15ನೇ ಆವೃತ್ತಿಯಲ್ಲಿ ಹೊಸದಾಗಿ ಸೇರಿಕೊಂಡ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ನಾಯಕರಾಗಿ ಪಾದಾರ್ಪಣೆ ಮಾಡಿದ ಹಾರ್ದಿಕ ಪಾಂಡ್ಯ ಮುಂಬರುವ ದಿನಗಳಲ್ಲಿ ಭಾರತೀಯ ಟಿ-೨೦ ಪಂದ್ಯಗಳ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ರಾವಲ್ ಪಿಂಡಿ ಖ್ಯಾತಿಯ ಶೋಯಬ್ ಅಖ್ತರ ಹೇಳಿದ್ದಾರೆ.
ಲಕ್ನೋ, ಆರ್ಸಿಬಿ ಗೆದ್ದ ನಂತರ ಅಂಕಪಟ್ಟಿಯಲ್ಲಿ ಯಾರು ಟಾಪ್? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
ಈ ಆವೃತ್ತಿಯಲ್ಲಿ ಜಿಟಿ ತಂಡವನ್ನು ಮುನ್ನೆಡೆಸುತ್ತಿರುವ ಯಶಸ್ವಿ ನಾಯಕರಾಗಿ ಹೊರಹೊಮ್ಮಿರುವ ಹಾರ್ದಿಕ್ ಭವಿಷ್ಯದಲ್ಲಿ ಭಾರತದ ಟಿ 20 ಪಂದ್ಯಗಳ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹಾರ್ದಿಕ್ ಉತ್ತಮ ನಾಯಕ ಎಂದು ಸಾಬೀತುಪಡಿಸುತ್ತಿದ್ದಾರೆ, ತಂಡದಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವ ಮೂಲಕ ಆಟಗಾರರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಾರೆ, ತಂಡವನ್ನು ಜಯದ ಕಡೆಗೆ ಸಾಗಿಸಲು ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವನ್ನು ಹೊಂದಿದ್ದಾರೆ ಇದು ಯಶಸ್ವಿ ನಾಯಕನಿಗೆ ಇರಬೇಕಾದ ಮುಖ್ಯ ಅರ್ಹತೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಆಲ್ ರೌಂಡರ್ ಆಗಿರುವ ಹಾರ್ದಿಕ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚುತ್ತಿದ್ದಾರೆ. ತಮ್ಮ ಆಟದ ಮೇಲೆ ಎಂದಿಗೂ ಒತ್ತಡವನ್ನು ಹೇರಿಕೊಳ್ಳದೆ ಅದ್ಬುತವಾಗಿ ತಂಡವನ್ನು ಮುನ್ನಡೆಸುತ್ತಿರುವ ರೀತಿ, ಮೈದಾನದ ಒಳಗೆ ಮತ್ತು ಹೊರಗೆ ತಂಡದಲ್ಲಿ ವಾತಾವರಣ ಸೃಷ್ಟಿಸಿದ ರೀತಿ, ಇಲ್ಲಿಯವರೆಗೆ ಅವರು ಮಾಡಿರುವ ಸಾಧನೆ ಅದ್ಭುತವಾಗಿದೆ. ಈ ಮೂಲಕ ಗುಜರಾತ್ ತಂಡಕ್ಕೆ ಅತ್ಯುತ್ತಮ ನಾಯಕ ಲಭಿಸಿದಂತಾಗಿದೆ ಎಂದು ಹಾರ್ದಿಕ್ ಪಾಂಡ್ಯ ಅವರ ಬೆನ್ನು ತಟ್ಟಿದ್ದಾರೆ ಶೋಯಬ್ ಅಖ್ತರ್.
ಹಾರ್ದಿಕ ಪಾಂಡ್ಯ ನಾಯಕತ್ವದ ತಂಡವು ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಕಳೆದ ೫ ಮ್ಯಾಚ್ ಗಳಲ್ಲಿ ಕೇವಲ ಒಂದು ಸೋಲು ಅನುಭವಿಸಿ ನಾಲ್ಕು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಜಿಟಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರೆ ಹಾರ್ದಿಕ ಅವರ ಅದೃಷ್ಟದ ಬಾಗಿಲು ತರೆಯಲಿದೆ ಎಂದು ಹೇಳಿದ್ದಾರೆ.
RCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್ಸಿಬಿ
ಈವರೆಗೂ ಒಟ್ಟು 5 ಪಂದ್ಯಗಳಲ್ಲಿ 228 ರನ್ ಗಳಿಸಿದ್ದು, ನಾಲ್ಕು ವಿಕೆಟ್ ಗಳಿಸಿ ಯಶಸ್ವಿ ನಾಯಕರಾಗಿರುವ ಹಾರ್ದಿಕ ಪಾಂಡ್ಯ ಮುಂಬರುವ ದಿನಗಳಲ್ಲಿ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆಯನ್ನು ರೂಡಿಸಿಕೊಳ್ಳಬೇಕು, ಅವಕಾಶಗಳ ಸೂಕ್ತ ಬಳಕೆಯನ್ನು ಮಾಡಿಕೊಳ್ಳವ ಮೂಲಕ ಈ ಆವೃತ್ತಿಯಲ್ಲಿ ದಿಲ್ ಲಗಾಕೇ ಖೇಲೊ ಐಪಿಎಲ್ ಜಿತಾವೋ ಎಂದು ಶೋಯೆಬ್ ಶುಭ ಹಾರೈಸಿದ್ದಾರೆ.