ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾವೀ ಪತ್ನಿ ನತಾಶಾ ಗರ್ಭಿಣಿ, ಹಾರ್ದಿಕ್‌ಗೆ ಶುಭಾಶಯಗಳ ಮಹಾಪೂರ

Hardik Pandya announces fiance Natasa Stankovics pregnancy

ನವದೆಹಲಿ, ಮೇ 31: ಮದುವೆಯಾಗುವುದಕ್ಕೂ ಮುಂಚೆಯೇ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾಗುವ ಖುಷಿಯಲ್ಲಿದ್ದಾರೆ. ಹಾರ್ದಿಕ್ ಭಾವೀ ಪತ್ನಿ, ಪ್ರೇಯಸಿ ನತಾಶಾ ಸ್ಟ್ಯಾಂಕೋವಿಕ್ ಗರ್ಭಿಣಿಯಾಗಿದ್ದಾರೆ. ಶೀಘ್ರ ತಂದೆಯಾಗಲಿರುವ ಹಾರ್ದಿಕ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!

ಭಾನುವಾರ ಸಂಜೆಯಾಗುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಸುದ್ದಿಯಲ್ಲಿದ್ದರು. ಯಾಕೆಂದರೆ ತಾನು ಅಪ್ಪನಾಗಲಿರುವ ಸಂಗತಿಯನ್ನು ಸ್ವತಃ ಹಾರ್ದಿಕ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಭಾವೀ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಮತ್ತು ತಾನು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹಾರ್ದಿಕ್ ಹೇಳಿಕೊಂಡಿದ್ದರು.

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣ

ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹಾರ್ದಿಕ್ ಹೇಳಿದ್ದೇ ತಡ; ಕ್ರಿಕೆಟಿಗರು, ಅಭಿಮಾನಿಗಳಿಂದ ಶುಭಾಶಯಗಳ ಸಾಗರವೇ ಹಾರ್ದಿಕ್ ಅವರತ್ತ ಹರಿದುಬಂದಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಅನೇಕರು ಹಾರ್ದಿಕ್-ನತಾಶಾಗೆ ಶುಭಕೋರಿದ್ದಾರೆ.

ತನ್ನ ಮೂರು ಬೆಸ್ಟ್ ಆಯ್ಕೆಗಳನ್ನು ಹೆಸರಿಸಿದ ಮಾಜಿ ಆಯ್ಕೆದಾರ ಶ್ರೀಕಾಂತ್ತನ್ನ ಮೂರು ಬೆಸ್ಟ್ ಆಯ್ಕೆಗಳನ್ನು ಹೆಸರಿಸಿದ ಮಾಜಿ ಆಯ್ಕೆದಾರ ಶ್ರೀಕಾಂತ್

'ಬದುಕಿನಲ್ಲಿ ನತಾಶಾ ಮತ್ತು ನಾನು ಜೊತೆಯಾಗಿ ಪಯಣಿಸಿದ್ದೇವೆ. ಈಗ ಇನ್ನೂ ಹತ್ತಿರವಾಗುತ್ತಿದ್ದೇವೆ. ಶಿಘ್ರದಲ್ಲಿ ನಮ್ಮ ಜೊತೆಗೆ ಮತ್ತೊಂದು ಜೀವವನ್ನು ಸ್ವಾಗತಿಸಲು ನಾವಿಬ್ಬರೂ ಕಾತರರಾಗಿದ್ದೇವೆ,' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಬರೆದುಕೊಂಡಿದ್ದಾರೆ.

Story first published: Monday, June 1, 2020, 17:01 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X