ನವದೆಹಲಿ, ಮೇ 31: ಮದುವೆಯಾಗುವುದಕ್ಕೂ ಮುಂಚೆಯೇ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾಗುವ ಖುಷಿಯಲ್ಲಿದ್ದಾರೆ. ಹಾರ್ದಿಕ್ ಭಾವೀ ಪತ್ನಿ, ಪ್ರೇಯಸಿ ನತಾಶಾ ಸ್ಟ್ಯಾಂಕೋವಿಕ್ ಗರ್ಭಿಣಿಯಾಗಿದ್ದಾರೆ. ಶೀಘ್ರ ತಂದೆಯಾಗಲಿರುವ ಹಾರ್ದಿಕ್ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಕ್ರಿಕೆಟ್ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!
ಭಾನುವಾರ ಸಂಜೆಯಾಗುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಸುದ್ದಿಯಲ್ಲಿದ್ದರು. ಯಾಕೆಂದರೆ ತಾನು ಅಪ್ಪನಾಗಲಿರುವ ಸಂಗತಿಯನ್ನು ಸ್ವತಃ ಹಾರ್ದಿಕ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಭಾವೀ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಮತ್ತು ತಾನು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹಾರ್ದಿಕ್ ಹೇಳಿಕೊಂಡಿದ್ದರು.
ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣ
ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹಾರ್ದಿಕ್ ಹೇಳಿದ್ದೇ ತಡ; ಕ್ರಿಕೆಟಿಗರು, ಅಭಿಮಾನಿಗಳಿಂದ ಶುಭಾಶಯಗಳ ಸಾಗರವೇ ಹಾರ್ದಿಕ್ ಅವರತ್ತ ಹರಿದುಬಂದಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಅನೇಕರು ಹಾರ್ದಿಕ್-ನತಾಶಾಗೆ ಶುಭಕೋರಿದ್ದಾರೆ.
View this post on InstagramA post shared by Hardik Pandya (@hardikpandya93) on
ತನ್ನ ಮೂರು ಬೆಸ್ಟ್ ಆಯ್ಕೆಗಳನ್ನು ಹೆಸರಿಸಿದ ಮಾಜಿ ಆಯ್ಕೆದಾರ ಶ್ರೀಕಾಂತ್
'ಬದುಕಿನಲ್ಲಿ ನತಾಶಾ ಮತ್ತು ನಾನು ಜೊತೆಯಾಗಿ ಪಯಣಿಸಿದ್ದೇವೆ. ಈಗ ಇನ್ನೂ ಹತ್ತಿರವಾಗುತ್ತಿದ್ದೇವೆ. ಶಿಘ್ರದಲ್ಲಿ ನಮ್ಮ ಜೊತೆಗೆ ಮತ್ತೊಂದು ಜೀವವನ್ನು ಸ್ವಾಗತಿಸಲು ನಾವಿಬ್ಬರೂ ಕಾತರರಾಗಿದ್ದೇವೆ,' ಎಂದು ಇನ್ಸ್ಟಾಗ್ರಾಮ್ನಲ್ಲಿ ಹಾರ್ದಿಕ್ ಬರೆದುಕೊಂಡಿದ್ದಾರೆ.