ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರಾಹುಲ್‌ ಹೊರತುಪಡಿಸಿ ತನ್ನ ಫೇವರಿಟ್ ಬ್ಯಾಟ್ಸ್‌ಮನ್ ಹೆಸರಿಸಿದ ಹರ್ಭಜನ್ ಸಿಂಗ್

Harbhajan singh

ಟೀಂ ಇಂಡಿಯಾ ಮಾಜಿ ಆಟಗಾರ, ಲೆಜೆಂಡ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮೂರು ಫಾರ್ಮೆಟ್‌ನಲ್ಲಿ ಸರಾಗವಾಗಿ ಆಡಬಲ್ಲಿ ದಿಗ್ಗಜ ವಿರಾಟ್ ಕೊಹ್ಲಿ ಮತ್ತು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕೆ.ಎಲ್ ರಾಹುಲ್ ಹೊರತುಪಡಿಸಿ ತನ್ನ ಫೇವರಿಟ್ ಬ್ಯಾಟ್ಸ್‌ಮನ್ ಯಾರು ಎಂದು ಹೆಸರಿಸಿದ್ದಾರೆ.

ಹರ್ಭಜನ್ ಸಿಂಗ್ ತನ್ನ ಫೇವರಿಟ್ ಬ್ಯಾಟ್ಸ್‌ಮನ್ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಎಂದಿದ್ದಾರೆ. ಮೂರು ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾದ ಶಕ್ತಿಯಾಗಿ ಪರಿಗಣಿಸಲ್ಪಟ್ಟಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ ಮೂರು ದ್ವಿಶತಕ ಮತ್ತು ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನ ದಾಖಲಿಸಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.

ರೋಹಿತ್ ಶರ್ಮಾ ಜೊತೆಗೆ ಟೀಂ ಇಂಡಿಯಾ ಜೊತೆಗೆ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವ ಹರ್ಭಜನ್, ಮೂರು ಸ್ವರೂಪಗಳನ್ನ ಪರಿಗಣಿಸಿ ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾರನ್ನ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

41 ವರ್ಷದ ಹರ್ಭಜನ್ ಸಿಂಗ್ ಅಭಿಪ್ರಾಯದಂತೆ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಸಮನಾದ ಮೌಲ್ಯಯುತ ಬ್ಯಾಟ್ಸ್‌ಮನ್‌ಗಳಾಗಿದ್ದು, ರೋಹಿತ್ ಶರ್ಮಾ ವಿಭಿನ್ನ ಹಂತದ ಬ್ಯಾಟ್ಸ್‌ಮನ್ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ವೈಟ್ ಬಾಲ್ ಕ್ರಿಕೆಟ್‌ ಆಗಿರುವ ರೋಹಿತ್ ಶರ್ಮಾ ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲೂ ನಾಯಕನಾಗುವ ಅವಕಾಶ ಹೊಂದಿದ್ದಾರೆ.

ರೋಹಿತ್ ಶರ್ಮಾ ವಿಶ್ವದಲ್ಲೇ ಬೆಸ್ಟ್ ಬ್ಯಾಟ್ಸ್‌ಮನ್: ಹರ್ಭಜನ್ ಸಿಂಗ್

ರೋಹಿತ್ ಶರ್ಮಾ ವಿಶ್ವದಲ್ಲೇ ಬೆಸ್ಟ್ ಬ್ಯಾಟ್ಸ್‌ಮನ್: ಹರ್ಭಜನ್ ಸಿಂಗ್

'' ನನ್ನ ಪ್ರಕಾರ ರೋಹಿತ್ ಶರ್ಮಾ ವಿಶ್ವದಲ್ಲೇ ಬೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್‌ರಂತಹ ಆಟಗಾರರಿಗೆ ಗೌರವ ಸೂಚಿಸುತ್ತಾ, ಆಡುವಾಗ ರೋಹಿತ್ ಶರ್ಮಾ ಸಂಪೂರ್ಣ ವಿಭಿನ್ನವಾದ ಮಟ್ಟದಲ್ಲಿರುತ್ತಾರೆ. ಹಾಗಾಗಿ ರೋಹಿತ್ ನನ್ನ ನೆಚ್ಚಿನ ಬ್ಯಾಟ್ಸ್‌ಮನ್'' ಎಂದು ಹೇಳಿದ್ದಾರೆ.

