ಜಾವಗಲ್ ಶ್ರೀನಾಥ್ ಭಾರತದ ಪರವಾಗಿ ಅತಿ ಹೆಚ್ಚು ವಿಶ್ವಕಪ್‌ಗಳಲ್ಲಿ ಆಡಿದ ಬೌಲರ್ ಎಂಬ ಖ್ಯಾತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 1992, 1996, 1999 ಮತ್ತು 2003ರ ವಿಶ್ವಕಪ್‌ನಲ್ಲಿ ಶ್ರೀನಾಥ್ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ನಾಲ್ಕು ವಿಶ್ವಕಪ್‌ಗಳಲ್ಲಿ ಅವರು 44 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

4. 1999ರಲ್ಲಿ ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಪಡೆಯುವ ದಾಖಲೆಯ ಸನಿಹದಲ್ಲಿದ್ದರು. ಈ ಸಂದರ್ಭದಲ್ಲಿ ವೇಗಿ ಜಾವಗಲ್ ಶ್ರೀನಾಥ್ ಬ್ಯಾಟ್ಸ್‌ಮನ್‌ಗಳು ಔಟಾಗದ ರೀತಿಯಲ್ಲಿ ಚೆಂಡನ್ನು ಎಸೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆ ಬರೆಯಲು ಸಹಕಾರವನ್ನು ನೀಡಿದ್ದರು.

5. ಜಾವಗಲ್ ಶ್ರೀನಾಥ್ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದ್ದಾರೆ. 229 ಏಕಿದನ ಪಂದ್ಯಗಳಲ್ಲಿ ಶ್ರೀನಾಥ್ 315 ವಿಕೆಟ್ ಸಂಪಾದಿಸಿದ್ದಾರೆ. 337 ವಿಕೆಟ್ ಪಡೆದ ಅನಿಲ್ ಕುಂಬ್ಳೆಗಿಂತ ಮಾತ್ರವೇ ಶ್ರೀನಾಥ್ ಹಿಂದಿದ್ದಾರೆ.

6. ಶ್ರೀನಾಥ್ 1991ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪದಾರ್ಪಣೆಯನ್ನು ಮಾಡಿದ್ದರು. ಪದಾರ್ಪಣೆ ಮಾಡಿದ ಮುಂದಿನ ವರ್ಷವೇ ಅಂದರೆ 1992ರಲ್ಲಿ ಭಾರತದ ಪರವಾಗಿ ಟೆಸ್ಟ್‌ನಲ್ಲಿ 16 ವಿಕೆಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 20 ವಿಕೆಟ್ ಪಡೆಯುವ ಮೂಲಕ ವರ್ಷದ ಭಾರತೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡರು.

7. ಜಾವಗಲ್ ಶ್ರೀನಾಥ್ ಕ್ಲಬ್ ಪಂದ್ಯವೊಂದರಲ್ಲಿ ಕರ್ನಾಟಕ ಮೂಲದ ದಿಗ್ಗಜ ಆಟಗಾರ ಗುಂಡಪ್ಪ ವಿಶ್ವನಾಥ್ ಕಣ್ಣಿಗೆ ಬೀದ್ದರು. ಅದಾದ ಕೆಲವೇ ಸಮಯದಲ್ಲಿ ನರ್ನಾಟಕ ತಂಡದ ಪರವಾಗಿ ಪ್ರಥಮದರ್ಜೆ ಕ್ರಿಕೆಟ್‌ಗೆ ಅವಕಾಶವನ್ನು ಪಡೆದುಕೊಂಡಿದ್ದರು. 1989-90ರಲ್ಲಿ ಹೈದರಾಬಾದ್ ವಿರುದ್ಧ ಪದಾರ್ಪಣೆ ಮಾಡಿದ್ದ ಶ್ರೀನಾಥ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿಯೇ ಹ್ಯಾಟ್ರಿಕ್ ಪಕೆಟ್ ಪಡೆದು ಸಂಭ್ರಮಿಸಿದ್ದರು. ಆ ಇನ್ನಂಗ್ಸ್‌ನಲ್ಲಿ ಶ್ಋಇನಾಥ್ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದರು.

8. ಇನ್ನು 1996ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀನಾಥ್ ಹಾಗೂ ಕುಂಬ್ಳೆ 9ನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆಲ್ಲಿಸಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಈ ಪಂದ್ಯದಲ್ಲಿ ಈ ಇಬ್ಬರ ತಾಯಂದಿರು ಕೂಡ ಕ್ರೀಡಾಂಗಣದಲ್ಲಿ ಜೊತೆಯಾಗಿ ಕುಳಿತು ವೀಕ್ಷಿಸುತ್ತಿದ್ದರು.

9. ಶ್ರೀನಾಥ್ 67 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು 236 ವಿಕೆಟ್ ಕಬಳಿಸಿದ್ದಾರೆ. 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು 147 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಶ್ರೀನಾಥ್ 533 ವಿಕೆಟ್ ಸಂಪಾದಿಸಿದ್ದಾರೆ. ಜೊತೆಗೆ 290 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿರುವ ಕರ್ನಾಟಕದ ಈ ವೇಗಿ 407 ವಿಕೆಟ್ ಸಂಪಾದಿಸಿದ್ದಾರೆ.

Story first published: Tuesday, August 31, 2021, 11:29 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X