ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಂಡ್ಯ, ಜಡೇಜಾ ಜೊತೆಯಾಟ ತಂಡಕ್ಕೆ ಬಲ ತುಂಬಿತು: ವಿರಾಟ್ ಕೊಹ್ಲಿ

Hardik and Jadeja Partnership Gave The Boost To The Team Even Though Weve Lost The Series: Virat Kohli

ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಭೀತಿಯಿಂದ ಟೀಮ್ ಇಂಡಿಯಾ ಪಾರಾಗಿದೆ. ಬುಧವಾರ (ಡಿಸೆಂಬರ್ 2) ಕ್ಯಾನ್ಬೆರಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ರೋಚಕ 13 ರನ್‌ನಿಂದ ಗೆದ್ದಿದೆ.

11 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಯ ಶತಕದ ಸತತ ಸಾಧನೆ ಅಂತ್ಯ11 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಯ ಶತಕದ ಸತತ ಸಾಧನೆ ಅಂತ್ಯ

ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ, ಆಲ್ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ-ರವೀಂದ್ರ ಜಡೇಜಾ ಅವರ ಅದ್ಭುತ ಜೊತೆಯಾಟ ಮತ್ತು ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಟಿ ನಟರಾಜನ್ ಮಾರಕ ಬೌಲಿಂಗ್ ತಂಡದ ಗೆಲುವಿಗೆ ಕಾರಣವಾಗಿದೆ.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ನಾನು ಸ್ಪಲ್ಪ ಸಮಯದವರೆಗಷ್ಟೇ ಪಂದ್ಯ ಮುಂದುವರೆಯಬಹುದು ಅಂದುಕೊಂಡಿದ್ದೆ. ಆದರೆ ಹಾರ್ದಿಕ್ ಮತ್ತು ಜಡೇಜಾ ಮಧ್ಯೆ ಒಳ್ಳೆಯ ಜೊತೆಯಾಟ ಬಂತು. ತಂಡ ಬಲಗೊಳ್ಳಲು ಇದೇ ಬೇಕಾಗಿದ್ದು. ಸರಣಿ ಸೋತರೂ ನಾವು ಹೃದಯದ ಬಯಕೆಯಿಂದ ಆಡಿದೆವು. ಆಸ್ಟ್ರೇಲಿಯಾದಲ್ಲಿ ಹೀಗೇ ಆಡಬೇಕಿದೆ,' ಎಂದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 12000 ರನ್: ದಾಖಲೆ ಬರೆದ ವಿರಾಟ್ ಕೊಹ್ಲಿಏಕದಿನ ಕ್ರಿಕೆಟ್‌ನಲ್ಲಿ 12000 ರನ್: ದಾಖಲೆ ಬರೆದ ವಿರಾಟ್ ಕೊಹ್ಲಿ

6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಹಾರ್ದಿಕ್ ಪಾಂಡ್ಯ ಮತ್ತು 7ನೇ ಬ್ಯಾಟಿಂಗ್ ಕ್ರಮಾಂದಲ್ಲಿ ಬಂದಿದ್ದ ರವೀಂದ್ರ ಜಡೇಜಾ ಅಜೇಯ ಆಟ ಆಡಿದ್ದರು. ಕ್ರಮವಾಗಿ 92, 66 ರನ್ ಬಾರಿಸಿದ್ದರು. ಹೀಗಾಗಿಯೇ ಭಾರತ ತಂಡ 302 ರನ್ ಗಳಿಸಿತ್ತು. ಆದರೆ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 289 ರನ್ ಬಾರಿಸಿ ಶರಣಾಯ್ತು. ಹಾರ್ದಿಕ್ ಪಂದ್ಯಶ್ರೇಷ್ಠರಾಗಿ, ಸ್ಟಿವ್ ಸ್ಮಿತ್ ಸರಣಿ ಶ್ರೇಷ್ಠರಾಗಿ ಮಿಂಚಿದರು.

Story first published: Thursday, December 3, 2020, 10:04 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X