ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ: ನಾಯಕ ರೋಹಿತ್ or ಧೋನಿ ?

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೊನ್ನೆಷ್ಟೇ ಮದುವೆಗೂ ಮುನ್ನ ಸಿಹಿಸುದ್ದಿಯನ್ನು ನೀಡಿ ಸುದ್ದಿಯಾದರು. ಮೇ 31ರಂದು ತಾನು ಶೀಘ್ರದಲ್ಲೇ ತಂದೆಯಾಗುತ್ತಿರುವುದಾಗಿ ಘೋಷಿಸಿದರು. ಅದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಕಾಮೆಂಟೇಟರ್ ಹರ್ಷ ಭೋಗ್ಲೆ ಜೊತೆಗೆ ಸಂವಹನವನ್ನು ನಡೆಸುತ್ತಾ ವಿವಾದಾತ್ಮಕ ಕಾಫಿ ವಿದ್ ಕರಣ್ ಕಾರ್ಯಕ್ರಮದ ಎಪಿಸೋಡ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು.

ಈಗ ಹಾರ್ದಿಕ್ ಪಾಂಡ್ಯ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಹೆಸರಿಸಿದ್ದಾರೆ. ಅಂತಾರಾಷ್ಟ್ರೀಯ ಘಟಾನುಘಟಿ ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಹಾರ್ದಿಕ್ ಪಾಂಡ್ಯ ಹೆಸರಿಸಿದ್ದಾರೆ. ಆದರೆ ಕುತೂಹಲದ ವಿಚಾರವೆನೆಂದರೆ ಈ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಯಾರಿಗೆ ನೀಡಿದ್ದಾರೆ ಎನ್ನುವುದು.

ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

ಹಾರ್ದಿಕ್ ಪಾಂಡ್ಯ ಹೆಸರಿಸಿದ ಶ್ರೇಷ್ಠ ಐಪಿಎಲ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ. ನಾಯಕತ್ವ ಯಾರು ವಹಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದೆ ಓದಿ..

ನಾಯಕ ಯಾರು?

ನಾಯಕ ಯಾರು?

ಹಾರ್ದಿಕ್ ಪಾಂಡ್ಯಾ ಹೆಸರಿಸಿದ ಈ ಶ್ರೇಷ್ಠ ತಂಡದಲ್ಲಿ ನಾಯಕತ್ವ ಯಾರಿಗೆ ನೀಡಿದ್ದಾರೆ ಎಂಬುದು ಬಹಳ ದೊಡ್ಡ ಕುತೂಹಲ. ಯಾಕೆಂದರೆ ಐಪಿಎಲ್‌ನಲ್ಲಿ ಹಾರ್ದಿಕ್ ಪದಾರ್ಪಣೆ ಮಾಡಿದ ಬಳಿಕ ರೋಹಿತ್ ಶರ್ಮಾ ಬಿಟ್ಟು ಬೇರೆ ಯಾರ ನಾಯಕತ್ವದಲ್ಲೂ ಆಡಿಲ್ಲ. ರೋಹಿತ್ ನಾಲ್ಕು ಐಪಿಎಲ್ ಪ್ರಶಸ್ತಿ ಗೆದ್ದು ತನ್ನಲ್ಲಿರುವ ನಾಯಕತ್ವ ಗುಣವನ್ನು ಬಹಿರಂಗಗೊಳಿಸಿದ್ದಾರೆ. ಮತ್ತೊಂದೆಡೆ ಧೋನಿ ನಾಯಕತ್ವದ ಬಗ್ಗೆಯೂ ಎರಡು ಮಾತಿಲ್ಲ.

ಶರ್ಮಾ ಬಿಟ್ಟು ಧೋನಿ ಆಯ್ಕೆ ಮಾಡಿದ ಪಾಂಡ್ಯ

ಶರ್ಮಾ ಬಿಟ್ಟು ಧೋನಿ ಆಯ್ಕೆ ಮಾಡಿದ ಪಾಂಡ್ಯ

ಅಚ್ಚರಿಯೇನೆಂದರೆ ನಾಯಕನ ವಿಚಾರದಲ್ಲಿ ಪಾಂಡ್ಯಾ ಮೊದಲ ಆಯ್ಕೆ ರೋಹಿತ್ ಶರ್ಮಾ ಆಗಿರುತ್ತದ ಎಂಬುದು ಎಲ್ಲರ ಭಾವನೆ. ಆದರೆ ಪಾಂಡ್ಯಾ ಎಂಎಸ್ ಧೋನಿಯನ್ನು ಈ ತಂಡದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಧೋನಿಯ ಅನುಭವ ಮತ್ತು ಚಾಣಾಕ್ಷತದಿಂದಾಗಿ ಧೋನಿಯೇ ಸೂಕ್ತ ನಾಯಕ ಎಂದು ಪಾಂಡ್ಯಾ ಆಯ್ಕೆ ಮಾಡಿದ್ದಾರೆ.

ಅಗ್ರ ಕ್ರಮಾಂಕ ಹೀಗಿದೆ

ಅಗ್ರ ಕ್ರಮಾಂಕ ಹೀಗಿದೆ

ಪಾಂಡ್ಯಾ ಹೆಸರಿಸಿದ ಈ ತಂಡದಲ್ಲಿ ಆರಂಭಿಕನಾಗಿ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಇದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯನ್ನು ಹೆಸರಸಿದ್ದಾರೆ. ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಅವರನ್ನು ಅವರ ಸಾಮಾನ್ಯ ಕ್ರಮಾಂಕದಿಂದ ಕೆಳಕ್ಕಿಳಿಸಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಇದ್ದಾರೆ. ರೈನಾ ಮೂರನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದವರು. ಅವರನ್ನು ಐದನೇ ಕ್ರಮಾಂಕದಲ್ಲಿ ಪಾಂಡ್ಯಾ ಹೆಸರಿಸಿದ್ದಾರೆ. ನಾಯಕ ಧೋನಿ ಆರನೇ ಕ್ರಮಾಂಕದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯಾ ಸ್ವತಃ ತಮ್ಮನ್ನು ಈ ತಂಡದಲ್ಲಿ ಪಾಂಡ್ಯ ಸೇರ್ಪಡೆಗೊಳಿಸಿದ್ದಾರೆ.

ಬೌಲಿಂಗ್ ವಿಭಾಗ ಹೀಗಿದೆ

ಬೌಲಿಂಗ್ ವಿಭಾಗ ಹೀಗಿದೆ

ಬೌಲಿಂಗ್ ವಿಭಾಗವನ್ನೂ ಜಾಣತನದಿಂದ ಹೆಸರಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಇಬ್ಬರು ಸ್ಪಿನ್ನರ್‌ಗಳು ಇದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ರಶೀದ್ ಖಾನ್ ಮತ್ತು ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್ ಸ್ಪಿನ್ ವಿಭಾಗದಲ್ಲಿದ್ದರೆ ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರಿತ್ ಬೂಮ್ರಾ ಮತ್ತು ಲಸಿತ್ ಮಲಿಂಗ ಪಾಂಡ್ಯ ಹೆಸರಿಸಿದ ತಂಡದಲ್ಲಿರುವ ವೇಗಿಗಳಾಗಿದ್ದಾರೆ.

ಪಾಂಡ್ಯ ಆಲ್‌ಟೈಮ್ ತಂಡ

ಪಾಂಡ್ಯ ಆಲ್‌ಟೈಮ್ ತಂಡ

ಕ್ರಿಸ್ ಗೇಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸುನಿಲ್ ನರೈನ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ, ಲಸಿತ್ ಮಲಿಂಗ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 5, 2020, 16:30 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X