ರಣಜಿ ಟ್ರೋಫಿಯನ್ನ ನಿರ್ಲಕ್ಷಿಸಿದರೆ, ಭಾರತ ಕ್ರಿಕೆಟ್‌ನ ಬೆನ್ನೆಲುಬು ಇಲ್ಲದಂತಾಗುತ್ತದೆ: ರವಿಶಾಸ್ತ್ರಿ

ತನ್ನ ಫೇವರಿಟ್ ಬೌಲರ್ ಹೆಸರಿಸಿದ ಹರ್ಭಜನ್

ತನ್ನ ಫೇವರಿಟ್ ಬೌಲರ್ ಹೆಸರಿಸಿದ ಹರ್ಭಜನ್

ಇದೇ ವೇಳೆಯಲ್ಲಿ ನಿಮ್ಮ ಫೇವರಿಟ್ ಬೌಲರ್ ಯಾರು ಎಂದು ಕೇಳಿದ ಪ್ರಶ್ನೆಗೆ ಭಜ್ಜಿ ಉತ್ತರ ನೀಡಿದ್ದಾರೆ. ಬ್ಯಾಟ್ಸ್‌ಮನ್ ರೀತಿಯಲ್ಲಿ ತಮ್ಮ ಮಾಜಿ ಮುಂಬೈ ಇಂಡಿಯನ್ಸ್‌ ತಂಡದ ಸಹ ಆಟಗಾರ ಜಸ್ಪ್ರೀತ್‌ ಬುಮ್ರಾರನ್ನ ಬೆಸ್ಟ್ ಬೌಲರ್ ಎಂದು ಹೆಸರಿಸಿದ್ದಾರೆ.

"ಬೌಲರ್‌ಗಳ ವಿಷಯಕ್ಕೆ ಬರುವುದಾದರೆ, ಜಸ್ಪ್ರೀತ್ ಬುಮ್ರಾ ಬೆಸ್ಟ್ ಬೌಲರ್‌ ಆಗಿದ್ದು, ನಾವು ಟಿ 20, ಏಕದಿನ ಅಥವಾ ಟೆಸ್ಟ್ ಕ್ರಿಕೆಟ್ ಯಾವುದರ ಬಗ್ಗೆ ಮಾತನಾಡಿದರೂ, ಜಸ್ಪ್ರೀತ್ ಬುಮ್ರಾ ಉನ್ನತ ದರ್ಜೆಯ ಬೌಲರ್. ಇವರಿಬ್ಬರು ನನ್ನ ನೆಚ್ಚಿನ ಆಟಗಾರರು," ಎಂದು ಹರ್ಭಜನ್ ಹೇಳಿದ್ದಾರೆ.

ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ರೋಹಿತ್ ಶರ್ಮಾ

ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ರೋಹಿತ್ ಶರ್ಮಾ

ಮಂಡಿರಜ್ಜು ಗಾಯದಿಂದ ದಕ್ಷಿಣ ಆಪ್ರಿಕಾ ಪ್ರವಾಸ ಮಿಸ್ ಮಾಡಿಕೊಂಡಿದ್ದ ರೋಹಿತ್‌ ಶರ್ಮಾ ಸಂಪೂರ್ಣ ಗುಣಮುಖರಾಗಿ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಮತ್ತು ಟಿ20 ಸರಣಿಯಲ್ಲಿ ರೋಹಿತ್ ಭಾರತವನ್ನ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನ ನಾಯಕತ್ವ ಪಡೆದ ನಂತರ ಮೊದಲ ಸರಣಿ ಇದಾಗಿದ್ದು, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಉಭಯ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ 18 ಸದಸ್ಯರ ಹೆಸರು ಈ ಕೆಳಗಿನಂತಿದೆ.

ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

ಟೀಂ ಇಂಡಿಯಾ ಟಿ20 ಸ್ಕ್ವಾಡ್‌
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಸರ್ ಪಟೇಲ್, ಯುಜವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್

AB De ರೀತಿಯಲ್ಲೇ ಆಡುವ Brevis ಯಾರು ? | Oneindia Kannada

Story first published: Saturday, January 29, 2022, 15:19 [IST]
Other articles published on Jan 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X