ದ್ರಾವಿಡ್ ಗರಡಿ ಸೇರಿದ ಹಾರ್ದಿಕ್ ಪಾಂಡ್ಯಾ; ಟಿ ಟ್ವೆಂಟಿ ವಿಶ್ವಕಪ್‌ ತಂಡದಲ್ಲಿ ಪಾಂಡ್ಯಾಗೆ ಸ್ಥಾನ?

ಒಂದೆಡೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸರಣಿ ಸದ್ದು ಮಾಡಿದ್ದರೆ, ಮತ್ತೊಂದೆಡೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಸದ್ದು ಮಾಡುತ್ತಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ಫ್ರಾಂಚೈಸಿಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಕಣಕ್ಕಿಳಿಯುತ್ತಿದ್ದು, ಗುಜರಾತ್ ಟೈಟನ್ಸ್ ತಂಡವನ್ನು ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇನ್ನು ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯಾ ನಂತರ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದರು. ಹೀಗೆ ಟೀಮ್ ಇಂಡಿಯಾ ಆಡಿರುವ ಹಲವಾರು ಸರಣಿಗಳಲ್ಲಿ ಭಾಗವಹಿಸದೇ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯಾಗೆ ಬೇಡಿಕೆ ಏನೂ ಕಡಿಮೆಯಾಗಿಲ್ಲ. ಸದ್ಯ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯಾ ಇದೇ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲೂ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಭಾರತ vs ಶ್ರೀಲಂಕಾ ಟೆಸ್ಟ್ ನಂತರ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರ & ಕೊನೇ ಸ್ಥಾನ ಯಾರಿಗೆ?ಭಾರತ vs ಶ್ರೀಲಂಕಾ ಟೆಸ್ಟ್ ನಂತರ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರ & ಕೊನೇ ಸ್ಥಾನ ಯಾರಿಗೆ?

ಹೌದು, ಹಾರ್ದಿಕ್ ಪಾಂಡ್ಯಾ ಇದೀಗ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ತಲುಪಿದ್ದು, ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ನಡೆಯಲಿರುವ ಫಿಟ್‌ನೆಸ್ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಗಾಯದ ಸಮಸ್ಯಗೊಳಗಾಗಿ ಫಿಟ್‌ನೆಸ್ ಕಳೆದುಕೊಂಡಿರುವ ಆಟಗಾರಿಗಾಗಿ ಈ ಕ್ಯಾಂಪ್ ಏರ್ಪಡಿಸಲಾಗಿದ್ದು, ಹಾರ್ದಿಕ್ ಪಾಂಡ್ಯಾ ಜೊತೆ ಭಾರತ ಸೀಮಿತ್ ಓವರ್ ತಂಡಗಳ ಇತರೆ ಆಟಗಾರರೂ ಸಹ ಈ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಗುಜರಾತ್ ಟೈಟನ್ಸ್ ಕೂಡ ಮಾಹಿತಿ ಹಂಚಿಕೊಂಡಿದ್ದು, ನ್ಯಾಷನಲ್ ಅಕಾಡೆಮಿ ತಲುಪಿರುವ ಹಾರ್ದಿಕ್ ಪಾಂಡ್ಯ ಕೆಲ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಇರಲಿದ್ದು ನಂತರ ಗುಜರಾತ್ ಟೈಟನ್ಸ್ ತಂಡದ ತರಬೇತಿ ಸೇರಿಕೊಳ್ಳಲಿದ್ದಾರೆ ಎಂದಿದೆ. ಇನ್ನು ಗುಜರಾತ್ ಟೈಟನ್ಸ್ ತಂಡ ಮಾರ್ಚ್ 17ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ತರಬೇತಿಯನ್ನು ಆರಂಭಿಸಲಿದೆ.

ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಸ್ಥಾನ?

ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಸ್ಥಾನ?

