ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯಗೆ ಏನು ಮಾಡಬೇಕೆಂಬುದು ತಿಳಿದಿದೆ, ಕೋಚ್‌ಗಳ ಸಲಹೆ ಬೇಕಿಲ್ಲ ಎಂದ ಮೆಗ್ರಾತ್!

Hardik Pandya know what to do, He doesnt need to be told by coaches says Glenn McGrath

ಈ ಬಾರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಭರ್ಜರಿ ಯಶಸ್ಸು ಸಾಧಿಸಿದ ಹಾರ್ದಿಕ್ ಪಾಂಡ್ಯ ತಮ್ಮ ತಂಡ ಟ್ರೋಫಿ ಎತ್ತಿ ಹಿಡಿದು ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದರು. ಕೇವಲ ನಾಯಕನಾಗಿ ಮಾತ್ರವಲ್ಲದೇ ಆಟಗಾರನಾಗಿಯೂ ವೈಯಕ್ತಿಕವಾಗಿ ಪಾಂಡ್ಯ ಕಮ್‌ಬ್ಯಾಕ್ ಮಾಡುವುದರ ಮೂಲಕ ತನ್ನ ವಿರುದ್ಧ ಇದ್ದ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿದರು ಹಾಗೂ ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿಯುವ ಅವಕಾಶವನ್ನು ಗಿಟ್ಟಿಸಿಕೊಂಡರು.

ನೂತನ ಏಕದಿನ ರ್‍ಯಾಂಕಿಂಗ್: ಕೊಹ್ಲಿಯನ್ನು ಹಿಂದಿಕ್ಕಿದ ಇಮಾಮ್ ಉಲ್ ಹಕ್; ರೋಹಿತ್ ಎಷ್ಟನೇ ಸ್ಥಾನ?ನೂತನ ಏಕದಿನ ರ್‍ಯಾಂಕಿಂಗ್: ಕೊಹ್ಲಿಯನ್ನು ಹಿಂದಿಕ್ಕಿದ ಇಮಾಮ್ ಉಲ್ ಹಕ್; ರೋಹಿತ್ ಎಷ್ಟನೇ ಸ್ಥಾನ?

ಈ ಹಿಂದೆ ಗಾಯದ ಸಮಸ್ಯೆಯಿಂದಾಗಿ ಕಳಪೆ ಫಾರ್ಮ್ ಹೊಂದಿ ಬೌಲಿಂಗ್ ಮಾಡಲಾಗದೇ ಸಾಕಷ್ಟು ಟೀಕೆಗಳನ್ನು ಎದುರಿಸಿ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೌಲಿಂಗ್ ಕೂಡ ಮಾಡಿ ಮಿಂಚಿದ್ದರು. ಹೀಗಾಗಿಯೇ ಬಿಸಿಸಿಐ ಆಯ್ಕೆಗಾರರೂ ಸಹ ಹಾರ್ದಿಕ್ ಪಾಂಡ್ಯರನ್ನು ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಆಡುವ ಅವಕಾಶವನ್ನು ನೀಡಿದರು. ಅಷ್ಟೇ ಅಲ್ಲದೇ ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿದೆ.

'ಕನ್ನಡಿಯಲ್ಲಿ ಮುಖ ನೋಡಿಕೋ': ಉಮರ್ ಅಕ್ಮಲ್ ಆರೋಪಕ್ಕೆ ಕೋಚ್ ಮಿಕ್ಕಿ ಆರ್ಥರ್ ತಿರುಗೇಟು!'ಕನ್ನಡಿಯಲ್ಲಿ ಮುಖ ನೋಡಿಕೋ': ಉಮರ್ ಅಕ್ಮಲ್ ಆರೋಪಕ್ಕೆ ಕೋಚ್ ಮಿಕ್ಕಿ ಆರ್ಥರ್ ತಿರುಗೇಟು!

ಹೀಗೆ ಕೆಟ್ಟ ಫಾರ್ಮ್ ಕಿತ್ತಿಟ್ಟು ಉತ್ತಮ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾಗೆ ಮರಳಿದ ಹಾರ್ದಿಕ್ ಪಾಂಡ್ಯ ಕುರಿತು ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೆಗ್ರಾತ್ ಮಾತನಾಡಿದ್ದು, ಈ ಕೆಳಕಂಡಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಕೋಚ್ ಸಲಹೆ ಬೇಕಿಲ್ಲ

ಹಾರ್ದಿಕ್ ಪಾಂಡ್ಯಗೆ ಕೋಚ್ ಸಲಹೆ ಬೇಕಿಲ್ಲ

'ಹಾರ್ದಿಕ್‌ಗೆ ಈಗ ಸಾಕಷ್ಟು ಅನುಭವ ಸಿಕ್ಕಿದೆ. ಏನು ಮಾಡಬೇಕೆಂದು ಆತನಿಗೆ ತಿಳಿದಿದೆ. ಆತ ಏನು ಮಾಡಬೇಕೆಂದು ತರಬೇತುದಾರರಿಂದ ಹೇಳಬೇಕಾಗಿಲ್ಲ. ಆತ ಗುಣಮಟ್ಟದ ಆಲ್ ರೌಂಡರ್, ಗುಣಮಟ್ಟದ ಹಿಟ್ಟರ್' ಎಂದು ಗ್ಲೆನ್ ಮೆಗ್ರಾತ್ ಹಾರ್ದಿಕ್ ಪಾಂಡ್ಯ ಕುರಿತು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಕೆಲ ಪಂದ್ಯ ಕೈತಪ್ಪುತ್ತದೆ, ಕೆಲ ಪಂದ್ಯ ಯಶಸ್ವಿಯಾಗುತ್ತದೆ

ಕೆಲ ಪಂದ್ಯ ಕೈತಪ್ಪುತ್ತದೆ, ಕೆಲ ಪಂದ್ಯ ಯಶಸ್ವಿಯಾಗುತ್ತದೆ

ಇನ್ನೂ ಮುಂದುವರೆದು ಮಾತನಾಡಿರುವ ಮೆಗ್ರಾತ್ ಕೆಲ ಪಂದ್ಯಗಳಲ್ಲಿ ನಿರೀಕ್ಷಿಸದ ಪ್ರದರ್ಶನ ಬರುತ್ತದೆ, ಇನ್ನೂ ಕೆಲ ಪಂದ್ಯಗಳಲ್ಲಿ ನಿರೀಕ್ಷೆಯನ್ನು ಮುಟ್ಟಲಾಗುವುದಿಲ್ಲ, ಆದರೆ ಹಾರ್ದಿಕ್ ಪಾಂಡ್ಯಗೆ ಏನು ಮಾಡಬೇಕೆಂಬುದು ಚೆನ್ನಾಗಿ ತಿಳಿದಿದೆ.

ಐರ್ಲೆಂಡ್ ವಿರುದ್ಧದ ಸರಣಿಗೆ ಪ್ರಕಟವಾಗಿರುವ ಭಾರತ ತಂಡ

ಐರ್ಲೆಂಡ್ ವಿರುದ್ಧದ ಸರಣಿಗೆ ಪ್ರಕಟವಾಗಿರುವ ಭಾರತ ತಂಡ

ಇದೇ ತಿಂಗಳ ಜೂನ್ 26 ಮತ್ತು 28ರಂದು ನಡೆಯಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಬಿಸಿಸಿಐ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದು, ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆ), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್

Story first published: Thursday, June 16, 2022, 14:17 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X