ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನ ಬಗ್ಗೆ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್

Harbhajan Singh Tweet On Saalu Marada Timmakka

ಅವರು ಅನಕ್ಷರಸ್ಥೆ, ಆದರೆ ಪ್ರಕೃತಿಯ ಮೇಲಿನ ಪ್ರೀತಿಯ ವಿಚಾರದಲ್ಲಿ ಯಾವ ಅಕ್ಷರಸ್ಥನಿಗೂ ಸಾಟಿಯಾಗಲಾರದ ಸಾಧನೆ ಮಾಡಿದ್ದಾರೆ. ಯಾವುದೇ ನಿರೀಕ್ಷೆಯಿಲ್ಲದೆ ಸಾವಿರ ಸಾವಿರ ಮರಗಳನ್ನು ಪ್ರೀತಿಯಿಂದ ಮಕ್ಕಳಂತೆ ಪೋಷಿಸಿದ ವೃಕ್ಷ ಮಾತೆ ಆಕೆ. ಆದರೆ ಮಾಡಿದ ಸಾಧನೆಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಪುರಸ್ಕಾರಗಳೇ ಈ ಸಾಧಕಿಯನ್ನು ಹುಡುಕಿಕೊಂಡು ಬಂದಿದೆ.

ಕರ್ನಾಟಕ ಮೂಲದ ಸಾಲು ಮರದ ತಿಮ್ಮಕ್ಕನ ಬಗ್ಗೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ವೃಕ್ಷ ಮಾತೆಯ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

3TC Solidarity Cup: ಎಬಿಡಿ ಅಬ್ಬರದಾಟ, ಚಿನ್ನದ ಪದಕ ಹೊತ್ತೊಯ್ದ ಈಗಲ್ಸ್!3TC Solidarity Cup: ಎಬಿಡಿ ಅಬ್ಬರದಾಟ, ಚಿನ್ನದ ಪದಕ ಹೊತ್ತೊಯ್ದ ಈಗಲ್ಸ್!

ಹರ್ಭಜನ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಸಾಲು ಮರದ ತಿಮ್ಮಕ್ಕನ ಬಗ್ಗೆ ಈ ರೀತಿಯಾಗಿ ಬರೆದುಕೊಂಡಿದ್ದಾರೆ. 'ಸಾಲು ಮರದ ತಿಮ್ಮಕ್ಕ 73 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಆದರೆ ಕೆಲವೇ ಜನರಿಗೆ ಮಾತ್ರ ಇವರ ಬಗ್ಗೆ ಅರಿವಿದೆ. ಅಜ್ಜಿ ನಿಮಗೆ ಅಭಿನಂದನೆಗಳು' ಎಂದು ಹರ್ಭಜನ್ ಸಿಂಗ್ ಬರೆದುಕೊಂಡಿದ್ದಾರೆ.

ತುಮಕೂರಿನ ಹೊಸೂರು ಗ್ರಾಮದಲ್ಲಿ ಜನಿಸಿದ ತಿಮ್ಮಕ್ಕ ಮಾಗಡು ತಾಕೂಕಿನ ಹುಲಿಕಲ್ ಗ್ರಾಮಕ್ಕೆ ಮದುವೆಯಾಗಿ ಹೋದರು. ಆದರೆ ಮಕ್ಕಳಾಗದ ದುಃಖವನ್ನು ಮರೆಯಲು ಸಾಳುವರದ ತಿಮ್ಮಕ್ಕ ಆಲದ ಗಿಡಗಳನ್ನು ನೆಡಲು ಆರಂಭಿಸಿದರು. ಅದನ್ನು ಮಕ್ಕಳಂತೆಯೇ ಪೋಷಿಸಲು ತೊಡಗಿದ್ದರು. ಹೀಗೆ ಸಾವಿರಾರು ಗಿಡಗಳನ್ನು ಪೋಷಿಸುವ ಮೂಲಕ ಮಾದರಿಯಾದರು ಸಾಲು ಮರದ ತಿಮ್ಮಕ್ಕ.

Story first published: Monday, July 20, 2020, 10:03 [IST]
Other articles published on Jul 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X