ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಂದ್ರಯಾನ್-2 ಮುಂದಿಟ್ಟು ಪಾಕಿಸ್ತಾನ ಅಣಕಿಸಿದ ಹರ್ಭಜನ್ ಸಿಂಗ್

ಪಾಕಿಸ್ತಾನಕ್ಕೆ ಹರ್ಭಜನ್ ಸಿಂಗ್ ಮಾಡಿದ ಕಿಂಡಲ್ ಏನು ಗೊತ್ತಾ..? | Harbhajan Singh | Oneindia Kannada
Harbhajan Singh trolls Pakistan, others post Chandrayaan-2 launch

ನವದೆಹಲಿ, ಜುಲೈ 23: ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪಾಕಿಸ್ತಾನ ಸೇರಿಸಿ, ರಾಷ್ಟ್ರ ಧ್ವಜದಲ್ಲಿ ಚಂದ್ರನ ಚಿತ್ರ ಹೊಂದಿರುವ ರಾಷ್ಟ್ರಗಳನ್ನು ಅಣಕಿಸಿದ್ದಾರೆ. ಚಂದ್ರಯಾನ್-2 ರಾಕೆಟ್ ಯಶಸ್ವಿ ಉಡಾವಣೆಯಾದ ಬಳಿಕ ಭಜ್ಜಿ ಟ್ವಿಟರ್ ಮೂಲಕ ಕೆಲ ದೇಶಗಳನ್ನು ತಮಾಷೆ ಮಾಡಿದ್ದಾರೆ.

ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!

ಆಂಧ್ರ ಪ್ರದೇಶದ ನೆಲ್ಲೋರ್ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸೋಮವಾರ (ಜುಲೈ 22) ಚಂದ್ರಯಾನ್-2 ರಾಕೆಟ್ ಉಡಾವಣೆ ಯಶಸ್ವಿಯಾಗಿತ್ತು. ಇಸ್ರೋ ತಂಡದ ಶ್ರಮವನ್ನು ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ ಅನೇಕ ಕ್ರಿಕೆಟಿಗರು ಶ್ಲಾಘಿಸಿದ್ದರು.

ಜುಲೈ 22ರಂದು ಟ್ವೀಟ್ ಮಾಡಿರುವ ಭಜ್ಜಿ, ಒಂದು ಮೇಲುಗಡೆ ಚಂದ್ರನಿರುವ ರಾಷ್ಟ್ರ ಧ್ವಜಗಳ ಚಿತ್ರ ಮತ್ತು ಕೆಳಗಡೆ ಚಂದ್ರನನ್ನು ಹೊಂದಿರದ ರಾಷ್ಟ್ರ ಧ್ವಜಗಳ ಚಿತ್ರ ಹಾಕಿ, 'ಕೆಲವು ದೇಶಗಳು ತಮ್ಮ ಧ್ವಜದಲ್ಲಿ ಚಂದ್ರನನ್ನು ಹೊಂದಿವೆ, ಇನ್ನೂ ಕೆಲವು ರಾಷ್ಟ್ರಗಳು ಚಂದ್ರನ ಮೇಲೆ ತಮ್ಮ ರಾಷ್ಟ್ರ ಧ್ವಜವನ್ನು ನೆಡುತ್ತಿವೆ,' ಎಂದು ಬರೆದುಕೊಂಡಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಆ ಒಂದು ಸಂದರ್ಭ ತೀರಾ ಭೀತಿಗೊಳಗಾಗಿದ್ದೆ: ಬಟ್ಲರ್ವಿಶ್ವಕಪ್ ಟೂರ್ನಿಯಲ್ಲಿ ಆ ಒಂದು ಸಂದರ್ಭ ತೀರಾ ಭೀತಿಗೊಳಗಾಗಿದ್ದೆ: ಬಟ್ಲರ್

ಸ್ಪಿನ್ ಮಾಂತ್ರಿಕ ಭಜ್ಜಿ ಮಾಡಿರುವ ಟ್ವೀಟ್‌ನ ಮೇಲಿನ ಸಾಲಿನಲ್ಲಿ ಪಾಕಿಸ್ತಾನ, ಅಲ್ಜೀರಿಯಾ, ಟರ್ಕಿ, ಮಾಲ್ಡೀವ್ಸ್, ಮೌರಿಟಾನಿಯಾ, ಟ್ಯುನೀಷಿಯಾ, ಲಿಬಿಯಾ, ಮಲೇಷಿಯಾ, ಅಜೆರ್ಬೈಜಾನ್ ರಾಷ್ಟ್ರ ಧ್ವಜಗಳ ಚಿತ್ರವಿದೆ. ಕೆಳಗಿನ ಸಾಲಿನಲ್ಲಿ ಅಮೆರಿಕಾ, ರಷ್ಯಾ, ಭಾರತ, ಚೀನಾ ರಾಷ್ಟ್ರ ಧ್ವಜಗಳ ಚಿತ್ರಗಳಿವೆ.

Story first published: Tuesday, July 23, 2019, 11:20 [IST]
Other articles published on Jul 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X