ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಹಾರ್ದಿಕ್ ಪಾಂಡ್ಯ ಕೇವಲ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿರುವುದು ಅಸಾಧ್ಯ"

Hardik cant get a chance in playing XI if he cant bowl in limited-overs cricket: Sarandeep Singh

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆರು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹೊರಗಿಡಲಾಗಿದೆ. ಬೌಲಿಂಗ್ ಮಾಡಲು ಅಸಮರ್ಥರಾದ ಕಾರಣ ಹಾರ್ದಿಕ್ ಪಾಂಡ್ಯ ಅವರನ್ನು ಹೊರಗಿಡಲಾಗಿದೆ. ಆಯ್ಕೆ ಸಮಿತಿಯ ಈ ನಿರ್ಧಾರಕ್ಕೆ ಮಾಜಿ ಆಯ್ಕೆಗಾರ ಸರಂದೀಪ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಆಯ್ಕೆಗಾರರು ತೆಗೆದುಕೊಂಡ ನಿರ್ಧಾರವನ್ನು ಸಂದೀಪ್ ಶರ್ಮಾ ಬೆಂಬಲಿಸಿದ್ದಾರೆ. "ಆಯ್ಕೆಗಾರರು ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡದಿರುವ ಕಾರಣವನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವರು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡಲು ಸಮರ್ಥರಾಗಿಲ್ಲ. ನನ್ನ ಪ್ರಕಾರ ಏಕದಿನ ಮಾದರಿಯಲ್ಲಿ 10 ಓವರ್ ಮತ್ತು ಟಿ20 ಮಾದರಿಯಲ್ಲಿ 4 ಓವರ್‌ಗಳನ್ನು ಎಸೆಯರು ಅವರು ಸಮರ್ಥರಾಗಿಬೇಕು. ಆತ ಕೇವಲ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿರಲು ಸಾಧ್ಯವಿಲ್ಲ" ಎಂದಿದ್ದಾರೆ ಸರಂದೀಪ್ ಸಿಂಗ್.

ಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕ

"ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದಲ್ಲಿ ಅದು ತಂಡದ ಸಂಯೋಜನೆಯಲ್ಲಿ ದೊಡ್ಡ ಏರುಪೇರು ಮಾಡುತ್ತದೆ. ಈ ಕಾರಣದಿಂದಾಗಿ ನೀವು ಹೆಚ್ಚುವರಿ ಬೌಲರ್‌ನಲ್ಲಿ ತಂಡಕ್ಕೆ ಸೇರಿಸಿಕೊಳ್ಳಬೇಕು. ಇದರಿಂದಾಗಿ ಸೂರ್ಯಕುಮಾರ್ ಅಂತವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ" ಎಂದು ಸರಂದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ಈಗ ತಂಡದಲ್ಲಿ ಬೇರೆ ಆಲ್‌ರೌಂಡರ್‌ಗಳು ಇದ್ದಾರೆ. ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಅವರಂತಾ ಆಲ್‌ರೌಂಡರ್‌ಗಳು ಇದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದು ಅಸಾಧ್ಯವಾದರೆ ಇವರೆಲ್ಲಾ ಆ ಕರ್ತವ್ಯವನ್ನು ಪೂರೈಸಬಲ್ಲರು" ಎಂದಿದ್ದಾರೆ.

Story first published: Friday, May 14, 2021, 16:37 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X