ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಅದ್ಭುತ ಕ್ಯಾಚ್‌ಗಳ ವಿಡಿಯೋ ಹಂಚಿಕೊಂಡ ಹರ್ಭಜನ್: ಪ್ರಶಂಸೆಯ ಸುರಿಮಳೆ

Harbhajan Singh Shares Video Of Rahul Dravids Classic Catches

ವಿಶ್ವ ಕ್ರಿಕೆಟ್‌ನಲ್ಲಿ ಗೋಡೆ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರ ಅಭಿಮಾನಿಗಳ ಮನದಲ್ಲಿ ಉಳಿದಿಲ್ಲ. ಆತನೋರ್ವ ಕ್ವಿಕ್ ಫೀಲ್ಡರ್ ಕೂಡ ಆಗಿದ್ದರು. ಬ್ಯಾಟ್ಸ್‌ಮನ್‌ ಕೆಲವೇ ಅಡಿಗಳಷ್ಟು ದೂರದಲ್ಲಿ ನಿಂತು ಕ್ಷಣಾರ್ಧದಲ್ಲಿ ಗಾಳಿಯಲ್ಲಿ ಹಾರಿ ಬರುವ ಚೆಂಡನ್ನು ಬೊಗಸೆಯಲ್ಲಿ ಸುರಕ್ಷಿತವಾಗಿ ಹಿಡಿಯುವ ಕಲೆಯನ್ನು ದ್ರಾವಿಡ್ ಎಲ್ಲಾ ಫೀಲ್ಡರ್‌ಗಳಿಗಿಂತ ಚೆನ್ನಾಗಿ ಕರಗತ ಮಾಡಿಕೊಂಡಿದ್ದರು.

ಅಷ್ಟಕ್ಕೂ ಇವತ್ತು ದ್ರಾವಿಡ್ ಅವರ ಫೀಲ್ಡಿಂಗ್ ಚಾಕಚಕ್ಯತೆಯ ಬಗ್ಗೆ ಮಾತನಾಡಲು ಕಾರಣ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್. ದ್ರಾವಿಡ್ ಅವರ ಅದ್ಭುತ ಕ್ಯಾಚ್‌ಗಳ ವಿಡಿಯೋವನ್ನು ಭಜ್ಜಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಎರಡು ನಿಮಿಷಗಳ ಈ ವಿಡಿಯೋದಲ್ಲಿ ದ್ರಾವಿಡ್ ಅವರ ಕ್ವಿಕ್ ಕ್ಯಾಚ್‌ಗಳು ಅಭಿಮಾನಿಗಳಿಗೆ ರಸದೌತಣವನ್ನು ಬಡಿಸುವಂತಿದೆ.

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು! ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ಔಟ್‌ ಸ್ಟ್ಯಾಂಡಿಂಗ್ ಕ್ಯಾಚರ್ ಎಂದ ಭಜ್ಜಿ

ಟ್ವಿಟ್ಟರ್‌ನಲ್ಲಿ ದ್ರಾವಿಡ್ ಕ್ಯಾಚ್‌ಗಳನ್ನು ಹೊಂದಿರುವ ವಿಡಿಯೋ ಹಂಚಿಕೊಂಡ ಹರ್ಭಜನ್ ಸಿಂಗ್ ಅದಕ್ಕೆ ಪೂರಕವಾಗಿ ಔಟ್‌ಸ್ಟ್ಯಾಂಡಿಂಗ್ ಕ್ಯಾಚರ್ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅಭೂತಪೂರ್ವ ಪ್ರತಿಕ್ರಿಯೆಗಳು ಬರುತ್ತಿದ್ದು ದ್ರಾವಿಡ್ ಫೀಲ್ಡಿಂಗ್ ಕೌಶಲ್ಯದ ಬಗ್ಗೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಕೂಡ ಸ್ಮರಿಸಿಕೊಳ್ಳುತ್ತಿದ್ದಾರೆ.

