ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆ

Hardik Pandya Hands His Man Of The Series Trophy To pacer T Natarajan

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಭಾರತ ರೋಚಕವಾಗಿ ಹೋರಾಡಿ ಸೋಲೊಪ್ಪಿಕೊಂಡಿದೆ. ಆದರೆ 2-1 ಅಂತರದಿಂದ ಟಿ20 ಸರಣಿ ಭಾರತ ವಶವಾಗಿದೆ. ಈ ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಆಟಗಾರನಿಗೆ ನೀಡುವ ಸರಣಿ ಶ್ರೇಷ್ಠ ಪ್ರಶಸ್ತಿ ಹಾರ್ದಿಕ್ ಪಾಂಡ್ಯ ಪಾಲಾಯಿತು. ಆದರೆ ಹಾರ್ದಿಕ್ ಪಾಂಡ್ಯ ಈ ಪ್ರಶಸ್ತಿ ಪಡೆದ ಬಳಿಕ ತೋರಿದ ವರ್ತನೆ ಅಭಿಮಾನಿಗಳ ಹೃದಯ ಗೆಲ್ಲುವಂತೆ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಟಿ20 ಸರಣಿಯಲ್ಲೂ ಈ ಪ್ರದರ್ಶನವನ್ನು ಮುಂದುವರಿಸಿದ ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಆಸರೆಯಾದರು. ಭಾರತದ ಗೆಲುವಿಗೆ ಕಾರಣರಾದರು. ಈ ಶ್ರೇಷ್ಟ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಭಾರತ vs ಆಸೀಸ್: ಉತ್ತಮ ನಡೆಯಿಂದ ಗಮನ ಸೆಳೆದ ವಿರಾಟ್ ಕೊಹ್ಲಿಭಾರತ vs ಆಸೀಸ್: ಉತ್ತಮ ನಡೆಯಿಂದ ಗಮನ ಸೆಳೆದ ವಿರಾಟ್ ಕೊಹ್ಲಿ

ಹೃದಯ ವೈಶಾಲ್ಯತೆ ಮೆರೆದ ಪಾಂಡ್ಯ

ಹೃದಯ ವೈಶಾಲ್ಯತೆ ಮೆರೆದ ಪಾಂಡ್ಯ

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ 12 ರನ್‌ಗಳ ಅಂತರದ ಸೋಲು ಕಂಡಿತು. ಆದರೆ ಸರಣಿಯನ್ನು ಟೀಮ್ ಇಂಡಿಯಾ ಅದಾಗಲೇ ತನ್ನದಾಗಿಸಿಕೊಂಡಿತ್ತು. ಈ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರಾದರೂ ಅದನ್ನು ತಾನು ಇಟ್ಟುಕೊಳ್ಳಲು ಬಯಸಿಲ್ಲ. ತನಗಿಂತ ನಟರಾಜನ್ ಈ ಪ್ರಶಸ್ತಿಗೆ ಹೆಚ್ಚು ಅರ್ಹ ಎಂದು ಪಾಂಡ್ಯ ಅದನ್ನು ವೇಗಿ ನಟರಾಜನ್‌ಗೆ ನೀಡಿದ್ದಾರೆ.

ಸರಣಿಯಲ್ಲಿ 6 ವಿಕೆಟ್ ಕಬಳಿಸಿದ ನಟರಾಜನ್

ಸರಣಿಯಲ್ಲಿ 6 ವಿಕೆಟ್ ಕಬಳಿಸಿದ ನಟರಾಜನ್

ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಇದೇ ಮೊದಲ ಬಾರಿಗೆ ಕಣಕ್ಕಿಳಿದ ಟಿ ನಟರಾಜನ್ ಅದ್ಭುತ ಆಟವಾಡಿದರು. ಭಾರತ ಪರವಾಗಿ ಮೂರು ಟಿ20 ಪಂದ್ಯಗಳಲ್ಲಿ ನಟರಾಜನ್ ಬಿಗುವಿನ ದಾಳಿ ನಡೆಸಿದ್ದಾರೆ. ಸರಣಿಯಲ್ಲಿ 6 ವಿಕೆಟ್ ಕಬಳಿಸಿದ್ದಾರೆ ನಟರಾಜನ್.

ಮೊದಲ ಪ್ರವಾಸದಲ್ಲಿ ಮಿಂಚಿದ ನಟ್ಟು

ಮೊದಲ ಪ್ರವಾಸದಲ್ಲಿ ಮಿಂಚಿದ ನಟ್ಟು

ಈ ಬಾರಿಯ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟರಾಜನ್ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಜೊತೆಗೆ ರನ್ ನಿಯಂತ್ರಣ ಮಾಡುವಲ್ಲಿಯೂ ನಟರಾಜನ್ ಯಶಸ್ವಿಯಾಗಿದ್ದಾರೆ. ಮೊದಲ ಪಂದ್ಯ ಟಿ20 ಪಂದ್ಯದಲ್ಲಿ ನಟರಾಜನ್ 2 ವಿಕೆಟ್ ಪಡೆದರೆ ಎರಡನೇ ಪಂದ್ಯದಲ್ಲಿ ಮೂರು ವಿಕೆಟ್ ತನ್ನದಾಗಿಸಿಕೊಂಡರು. ಅಂತಿಮ ಪಂದ್ಯದಲ್ಲೂ ಒಂದು ವಿಕೆಟ್ ಉರುಳಿಸುವಲ್ಲಿ ನಟರಾಜನ್ ಯಶಸ್ವಿಯಾದರು.

ಎರಡನೇ ಪಂದ್ಯದ ಬಳಿಕ ಪಾಂಡ್ಯ ಹೇಳಿಕೆ

ಎರಡನೇ ಪಂದ್ಯದ ಬಳಿಕ ಪಾಂಡ್ಯ ಹೇಳಿಕೆ

ಹಾರ್ದಿಕ್ ಪಾಂಡ್ಯ ಎರಡನೇ ಟಿ20 ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನಿಡುವ ಮೂಲಕ ಭಾರತ ತಂಡ ಗೆಲ್ಲಲು ಕಾರಣರಾಗಿದ್ದರು. ಪಂದ್ಯದ ನಂತರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಾಂಡ್ಯ ಮುಡಿಗೆರಿಸಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲೇ ಪಾಂಡ್ಯ ತನಗಿಂತಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ನಟರಾಜನ್ ಅರ್ಹರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ಪಂದ್ಯದಲ್ಲಿ ನಟರಾಜನ್ 5 ಎಕಾನಮಿಯಲ್ಲಿ ರನ್ ನೀಡಿ 2 ವಿಕೆಟ್ ಪಡೆದಿದ್ದರು.

Story first published: Tuesday, December 8, 2020, 18:45 [IST]
Other articles published on Dec 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X