ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮೊದಲ ಕ್ರಿಕೆಟ್ ಸೂಪರ್ ಸ್ಟಾರ್ ಸುನಿಲ್ ಗವಾಸ್ಕರ್‌ಗೆ 71ನೇ ಹುಟ್ಟುಹಬ್ಬ

Happy Birthday Sunil Gavaskar: Indian Cricket First Superstar Turns 71


ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ಲಿಟ್ಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಇಂದು(ಜುಲೈ 7) 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲ ಮೂಡಿಸಿದ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ ಮೊದಲ ಸಾಲಿನಲ್ಲಿದ್ದಾರೆ. ಇಂತಾ ದಿಗ್ಗಜ ಆಟಗಾರನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಭಾರತ ಕ್ರಿಕೆಟ್ ತಂಡ 1983ರಲ್ಲಿ ಗೆದ್ದ ಮೊದಲ ವಿಶ್ವಕಪ್‌ನಲ್ಲಿ ಸುನಿಲ್ ಗವಾಸ್ಕರ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿ ಸುನಿಲ್ ಗವಾಸ್ಕರ್‌ಗೆ ಸಲ್ಲುತ್ತದೆ. ಈ ಮೂಲಕ ತನ್ನ ಕಾಲದ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಗವಾಸ್ಕರ್ ಸಾಭೀತುಪಡಿಸಿದ್ದಾರೆ.

ಬೌಲರ್‌ಗಳಿಗೆ ಹತಾಶೆ ಮೂಡಿಸುವ ಆಟಗಾರ ರೋಹಿತ್ ಎಂದ ಆಸಿಸ್ ವೇಗಿಬೌಲರ್‌ಗಳಿಗೆ ಹತಾಶೆ ಮೂಡಿಸುವ ಆಟಗಾರ ರೋಹಿತ್ ಎಂದ ಆಸಿಸ್ ವೇಗಿ

ಸುನಿಲ್ ಗವಾಸ್ಕರ್ 1971ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ಸುನಿಲ್ ಗವಾಸ್ಕರ್ 65 ರನ್ ಗಳಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 67 ರನ್ ಗಳಿಸಿ ಮಿಂಚುಹರಿಸಿದ್ದರು. ಈ ಮೂಲಕ ಕ್ರಿಕೆಟ್‌ನಲ್ಲಿ ಸುದೀರ್ಘಕಾಲ ಉಳಿಯುವ ಭರವಸೆಯಲ್ಲಿ ಮೊದಲ ಪಂದ್ಯದಲ್ಲೇ ನೀಡಿದ್ದರು.

ಮೊದಲ ಪಂದ್ಯದಲ್ಲಿ ಗವಾಸ್ಕರ್ ತೋರಿದ ಈ ಅದ್ಭುತ ಆಟದಿಂದಾಗಿ ಭಾರತ ಆ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಆಟವನ್ನು ಅವರು ಮುಂದಿನ ಹದಿನಾರು ವರ್ಷಗಳ ಕಾಲ ಮುಂದುವರಿಸಿ 1987ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

125 ಟೆಸ್ಟ್ ಪಂದ್ಯಗಳನ್ನಾಡಿರುವ ಸುನಿಲ್ ಗವಾಸ್ಕರ್ 51.12ರ ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. 34 ಶತಕಗಳನ್ನು ಬಾರಿಸಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು 2005ರಲ್ಲಿ ಸಚಿನ್ ತೆಂಡೂಲ್ಕರ್ ಮುರಿಯುವವರೆಗೆ ತಮ್ಮ ಹೆಸರಿನಲ್ಲಿ ಹೊಂದಿದ್ದರು.

Story first published: Friday, July 10, 2020, 12:35 [IST]
Other articles published on Jul 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X