ಕ್ಷಣಾರ್ಧದಲ್ಲಿ ದ್ರಾವಿಡ್ ಕೈ ಸೇರಿತ್ತಿತ್ತು ಚೆಂಡು

ಕ್ಷಣಾರ್ಧದಲ್ಲಿ ದ್ರಾವಿಡ್ ಕೈ ಸೇರಿತ್ತಿತ್ತು ಚೆಂಡು

ರಾಹುಲ್ ದ್ರಾವಿಡ್ ಓರ್ವ ಕ್ವಿಕ್ ಫೀಲ್ಡರ್ ಆಗಿದ್ದರು. ಶಾಟ್ ಲೆಗ್, ಸಿಲ್ಲಿ ಪಾಯಿಂಟ್, ಸ್ಲಿಪ್‌ನಲ್ಲಿ ದ್ರಾವಿಡ್ ಹಿಡಿಯುತ್ತಿದ್ದ ಮನಮೋಹಕ ಕ್ಯಾಚ್‌ಗಳಿಗೆ ಬೆರಗಾದವರೇ ಇಲ್ಲ. ಅನಿಲ್ ಕುಂಬ್ಳೆ ಬೌಲಿಂಗ್ ಮತ್ತು ದ್ರಾವಿಡ್ ಕ್ಯಾಚ್‌ ಜುಗಲ್‌ಬಂದಿ ಅಭಿಮಾನಿಗಳಿಗೆ ಯಾವಾಗಲೂ ಕಣ್ಮನ ತಣಿಸುವಂತಿತ್ತು.

ದ್ರಾವಿಡ್ ಕ್ಯಾಚ್‌ ಕೌಶಲ್ಯಕ್ಕೆಗೆ ಮೆಚ್ಚುಗೆ

ದ್ರಾವಿಡ್ ಕ್ಯಾಚ್‌ ಕೌಶಲ್ಯಕ್ಕೆಗೆ ಮೆಚ್ಚುಗೆ

ಹರ್ಭಜನ್ ಸಿಂಗ್ ವಿಡಿಯೋ ಹಾಕಿದ ಬೆನ್ನಲ್ಲೇ ಮಾಜಿ ಆಟಗಾರ ಆಕಾಶ್ ಚೋಪ್ರಾ ಹಾಗೂ ಸ್ಪಿನ್ನರ್ ಆರ್.ಅಶ್ವಿನ್ ದ್ರಾವಿಡ್ ಕ್ಯಾಚ್ ಹಿಡಿಯುತ್ತಿದ್ದ ಕೌಶಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಬ್ಯಾಟ್ಸ್‌ಮನ್ ಜತೆಗೆ ಓರ್ವ ಉತ್ತಮ ಫೀಲ್ಡರ್ ಕೂಡ ಅವರು, ಯುವ ಕ್ರಿಕೆಟಿಗರು ವಿಡಿಯೋ ಅವನ್ನು ಮನರಂಜನೆ ದೃಷ್ಟಿಯಿಂದ ನೋಡಲು ಬದಲಿಗೆ ಮಾದರಿಯಾಗಿ ಸ್ವೀಕರಿಸಬೇಕು ಎಂದು ಆಕಾಶ್ ಹೇಳಿದ್ದಾರೆ.

ಸುನಿಲ್ ಜೋಶಿ ಮೆಚ್ಚುಗೆಯ ಮಾತು

ಇನ್ನು ಇದೇ ವಿಡಿಯೋವನ್ನು ಅಭಿಮಾನಿಯೊಬ್ಬರು ಕೂಡ ಹಂಚಿಕೊಂಡಿದ್ದರು. ಆ ವಿಡಿಯೋಗೆ ಕರ್ನಾಟಕ ರಣಜಿ ತಂಡದ ದಿಗ್ಗಜ ಬೌಲರ್ ಸುನಿಲ್ ಜೋಶಿ ಪ್ರತಿಕ್ರಿಯಿಸಿದ್ದರು. ದ್ರಾವಿಡ್ ಕ್ರೀಸ್‌ಗೆ ಇಳಿದಾಗ ಮಾತ್ರವೇ ಗೋಡೆಯಾಗಿರಲಿಲ್ಲ. ಸ್ಲಿಪ್‌ನಲ್ಲಿ ಅವರೊಬ್ಬ ರಕ್ಷಣಾ ಬೇಲಿಯಂತಿದ್ದರು ಎಂದು ಬಣ್ಣಿಸಿದ್ದಾರೆ ಸುನಿಲ್ ಜೋಶಿ

Story first published: Wednesday, July 1, 2020, 10:13 [IST]
Other articles published on Jul 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X