ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದ್ದಾರೆ: ಸಂಜಯ್ ಮಂಜ್ರೆಕರ್

Hardik Pandya showed a lot of clarity at No. 6: Sanjay Manjrekar

ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 66 ರನ್‌ಗಳ ಅಂತರದ ಸೋಲು ಕಂಡಿದೆ. ಆದರೆ ಈ ಸೋಲಿನಲ್ಲೂ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ರ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ ಬಳಿಕ ಧವನ್ ಜೊತೆ ಸೇರಿಕೊಂಡ ಪಾಂಡ್ಯ ಆಸಿಸ್ ನೀಡಿದ್ದ ಬೃಹತ್ ಮೊತ್ತದ ಬೆನ್ನುಹತ್ತಿದ್ದರು. ಆದರೆ ಸಂಪೂರ್ಣವಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.

ಆದರೆ ಹಾರ್ದಿಕ್ ಪಾಂಡ್ಯ ಅವರ ಆಸಿಸ್ ವಿರುದ್ಧದ ಮೊದಲ ಪಂದ್ಯದ ಬ್ಯಾಟಿಂಗ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದು ಜವಾಬ್ಧಾರಿಯುತ ಪ್ರದರ್ಶನ ನೀಡಿದ್ದಲ್ಲದೆ ಧವನ್ ಜೊತೆ ಸೇರಿ ಶತಕದ ಜೊತೆಯಾಟವನ್ನೂ ನೀಡಿದ್ದರು ಪಾಂಡ್ಯ. ಆದರೆ ಕೇವಲ 10 ರನ್‌ಗಳ ಅಂತರದಿಂದ ಶತಕವನ್ನು ತಪ್ಪಿಸಿಕೊಂಡರು.

ಭಾರತ vs ಆಸ್ಟ್ರೇಲಿಯಾ: ಪಾಂಡ್ಯ, ಧವನ್ ಹೋರಾಟ ವ್ಯರ್ಥ, ಮೊದಲ ಪಂದ್ಯದಲ್ಲಿ ಆಸಿಸ್‌ಗೆ ಗೆಲುವುಭಾರತ vs ಆಸ್ಟ್ರೇಲಿಯಾ: ಪಾಂಡ್ಯ, ಧವನ್ ಹೋರಾಟ ವ್ಯರ್ಥ, ಮೊದಲ ಪಂದ್ಯದಲ್ಲಿ ಆಸಿಸ್‌ಗೆ ಗೆಲುವು

ಹಾರ್ದಿಕ್ ಪಾಂಡ್ಯ ಅವರ ಇಂದಿನ ಇನ್ನಿಂಗ್ಸ್‌ ಬಗ್ಗೆ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯದಲ್ಲಿ 76 ಎಸೆತಗಳಲ್ಲಿ 90 ರನ್ ಬಾರಿಸುವುದರ ಜೊತೆಗೆ ಆರನೇ ಕ್ರಮಾಂಕಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

"ಈ ಹಿಂದೆ ಹಾರ್ದಿಕ್ ಪಾಂಡ್ಯ ಅವರನ್ನು ಸಂಪೂರ್ಣ ಬ್ಯಾಟ್ಸ್‌ಮನ್ ಆಗಿ ನೋಡಿಲ್ಲವಾದ ಕಾರಣ ಅವರ ಬ್ಯಾಟಿಂಗ್ ಬಗ್ಗೆ ಸಂಸಯವಿತ್ತು. ಆದರೆ ಇಂದಿನ ಬ್ಯಾಟಿಂಗ್ ಪ್ರದರ್ಶನದ ಬಳಿಕ ನನಗೆ ಸಾಕಷ್ಟು ಸ್ಪಷ್ಟತೆ ದೊರಕಿದೆ" ಎಂದು ಮಂಜ್ರೇಕರ್ ಹೇಳಿದ್ದಾರೆ.

"ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವ ರೀತಿಯಲ್ಲಿ ಸ್ಪಷ್ಟತೆಯಿತ್ತು ಹಾಗೂ ಆವರ ವಿಧಾನಕ್ಕೆ ಅರ್ಥವೂ ಇತ್ತು. ಹಾರ್ದಿಕ್ ಬ್ಯಾಟಿಂಗ್‌ನಿಂದಾಗಿ ನಾನು ಪ್ರಭಾವಿತನಾಗಿದ್ದೇನೆ. ನಾನು ಒಂದು ಸಂಗತಿಯನ್ನು ಹಂಚಿಕೊಳ್ಳಬೇಕು, ಹಾರ್ದಿಕ್ ಪಾಡ್ಯ ಅವರ ಈ ರೀತಿಯ ಆಟವನ್ನು ನೋಡಿ ನಾನು ಆಶ್ಚರ್ಯಗೊಂಡೆ. ಯಾಕೆಂದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಈ ರೀತಿಯ ಬ್ಯಾಟಿಂಗ್‌ಅನ್ನು ನಾನು ನೋಡಿರಲಿಲ್ಲ" ಎಂದು ಮಂಜ್ರೇಕರ್ ಹೇಳಿದ್ದಾರೆ.

Story first published: Friday, November 27, 2020, 21:18 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X