ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ಸಿಂಗ್‌ಗೆ ಚೆನ್ನೈ ಉದ್ಯಮಿಯಿಂದ 4 ಕೋ.ರೂ. ಮೋಸ!

Harbhajan Singh duped of Rs 4 crore by Chennai businessman, files complaint

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದ ಭಾರತದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚೆನ್ನೈಯ ಉದ್ಯಮಿಯೊಬ್ಬನಿಂದ ತಾನು 4 ಕೋ.ರೂ. ಮೋಸಕ್ಕೊಳಗಾಗಿರುವುದಾಗಿ ಭಜ್ಜಿ ಪೊಲೀಸ್ ದೂರು ದಾಖಲಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹರ್ಭಜನ್ ಸಿಂಗ್ 4 ಕೋ.ರೂ ನೀಡಿದ್ದಾರೆ ಎನ್ನಲಾದ ಆ ಉದ್ಯಮಿಯೀಗ ನಿರೀಕ್ಷಿತ ಜಾಮೀನಿಗಾಗಿ ಮದ್ರಾಸ್ ಕೋರ್ಟ್ ಮೊರೆ ಹೋಗಿದ್ದಾರೆ.

ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!

ಹರ್ಭಜನ್ ಸಿಂಗ್ ದೂರು ನೀಡಿದ ಬಳಿಕ ಚೆನ್ನೈಯ ಆ ಬ್ಯುಸಿನೆಸ್ ಮ್ಯಾನ್ ಕೋರ್ಟ್‌ಗೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಹರ್ಭಜನ್, ಈ ಬಾರಿ ತಾನು ವೈಯಕ್ತಿಕ ಕಾರಣದಿಂದ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ಹೇಳಿದ್ದರು.

ಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿ

ಭಜ್ಜಿ ಐಪಿಎಲ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ ಕೆಲ ದಿನಗಳ ಬಳಿಕ ಈ ಪ್ರಕರಣ ಬೆಳಕಿದೆ ಬಂದಿದೆ.

ಘಟನೆಯ ಹಿನ್ನೆಲೆ

ಘಟನೆಯ ಹಿನ್ನೆಲೆ

ಹರ್ಭಜನ್‌ ಸಿಂಗ್ ಹೇಳುವ ಪ್ರಕಾರ, 2015ರಲ್ಲಿ ತನ್ನ ಸ್ನೇಹಿತನೊಬ್ಬನ ಮೂಲಕ ಬ್ಯುಸಿನೆಸ್ ಮ್ಯಾನ್ ಪರಿಚಯ ಆಗಿದ್ದನಂತೆ. ಆ ಬಳಿಕ ಭಜ್ಜಿ ಜಿ ಮಹೇಶ್ ಎನ್ನುವ ಆ ಉದ್ಯಮಿಗೆ 4 ಕೋ.ರೂ. ಸಾಲ ನೀಡಿದ್ದರಂತೆ. ಸಾಲ ನೀಡಿದ ಕೆಲ ವರ್ಷಗಳ ಬಳಿಕ ಸಿಂಗ್ ಆ ವ್ಯಕ್ತಿಯನ್ನು ಸಾಲ ಪಾವತಿಸುವಂತೆ ಅನೇಕ ಬಾರಿ ಸಂಪರ್ಕಿಸಿದ್ದರು. ಆದರೆ ಆ ವ್ಯಕ್ತಿ ಹಣ ನೀಡಲು ವಿಳಂಬ ಮಾಡುತ್ತಲೇ ಇದ್ದರಂತೆ.

25 ಲಕ್ಷ ರೂ. ಚೆಕ್ ಕತೆ

25 ಲಕ್ಷ ರೂ. ಚೆಕ್ ಕತೆ

ಕಳೆದ ತಿಂಗಳು ಮಹೇಶ್ ಅವರು ಹರ್ಭಜನ್‌ಗೆ 25 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ ಮಹೇಶ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ್ದರಿಂದ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಈ ಬಾರಿ ಚೆನ್ನೈಗೆ ಹೋಗುವಾಗ ಭಜ್ಜಿ ಔಪಚಾರಿಕವಾಗಿ ಪೊಲೀಸ್ ದೂರು ದಾಖಲಿಸಲು ನಿರ್ಧರಿಸಿದರು.

ಬೇಲ್‌ಗಾಗಿ ಕೋರ್ಟ್ ಮೊರೆ

ಬೇಲ್‌ಗಾಗಿ ಕೋರ್ಟ್ ಮೊರೆ

ಬಲ್ಲ ಮಾಹಿತಿಯ ಪ್ರಕಾರ, ಈ ವಂಚನೆಯ ದೂರನ್ನು ಈಗ ನೀಲಂಕಾರೈ ಅಸಿಂಟೆಂಟ್ ಕಮಿಶನರ್ ಆಫ್ ಪೊಲೀಸ್ ವಿಶ್ವೇಶ್ವರಯ್ಯ ಅವರಿಗೆ ರವಾನಿಸಲಾಗಿದೆ. ತನಿಖೆಗಾಗಿ ಮಹೇಶ್‌ಗೆ ಈಗಾಗಲೇ ಎಸಿಪಿ ಸಮನ್ಸ್ ನೀಡಿದ್ದಾರೆ. ಇತ್ತ ಮಹೇಶ್ ನಿರೀಕ್ಷಿತ ಜಾಮೀನಿಗಾಗಿ ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಆದರೆ ಬೇಲ್ ಕೋರಿಕೆ ಇನ್ನೂ ಬಾಕಿ ಉಳಿಸಲಾಗಿದೆ.

ಹಣ ಕೊಟ್ಟಿದ್ದೇನೆ ಎನ್ನುವ ಮಹೇಶ್

ಹಣ ಕೊಟ್ಟಿದ್ದೇನೆ ಎನ್ನುವ ಮಹೇಶ್

ಉದ್ಯಮಿ ಮಹೇಶ್ ತನ್ನ ಅಫಿಡವಿಟ್‌ನಲ್ಲಿ ಬೇರೆಯೇ ಹೇಳಿಕೊಂಡಿದ್ದಾರೆ. ಅದರಲ್ಲಿ, ತಾನು ಭಜ್ಜಿಯಿಂದ ಹಣ ತೆಗೆದುಕೊಳ್ಳುವುದಕ್ಕೂ ಮುನ್ನ ತಲಂಬೂರ್‌ನಲ್ಲಿರುವ ಸ್ಥಿರ ಆಸ್ತಿಯನ್ನು ಭಜ್ಜಿಗೆ ಭದ್ರತೆಯಾಗ ನೀಡಿದ್ದೆ. ತಾನೀಗಾಗಲೇ ಭಾರತದ ಸ್ಪಿನ್ನರ್‌ಗೆ ಬಾಕಿ ಹಣವನ್ನು ನೀಡಿದ್ದೇನೆ ಎಂದು ಮಹೇಶ್ ಅಫಿಡವಿಟ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

Story first published: Thursday, September 10, 2020, 18:02 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X