ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮನೆಯಲ್ಲೇ ಹೇಗೆ ಕಾಲಕಳೆಯಬಹುದೆಂದು ವಿಡಿಯೋ ಮೂಲಕ ತಿಳಿಸಿದ ಪಾಂಡ್ಯಾ ಸೋದರರು

Hardik Pandya, Krunal Pandya Shows Everyone How To Have Fun Indoors

ಟೀಮ್ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯಾ ಮತ್ತು ಕೃಣಾಲ್ ಪಾಂಡ್ಯಾ ಸಹೋದರರು ಪ್ರತಿಯೊಬ್ಬರೂ ಮನೆಯಲ್ಲಿಯೇ ಇರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿಶೇಷ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಹರಿಯಬಿಟ್ಟಿರುವ ಪಾಂಡ್ಯಾ ಸಹೋದರರು ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ಮನೆಯ ಒಳಗಡೆಯೇ ಕುಟುಂಬಸ್ಥರ ಜೊತೆಗೆ ಕ್ರಿಕೆಟ್ ಆಡುತ್ತಾ ಪಾಂಡ್ಯಾ ಸಹೋದರರು ಕಾಲ ಕಳೆಯುತ್ತಿದ್ದಾರೆ ಎಂದು ಈ ವಿಡಿಯೋ ಮೂಲಕ ತಿಳಿಯುತ್ತದೆ. ಮತ್ತು ಈ ರೀತಿಯಾಗಿ ನೀವೂ ಕೂಡ ಮನೆಯಲ್ಲೆ ಉತ್ತಮವಾಗ ಕಾಲವನ್ನು ಕಳೆಯಬಹುದು ಎಂದು ಈ ವಿಡಿಯೋದಲ್ಲಿ ಪಾಂಡ್ಯಾ ಸಹೋದರರು ಹೇಳಿಕೊಂಡಿದ್ದಾರೆ.

ಐಪಿಎಲ್ 2020: ರದ್ದಾಗುವ ಹಾದಿಯಲ್ಲಿ ಮೆಗಾ ಟೂರ್ನಿ!ಐಪಿಎಲ್ 2020: ರದ್ದಾಗುವ ಹಾದಿಯಲ್ಲಿ ಮೆಗಾ ಟೂರ್ನಿ!

ದೇಶಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಭಾರತ ಸಂಪೂರ್ಣ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಗಡೆ ಬಾರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಹೀಗಾಗಿ ಸರ್ಕಾರದ ಈ ಆದೇಶವನ್ನು ಪಾಲಿಸುವಂತೆ ಈ ಕ್ರಿಕೆಟಿಗರು ಮನವಿ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬರೂ ಸುರಕ್ಷಿತವಾಗಿರಿ. ಮನೆಯಿಂದ ಹೊರಗಡೆಹೋಗುವಂದು ತಡೆಯಿರಿ, ನಾವು ಮಾಡಿದಂತೆಯೇ ನೀವು ಮನೆಯ ಒಳಗಡೆಯೂ ಕುಟುಂಬದ ಜೊತೆಗೆ ಸುಂದರವಾಗಿ ಕಾಲವನ್ನು ಕಳೆಯಬಹುದು, ಎಲ್ಲರೂ ಮನೆಯಲ್ಲಿಯೇ ಇದ್ದು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟೋಣ ಎಂದಿದ್ದಾರೆ ಪಾಂಡ್ಯಾ ಸಹೋದರರು.

ಕೊರೊನಾ ವಿರುದ್ಧ ಹೋರಾಟ: ಸುರೇಶ್ ರೈನಾ 52ಲಕ್ಷ, ರಹಾನೆ 10 ಲಕ್ಷ ದೇಣಿಗೆಕೊರೊನಾ ವಿರುದ್ಧ ಹೋರಾಟ: ಸುರೇಶ್ ರೈನಾ 52ಲಕ್ಷ, ರಹಾನೆ 10 ಲಕ್ಷ ದೇಣಿಗೆ

ಕೊರೊನಾ ವೈರಸ್‌ನ ಕಾರಣದಿಂದಾಗಿ ಇಡೀ ಕ್ರೀಡಾಲೋಕವೇ ಸದ್ಯ ಸ್ಥಬ್ಧವಾಗಿದೆ. ಈ ಮೂಲಕ ವಿಶ್ವದ ಎಲ್ಲಾ ಕ್ರೀಡಾಕೂಟಗಳೂ ರದ್ದಾಗಿದೆ. ಹೀಗಾಗಿ ಕೊರೊನಾ ವೈರಸ್‌ ಕ್ರೀಡಾ ಜಗತ್ತಿಗೆ ದೊಡ್ಡ ಏಟನ್ನು ನೀಡಿದೆ.

Story first published: Monday, March 30, 2020, 13:16 [IST]
Other articles published on Mar 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X