ಸದ್ಯ ಟೀಮ್ ಇಂಡಿಯಾದಿಂದ ಹಲವು ತಿಂಗಳುಗಳಿಂದ ದೂರ ಉಳಿದಿರುವ ಹಾರ್ದಿಕ್ ಪಾಂಡ್ಯಾರನ್ನು ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ನಡೆಯಲಿರುವ ಕ್ಯಾಂಪ್‌ಗೆ ಆಯ್ಕೆ ಮಾಡಿರುವುದರಿಂದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯಾಗೆ ಸ್ಥಾನ ನೀಡುವತ್ತ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹಾರ್ದಿಕ್ ಪಾಂಡ್ಯಾ ಆಡಿರುವ ಕಳೆದ ಕೆಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡದೇ ಇದ್ದದ್ದು ಅವರಿಗೆ ಹಿನ್ನಡೆಯನ್ನುಂಡುಮಾಡಿತ್ತು. ಆದರೆ ಇತ್ತೀಚಿಗಷ್ಟೆ ಗುಜರಾತ್ ಟೈಟನ್ಸ್ ನೀಡಿದ್ದ ಮಾಹಿತಿ ಪ್ರಕಾರ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡಲು ಶಕ್ತರಾಗಿದ್ದಾರೆ ಎನ್ನಲಾಗಿತ್ತು. ಹಾಗೂ ಹಾರ್ದಿಕ್ ಪಾಂಡ್ಯಾ ಮತ್ತೆ ಎನ್‌ಸಿಎ ಕ್ಯಾಂಪ್ ಸೇರಿರುವುದು ಅವರಿಗೆ ಮತ್ತಷ್ಟು ಫಿಟ್ ಆಗಲು ಅನುಕೂಲವಾಗಲಿದೆ ಎನ್ನಬಹುದು.

ಗುಜರಾತ್ ಟೈಟನ್ಸ್ ಜೆರ್ಸಿ ಅನಾವರಣ

ಗುಜರಾತ್ ಟೈಟನ್ಸ್ ಜೆರ್ಸಿ ಅನಾವರಣ

ಗುಜರಾತ್ ಟೈಟನ್ಸ್ ಜೆರ್ಸಿ ಬಿಡುಗಡೆ: ಹಾರ್ದಿಕ್ ಪಾಂಡ್ಯಾ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ನೂತನ ತಂಡ ಗುಜರಾತ್ ಟೈಟನ್ಸ್ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಕಳೆದ ಶನಿವಾರ ( ಮಾರ್ಚ್ 12 ) ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ನೀಲಿ ಮತ್ತು ತಿಳಿನೀಲಿ ಬಣ್ಣದ ಜೆರ್ಸಿಯನ್ನು ಗುಜರಾತ್ ಟೈಟನ್ಸ್ ಫ್ರಾಂಚೈಸಿ ತಮ್ಮ ನಾಯಕ ಹಾರ್ದಿಕ್ ಪಾಂಡ್ಯಾ ಮತ್ತು ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿತು.

ಗುಜರಾತ್ ಟೈಟನ್ಸ್ ಸ್ಕ್ವಾಡ್

ಗುಜರಾತ್ ಟೈಟನ್ಸ್ ಸ್ಕ್ವಾಡ್

ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ರಹಮಾನುಲ್ಲಾ ಗುರ್ಬಾಜ್, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಸಾಯಿ ಕಿಶೋರ್, ವಿಜಯ್ ಶಂಕರ್, ಜಯಂತ್ ಯಾದವ್, ಡೊಮಿನಿಕ್ ಡ್ರೇಕ್ಸ್, ದರ್ಶನ್ ನಲ್ಕಂಡೆ, ಪ್ರದೀಪ್ ನಲ್ಕಂಡೆ, ಯಶ್ವಾನ್ ದಯಾಳ್ , ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್.

For Quick Alerts
ALLOW NOTIFICATIONS
For Daily Alerts
Story first published: Tuesday, March 15, 2022, 15:10 [IST]
Other articles published on Mar 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X