ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೊಫ್ರಾ ಆರ್ಚರ್ ಬೌಲಿಂಗ್ ಎದುರಿಸುವುದಕ್ಕಿಂತ ಆತನ ಕುರಿತು ಮಾತನಾಡುವುದೇ ಸಂತೋಷ: ವೀರೂ

Happy To Retired And Talking Than Facing Jofra Archer: Virender Sehwag

ವೀರೇಂದ್ರ ಸೆಹ್ವಾಗ್, ಟೀಮ್ ಇಂಡಿಯಾ ಅಷ್ಟೇ ಏಕೆ ವಿಶ್ವ ಕ್ರಿಕೆಟ್‌ನಲ್ಲಿ ಸ್ಫೋಟಕ ಆಟಕ್ಕೆ ಹೆಸರುವಾಸಿ. ಆತ ಕ್ರೀಸ್‌ನಲ್ಲಿ ಇದ್ದಷ್ಟು ಕಾಲ ನಿರ್ಭೀತ ಬ್ಯಾಟಿಂಗ್‌ ಮಾಡುತ್ತಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಶೋಯೆಬ್ ಅಖ್ತರ್, ಡೇಲ್ ಸ್ಟೇನ್ ಮತ್ತು ಬ್ರೆಟ್ ಲೀ ಅವರಂತಹ ಬೌಲರ್‌ಗಳನ್ನೇ ಲೀಲಾಜಾಲವಾಗಿ ಎದುರಿಸಿದ್ದರು.

ಇಷ್ಟಾದ್ರೂ ಸೆಹ್ವಾಗ್‌ರ ಈ ಒಂದು ಹೇಳಿಕೆ ಆಶ್ಚರ್ಯಕ್ಕೆ ಎಡೆಮಾಡಿದೆ. ಐಪಿಎಲ್‌ 2020ರಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಜೊಫ್ರಾ ಆರ್ಚರ್‌ನನ್ನು ಎದುರಿಸುತ್ತಿಲ್ಲ, ನಿವೃತ್ತನಾಗಿರುವುದು ಸಂತೋಷವಾಗಿದೆ ಎಂದು ಜೊಫ್ರಾ ಆರ್ಚರ್‌ನ ಅಸಾಧಾರಣ ಬೌಲಿಂಗ್‌ ಬಗ್ಗೆ ಹೊಗಳಿದ್ದಾರೆ.

ಗುರುವಾರ(ಅ. 23) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧದ ಪಂದ್ಯದಲ್ಲಿ ಆರ್ಚರ್ ಸಖತ್ ಪರ್ಫಾಮೆನ್ಸ್ ನೀಡದ್ರು. ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಅವರನ್ನು ಸತತ ಓವರ್‌ಗಳಲ್ಲಿ ಔಟ್ ಮಾಡಿದರು. ಆದರೆ ದುರದೃಷ್ಟವಶಾತ್ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸಲಿಲ್ಲ.

ಬಿರಿಯಾನಿ ಆರ್ಡರ್ ಕ್ಯಾನ್ಸಲ್ ಮಾಡಿ, ರಾಯಲ್ಸ್‌ಗೆ ಖಾರ ನಿಭಾಯಿಸಲು ಸಾಧ್ಯವಿಲ್ಲ: ಹೈದ್ರಾಬಾದ್ ಟ್ರೋಲ್ಬಿರಿಯಾನಿ ಆರ್ಡರ್ ಕ್ಯಾನ್ಸಲ್ ಮಾಡಿ, ರಾಯಲ್ಸ್‌ಗೆ ಖಾರ ನಿಭಾಯಿಸಲು ಸಾಧ್ಯವಿಲ್ಲ: ಹೈದ್ರಾಬಾದ್ ಟ್ರೋಲ್

ಜೊಫ್ರಾ 11 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರೂ ಆರ್‌ಆರ್ ಪ್ಲೇ ಆಫ್ ತಲುಪಲು ಹೆಣಗಾಡುತ್ತಿದೆ ಮತ್ತು ಆರ್ಚರ್ ಈ ಋತುವಿನಲ್ಲಿ ಕೇವಲ 6.61 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ವೀರೂ ಈತನ ಕುರಿತು ಸಾಕಷ್ಟು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

"ಜೋಫ್ರಾ ಆರ್ಚರ್ ತುಂಬಾ ಯಶಸ್ವಿಯಾಗಿದ್ದಾರೆ ಮತ್ತು ವಿಕೆಟ್ ಗಳಿಸಿದ ವೇಗದಿಂದಾಗಿ ಮಾತ್ರವಲ್ಲ. ಕಾರ್ತಿಕ್ ತ್ಯಾಗಿ ಕೂಡ 140 ಸ್ಪೀಡ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಈತ ಉತ್ತಮ ಲೈನ್ & ಲೆಂಥ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಆತನನ್ನು ಉತ್ತಮ ಬೌಲರ್‌ನನ್ನಾಗಿ ಮಾಡುತ್ತದೆ. ಜೊತೆಗೆ ಆತನ ಬೌಲಿಂಗ್ ಬ್ಯಾಟ್ಸ್‌ಮನ್‌ಗಳನ್ನು ತಪ್ಪು ಮಾಡುವಂತೆ ಬ್ಯಾಟ್ಸ್‌ಮನ್‌ಗಳನ್ನು ಒತ್ತಾಯಿಸುತ್ತಾರೆ. ಬ್ಯಾಟ್ ಮತ್ತು ಚೆಂಡಿನ ನಡುವೆ ಸ್ವಲ್ಪ ಅಂತರವಿದ್ದರೆ, ಅವನು ಸ್ಟಂಪ್‌ಗಳನ್ನು ಎಗರಿಸಿ ಬಿಡುತ್ತಾನೆ, ಬ್ಯಾಟರ್ ಚೆಂಡನ್ನು ಆಡಲು ತಡವಾದರೆ, ಆತನ ವಿಕೆಟ್ ಕಬಳಿಸುತ್ತಾಣೆ''

"ಹಾಗಾಗಿ ಅವರು ಇಲ್ಲಿಯವರೆಗೆ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ ಅತ್ಯಮೂಲ್ಯ ಆಟಗಾರ ಎಂದು ನನಗೆ ಖಾತ್ರಿಯಿದೆ. ಮಧ್ಯದಲ್ಲಿ ಜೋಫ್ರಾ ಆರ್ಚರ್ ಅವರನ್ನು ಎದುರಿಸುವುದಕ್ಕಿಂತ ನಿವೃತ್ತಿ ಹೊಂದಲು ಮತ್ತು ಮಾತನಾಡಲು ನನಗೆ ಸಂತೋಷವಾಗಿದೆ "ಎಂದು ಕ್ರಿಕ್‌ಬಝ್‌ನೊಂದಿಗೆ ಮಾತನಾಡುವಾಗ ಸೆಹ್ವಾಗ್ ಹೇಳಿದರು. ಎಲ್ಲಾ ಪಂದ್ಯಗಳು ಈಗ ಗೆಲ್ಲಲೇಬೇಕಾದ ಕಾರಣ ಆರ್ಚರ್ ಉಳಿದ ಮೂರು ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವುದನ್ನು ಮುಂದುವರೆಸಬೇಕೆಂದು ರಾಯಲ್ಸ್ ಆಶಿಸುತ್ತಿದೆ.

Story first published: Friday, October 23, 2020, 17:53 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X